ಚುನಾವಣೆ ರಣಾಂಗಣದಲ್ಲಿ ಬೊಮ್ಮಾಯಿ ಆರ್ಭಟ. ನಾನೇ ಮುಂದಿನ ಸಿಎಂ ಎಂದ ಬಸವರಾಜ ಬೊಮ್ಮಾಯಿ. ನಗುನಗುತ್ತಲೇ ಸಚಿವ ಮುರುಗೇಶ್ ನಿರಾಣಿ ಕಾಲೆಳೆದ ಸಿಎಂ. ಬೀಳಗಿ ಕ್ಷೇತ್ರದಲ್ಲಿ ನೂರಾರು ಅಭಿವೃದ್ಧಿ ಕಾರ್ಯಗಳು ಆಗಿವೆ. ಆದರೆ ಮುರುಗೇಶ್ ನಿರಾಣಿ ನನ್ನನ್ನೇ ಕರೆದುಕೊಂಡು ಹೋಗಿಲ್ಲ. ನನ್ನನ್ನು ಕರೆದುಕೊಂಡು ಹೋದರೆ ಎಲ್ಲವೂ ಗೊತ್ತಾಗುತ್ತೆ. ಚಿಂತೆ ಮಾಡಬೇಡಿ, ನಾನು ಮತ್ತೆ ಸಿಎಂ ಆಗಿ ಬೀಳಗಿಗೆ ಬರ್ತೀನಿ ಎಂದು ಬಾಗಲಕೋಟೆಯ ಮುಧೋಳದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ರು.
ಚುನಾವಣೆ ಹೊತ್ತಲ್ಲಿ ಬಾಗಲಕೋಟೆಯಲ್ಲಿ ಗಿಫ್ಟ್ ರಾಜಕೀಯ ಜೋರಾಗಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಮತಕ್ಷೇತ್ರದ ಗಲಗಲಿಯಲ್ಲಿ ಸಚಿವ ನಿರಾಣಿ ಬೆಂಬಲಿಗರು ಹಂಚಿದ ಸಕ್ಕರೆಯನ್ನು ಮಹಿಳೆಯೊಬ್ಬರು ತಿರಸ್ಕರಿಸಿದ್ದಾರೆ..
ಶಾಲಾ ಮಕ್ಕಳಿಗೆ ಅಲಾರಂ ಹಂಚಿಕೆ ವಿಚಾರ. ಪಕ್ಷದ ಚಿಹ್ನೆ ಬಳಸಿದ್ದು ನಿಜ.. ಕೊಟ್ಟದ್ದು ನಿಜ. ಯಾವುದೇ ಶಿಕ್ಷರರು ಆಗಲಿ, ಬಿಇಓ ಬಳಸಿಕೊಂಡಿಲ್ಲ. ಆರೋಪ ಸತ್ಯಕ್ಕೆ ದೂರವಾದ ಸಂಗತಿ ಎಂದು ಬಾಗಲಕೋಟೆಯಲ್ಲಿ ಸಚಿವ ಮುರುಗೇಶ ನಿರಾಣಿ ಹೇಳಿದ್ರು.
ಸಚಿವ ಮುರುಗೇಶ್ ನಿರಾಣಿ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಮಾತಿನ ಫೈಟ್ ತಾರಕಕ್ಕೇರುತ್ತಿದೆ. ಈ ನಡುವೆ ನಿರಾಣಿ ಸಹೋದರ ಎಂಟ್ರಿ ಕೊಟ್ಟಿದ್ದು, ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಯತ್ನಾಳ್ ಕಟು ಮಾತಿನಿಂದ ನಿರಾಣಿ ಸಹೋದರ ಸಂಗಮೇಶ್ ನಿರಾಣಿಯವರನ್ನು ಕೆರಳಿಸಿದ್ದು, ಯತ್ನಾಳ್ ವಿರುದ್ಧ ಗರಂ ಆಗಿದ್ದಾರೆ.
ಸಮಾಜದ ಒಬ್ಬ ಸಚಿವರಿಂದ ಮೀಸಲಾತಿ ತಪ್ಪಿತ್ತು ಎಂಬ ಪಂಚಮಸಾಲಿ ಶ್ರೀಗಳ ಹೇಳಿಕೆಗೆ ನಿರಾಣಿ ಫುಲ್ ಗರಂ. ನಾನೆಲ್ಲಾದ್ರೂ ಈ ರೀತಿ ಹೇಳಿದ್ರೆ ಇವತ್ತೇ ರಾಜೀನಾಮೆ. ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ಎಂದ ಮುರುಗೇಶ್ ನಿರಾಣಿ.
ಪಂಚಮಸಾಲಿ 2-A ಮೀಸಲಾತಿ ಹೋರಾಟ ವಿಚಾರ. ಪಂಚಮಸಾಲಿ ಸಮುದಾಯದ ಮುಖಂಡರ ಸಭೆ. ಸಚಿವ ಮುರುಗೇಶ್ ನಿರಾಣಿ ನಿವಾಸದಲ್ಲಿ ಸಭೆ. ಸಮುದಾಯದ ಮತ್ತೊಂದು ಬಣದಿಂದ ಸಭೆ. ಪಂಚಮಸಾಲಿ ಒಕ್ಕೂಟದ ಜಿಲ್ಲಾಧ್ಯಕ್ಷರು ಭಾಗಿ.
ಪಂಚಮಸಾಲಿ ಎರಡಲ್ಲ ಮೂರು ಪೀಠಗಳನ್ನು ಮಾಡಿದ್ದು ನಾನೇ. ಸಮಸ್ತ ವೀರಶೈವ ಲಿಂಗಾಯತರಿಗೆ 2ಎ ಮೀಸಲಾತಿ ಅನ್ವಯವಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಕೊಪ್ಪಳದಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿ ಹೇಳಿದರು.
ಜಾಗತಿಕ ಬಂಡವಾಳ ಹೂಡಿಕೆ ಸಂಬಂಧ ಪ್ರಸ್ತುತ ಅಮೆರಿಕಾ ಪ್ರವಾಸದಲ್ಲಿರುವ ನಿರಾಣಿ ಅವರು, ಕಲಬುರಗಿ ಜಿಲ್ಲಾಧಿಕಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಭಾನುವಾರ ಸಂಜೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಜಿಲ್ಲೆಯ ಸಮಗ್ರ ಚಿತ್ರಣ ಮತ್ತು ಪ್ರವಾಹ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡು ಕೆಲವು ಸೂಚನೆಗಳನ್ನು ನೀಡಿದ್ದಾರೆ.
ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಸಚಿವ ಡಾ.ಮುರುಗೇಶ್ ಆರ್ ನಿರಾಣಿ ಅವರು ಶನಿವಾರ ಸಂಜೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯೆಲ್ ಅವರೊಂದಿಗೆ ಉದ್ಯಮ ಸಂವಾದ ಸಭೆಯಲ್ಲಿ ಭಾಗವಹಿಸಿದರು.
ಅವರಾಗೇ ನಮ್ಮ ಬಳಿ ಬಂದ್ರೆ ಸುಮ್ಮನೆ ಕೂರಲು ಬಿಜೆಪಿ ಸನ್ಯಾಸಿಗಳ ಪಕ್ಷ ಅಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.. ಮಹಾರಾಷ್ಟ್ರ ರಾಜಕೀಯ ಅಸ್ಥಿರತೆ ವಿಚಾರ ಪ್ರತಿಕ್ರಿಯೆ ನೀಡಿದ ನಿರಾಣಿ, ಕಾಂಗ್ರೆಸ್, ಎನ್ಸಿಪಿ, ಶಿವಸೇನೆ ಮೂರು ಸೇರಿ ಸರ್ಕಾರ ಮಾಡಿರುವುದೇ ಒಂದು ಅನೈತಿಕ. ನಿಶ್ಚಿತವಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ನಿರಾಣಿ ಹೇಳಿದ್ದಾರೆ
ಜೆಡಿಎಸ್ನ ಸಿ.ಎನ್.ಮಂಜೇಗೌಡರಪ್ರಶ್ನೆಗೆ ಉತ್ತರಿಸಿದ ಸಚಿವರು, ಕೈಗಾರಿಕಾ ಟೌನ್ಶಿಪ್ಗಳ ಬಳಿಯೇ ಜನವಸತಿ ಪ್ರದೇಶಗಳನ್ನು ನಿರ್ಮಾಣ ಮಾಡುವ ಮೂಲಕ ವಾಕ್ ಟು ವರ್ಕ್ಗೆ ಆದ್ಯತೆ ನೀಡಲಾಗುವುದು ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.
Minister Murugesh Nirani: 2023 ರ ವರೆಗೂ ಬೊಮ್ಮಾಯಿ ಸಿಎಂ ಆಗಿರುತ್ತಾರೆ. ಬೊಮ್ಮಾಯಿ ಬಹಳ ಉತ್ತಮ ಆಡಳಿತ ಕೊಡುತ್ತಿದ್ದಾರೆ ಎಂದು ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ ನೀಡಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.