ಕಾಸರಗೋಡು: 31 ವರ್ಷದ ಅನಿವಾಸಿ ಭಾರತೀಯ (ಎನ್‌ಆರ್‌ಐ)ನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕಾಸರಗೋಡಿನ ಮುಗು ಗ್ರಾಮದ ಅಬೂಬಕ್ಕರ್ ಸಿದ್ದೀಕ್ ಪೈವಳಿಕೆ ಎಂಬವರನ್ನು ಅಪಹರಣ ಮಾಡಿ ಕೊಲೆ ಮಾಡಲಾಗಿತ್ತು.
ಇದನ್ನೂ ಓದಿ: ಅನ್ನ ತಿನ್ನುವ ಅಡ್ಡ ಪರಿಣಾಮ ತಪ್ಪಿಸಲು ಈ ರೀತಿ ಅಕ್ಕಿಯನ್ನು ಬೇಯಿಸಿ
ಸಂಘಟಿತ ಗ್ಯಾಂಗ್‌ವೊಂದು ಈ ಕೃತ್ಯ ಎಸಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಪೈವಳಿಕೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸಿದ್ದೀಕ್‌ರನ್ನು ಅಪಹರಿಸಿದ ದರೋಡೆಕೋರರು, ಆತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಮೃತದೇಹ ಪತ್ತೆಯಾದ ಸಂದರ್ಭದಲ್ಲಿ ಶವದ ಮೇಲೆ ಗಾಯದ ಗುರುತುಗಳು ಕಂಡುಬಂದಿದ್ದವು.
ಸಿದ್ದೀಕ್ ಅವರು, ಮಂಜೇಶ್ವರ ಮೂಲದವರೊಂದಿಗೆ ವಿದೇಶದಲ್ಲಿ ಕೆಲವು ಹಣಕಾಸಿನ ವ್ಯವಹಾರಗಳ ಬಗ್ಗೆ ಜಗಳವಾಡಿದ್ದು, ಇದು ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರ ಪ್ರಾಥಮಿಕ ಮಾಹಿತಿ ಹೇಳುತ್ತಿದೆ. ಮಂಜೇಶ್ವರ ಮೂಲದವರೇ ಈ ಕೊಲೆಗೆ ಸುಪಾರಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಶಂಕಿತ ವ್ಯಕ್ತಿಗಳು ಸಿದ್ದಿಕ್‌ರ ಮೃತದೇಹವನ್ನು ತಲಪಾಡಿ ಬಳಿ ಬಿಟ್ಟು ಪರಾರಿಯಾಗಿದ್ದರು. ಆದರೆ ಅದಕ್ಕೂ ಮುನ್ನ ಕಿರಾತಕರು ಸಿದ್ಧೀಕ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅದಾಗಲೇ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಧದಲ್ಲೇ ಮೃತದೇಹವನ್ನು ಬಿಟ್ಟುಹೋಗಿದ್ದರು. ಸದ್ಯ ವಾಹನದ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಈ ರಾಶಿಯ ಜನರಿಗೆ ಜುಲೈನಲ್ಲಿ ಲಕ್ಷ್ಮೀ ಕಟಾಕ್ಷ: ಯಶಸ್ಸು ಇವರ ಮನೆ ಬಾಗಿಲಿಗೆ ಬರುತ್ತೆ
ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಯಿಂದ ಆರೋಪಿಗಳು ಮತ್ತು ವಾಹನವನ್ನು ಗುರುತಿಸಲಾಗಿದೆ. ಇಬ್ಬರು ಉಪ ಪೊಲೀಸ್ ವರಿಷ್ಠಾಧಿಕಾರಿಗಳ (ಡಿವೈಎಸ್ಪಿ) ನೇತೃತ್ವದಲ್ಲಿ 16 ಸದಸ್ಯರ ಪೊಲೀಸ್ ತಂಡವು ಪ್ರಕರಣದ ತನಿಖೆ ನಡೆಸುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ