ಉದಯಪುರ: ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ನಾಯಕಿ ನೂಪುರ್ ಶರ್ಮಾ ಪರ ಪೋಸ್ಟ್ ಹಾಕಿದ್ದ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಟೈಲರಿಂಗ್ ಕೆಲಸ ಮಾಡಿಕೊಂಡಿದ್ದ ಕನ್ನಯ್ಯ ಲಾಲ್ ಎಂತಾನನನ್ನು ದುಷ್ಕರ್ಮಿಗಳು ಶಿರಚ್ಛೇದ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಗೂ ಬೆದರಿಕೆ ಹಾಕದ್ದಾರೆ ಎಂದು ವರದಿಯಾಗಿದೆ.
ಬಟ್ಟೆ ಶಾಪ್ ಇಟ್ಟುಕೊಂಡಿದ್ದ ಕನ್ನಯ್ಯ ಲಾಲ್ ಎಂಬಾತನ ಬಳಿ ಬಂದ ದುಷ್ಕರ್ಮಿಗಳು ಬಟ್ಟೆ ಹೊಲಿಯಲು ಅಳತೆ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಈ ವೇಳೆ ಏಕಾಏಕಿ ಆತನ ಮೇಲೆ ಕತ್ತಿಯಿಂದ ದಾಳಿ ನಡೆಸಿ ಶಿರಚ್ಛೇದ ಮಾಡಿದ್ದಾರೆ. ಬಳಿಕ ಕತ್ತಿ ಝಳಪಿಸಿ ಎಚ್ಚರಿಕೆ ಸಂದೇಶ ನೀಡಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
#WATCH Two persons accused of the murder of a man in #Udaipur have been arrested, says Rajasthan CM Ashok Gehlot. pic.twitter.com/U9BU6AtoTx
— ANI MP/CG/Rajasthan (@ANI_MP_CG_RJ) June 28, 2022
ಇದನ್ನೂ ಓದಿ: ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ಮುಂದಿನ ಐದು ದಿನ ಭಾರೀ ಮಳೆ : IMD ಎಚ್ಚರಿಕೆ
ಪ್ರಧಾನಿ ಮೋದಿಗೆ ಬೆದರಿಕೆ
Both the accused of murder of a man in Udaipur arrested from Rajsamand. The investigation in this case will be done under the Case Officer Scheme and by ensuring speedy investigation the criminals will be punished severely in the court: Rajasthan CM pic.twitter.com/1D4h3RmBZM
— ANI MP/CG/Rajasthan (@ANI_MP_CG_RJ) June 28, 2022
ಕನ್ನಯ್ಯ ಲಾಲ್ ಹತ್ಯೆ ಮಾಡಿದ ಆರೋಪಿಗಳು ವಿಡಿಯೋ ಮೂಲಕ ಪ್ರಧಾನಿ ಮೋದಿಯವರಿಗೂ ಬೆದರಿಕೆ ಹಾಕಿದ್ದಾರೆ. ಮೋದಿ ಹಾಕಿರುವ ಬೆಂಕಿಯನ್ನು ನಾವು ಆರಿಸುತ್ತೇವೆ ಅಂತಾ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ಮಧ್ಯಾಹ್ನ 2.30ರ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಉದಯಪುರ್ ಎಸ್ಪಿ ಮನೋಜ್ ಕುಮಾರ್, ಆರೋಪಿಗಳನ್ನು ಗುರುತಿಸಲಾಗಿದೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಘಟನೆ ಕುರಿತು ಮಾತನಾಡಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ‘ಇದು ದುರಾದೃಷ್ಟಕರ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಈ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಡಿ. ಕಾನೂನು ಕೈಗೆತ್ತಿಕೊಳ್ಳುವ ಯಾವುದೇ ಪ್ರಯತ್ನ ಮಾಡಬೇಡಿ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ತರನ್ನು ಬಿಡುವ ಪ್ರಶ್ನೆಯೇ ಇಲ್ಲ’ವೆಂದು ಹೇಳಿದ್ದಾರೆ.
Rajasthan | Internet services temporarily suspended for the next 24 hours in Udaipur district, following the incident of murder of a man in the city. pic.twitter.com/7MAjZYKB1y
— ANI MP/CG/Rajasthan (@ANI_MP_CG_RJ) June 28, 2022
ಇದನ್ನೂ ಓದಿ: ಗುವಾಹಟಿ ಐಷಾರಾಮಿ ಹೋಟೆಲ್ನಲ್ಲಿ ʼಲುಡೋʼ ಆಡ್ತಿದ್ದಾರಂತೆ ಬಂಡಾಯ ಶಾಸಕರು!
ಘಟನೆ ಖಂಡಿಸಿ ಉದಯ್ಪುರದಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ರಾಜಸ್ಥಾನ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರವಾದಿ ಮಹಮ್ಮದ್ ವಿರುದ್ಧ ವಿವಾದಿತ ಹೇಳಿಕೆ ನೀಡಿದ್ದ ನೂಪುರ್ ಶರ್ಮಾಗೆ ಕನ್ನಯ್ ಲಾಲ್ ಬೆಂಬಲ ಸೂಚಿಸಿದ್ದ. ನೂಪುರ್ಗೆ ಬೆಂಬಲ ಸೂಚಿಸಿದ್ದ ಆತ ಹಾಕಿದ್ದ ಪೋಸ್ಟ್ನಿಂದ ಕೆರಳಿದ್ದ ಆರೋಪಿಗಳು ಬಟ್ಟೆ ಅಂಗಡಿಗೆ ನುಗ್ಗಿ ಬರ್ಬರ ಹತ್ಯೆ ಮಾಡಿದ್ದಾರೆ.
ಇನ್ನು ಕನ್ನಯ್ ಲಾಲ್ ಕೊಲೆ ಖಂಡಿಸಿ ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಇಂತಹ ಬೆದರಿಕೆ ಹಾಗೂ ಕೊಲೆಗಡುಕರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ