ಸಮಸ್ತ ವೀರಶೈವ ಲಿಂಗಾಯತರಿಗೆ 2ಎ ಮೀಸಲಾತಿ: ಸಚಿವ ಮುರುಗೇಶ್ ನಿರಾಣಿ

ಪಂಚಮಸಾಲಿ ಎರಡಲ್ಲ ಮೂರು ಪೀಠಗಳನ್ನು ಮಾಡಿದ್ದು ನಾನೇ. ಸಮಸ್ತ ವೀರಶೈವ ಲಿಂಗಾಯತರಿಗೆ 2ಎ ಮೀಸಲಾತಿ ಅನ್ವಯವಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಕೊಪ್ಪಳದಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿ ಹೇಳಿದರು.

Written by - Prashobh Devanahalli | Edited by - Chetana Devarmani | Last Updated : Dec 3, 2022, 06:32 PM IST
  • ಪಂಚಮಸಾಲಿ ಎರಡಲ್ಲ ಮೂರು ಪೀಠಗಳನ್ನು ಮಾಡಿದ್ದು ನಾನೇ
  • ಸಮಸ್ತ ವೀರಶೈವ ಲಿಂಗಾಯತರಿಗೆ 2ಎ ಮೀಸಲಾತಿ ಅನ್ವಯವಾಗಬೇಕು
  • ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿ ಹೇಳಿಕೆ
ಸಮಸ್ತ ವೀರಶೈವ ಲಿಂಗಾಯತರಿಗೆ 2ಎ ಮೀಸಲಾತಿ: ಸಚಿವ ಮುರುಗೇಶ್ ನಿರಾಣಿ title=
ಮುರುಗೇಶ ನಿರಾಣಿ

ಕೊಪ್ಪಳ : ಪಂಚಮಸಾಲಿ ಎರಡಲ್ಲ ಮೂರು ಪೀಠಗಳನ್ನು ಮಾಡಿದ್ದು ನಾನೇ. ಸಮಸ್ತ ವೀರಶೈವ ಲಿಂಗಾಯತರಿಗೆ 2ಎ ಮೀಸಲಾತಿ ಅನ್ವಯವಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಕೊಪ್ಪಳದಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿ ಹೇಳಿದರು. ಕೆಲವು ಸಣ್ಣ ವೈಮನಸ್ಸುಗಳು ಇರೋದರಿಂದ ವಿರೋಧಿಗಳು ನಮ್ಮನ್ನು ಪಂಚಮಸಾಲಿ ವಿರೊಧಿಗಳಂತೆ ಬಿಂಬಿಸುತ್ತಿದ್ದಾರೆ. ಸಮಸ್ತ ಲಿಂಗಾಯತ ಸಮುದಾಯಕ್ಕೆ ಈ ಮೀಸಲಾತಿ ಸಿಗಬೇಕು ಎನ್ನುವುದು ನನ್ನ ಉದ್ದೇಶ ಎಂದರು. 

ಇದನ್ನೂ ಓದಿ :  ಚಿರತೆ ದಾಳಿಗೆ ಮೃತಪಟ್ಟ ಯುವತಿ ಕುಟುಂಬಕ್ಕೆ 15 ಲಕ್ಷ ಪರಿಹಾರ ಘೋಷಿಸಿದ ಸಿಎಂ ಬೊಮ್ಮಾಯಿ

ಕೇವಲ ಪಂಚಮಸಾಲಿಗೆ ಮಾತ್ರ ಬೇಡ ಎಂದಿರೋದಕ್ಕೆ ನನ್ನ ವಿರೋಧ ಮಾಡ್ತಾಯಿದ್ದಾರೆ. ಸಮಾಜಕ್ಕೆ ಆ ಇಬ್ಬರ ಕೊಡುಗೆ ಏನೂ, ನನ್ನ ಕೊಡುಗೆ ಏನು ಎನ್ನುವುದು ಜನರಿಗೆ ಗೊತ್ತಿದೆ ಎಂದು ಪರೋಕ್ಷವಾಗಿ ಬಿಜೆಪಿ ಶಾಸಕ ಬಸಣ್ಣ ಗೌಡ ಯತ್ನಾಳ್, ಕಾಂಗ್ರೆಸ್ ನಾಯಕ ವಿಜಯಾನಂದ ಕಾಶಪ್ಪನವರ್ ವಿರುದ್ದ ವಾಗ್ದಾಳಿ ನಡೆಸಿದರು. ಎರಡು ಪೀಠಗಳನ್ನ ಒಂದು ಮಾಡಬೇಕು ಎಂದು ಪ್ರಯತ್ನ ಮಾಡಿದ್ದೆ ನಾನು, 100% ಸಮಸ್ತ ವೀರಶೈವ ಲಿಂಗಾಯತ ಸಮುದಾಯಕ್ಕೆ 2 ಎ ಮೀಸಲಾತಿ ಸಿಗುತ್ತದೆ ಎಂದರು.

ನನ್ನ ಮಗನಿಗೆ ರಾಜಕಾರಣಕ್ಕೆ ಬರುವ ಆಸಕ್ತಿಯಿಲ್ಲ. ಯಾವುದೇ ಕಾರಣಕ್ಕೂ ನನ್ನ ಮಗ ರಾಜಕಾರಣಕ್ಕೆ ಬರುವುದಿಲ್ಲ ಎಂದು ಬಾಗಲಕೋಟೆಯಲ್ಲಿ ನಿರಾಣಿ ಅವರು ಸ್ಪಷ್ಟಪಡಿಸಿದರು.  ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ನಮ್ಮ ಕುಟುಂಬದಲ್ಲಿ ಮುರುಗೇಶ್ ನಿರಾಣಿ ಮತ್ತು ಹನಮಂತ ನಿರಾಣಿ ಮಾತ್ರ ರಾಜಕೀಯದಲ್ಲಿ ಇರುತ್ತಾರೆ. ನಮ್ಮಿಬ್ಬರನ್ನು ಬಿಟ್ಟು ಮೂರನೇಯವರು ಸ್ಪರ್ಧೆ ಮಾಡುವುದಿಲ್ಲ. ಒಂದು ವೇಳೆ ಮನೆಯಲ್ಲಿ ಯಾರಾದರೂ ಸ್ಪರ್ಧೆ ಮಾಡ್ತೇನೆ ಅಂದ್ರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದುಹೇಳಿದರು. 

ಇದನ್ನೂ ಓದಿ : ISRO ದಲ್ಲಿ 68 ಹುದ್ದೆಗಳಿಗೆ ಅರ್ಜಿ : ಇಲ್ಲಿದೆ ಸಂಪೂರ್ಣ ಮಾಹಿತಿ 

ನನಗೂ ಇಪ್ಪತ್ತು ವರ್ಷ ಜನ ಆಶೀರ್ವಾದ ಮಾಡಿದ್ದಾರೆ. ನಾನು ಫ್ಯಾಕ್ಟರಿ ನೋಡಿಕೊಂಡು ಹೋಗುತ್ತೇನೆ ಎಂದು ಹೇಳಿದರು. ಸಹೋದರ ಸಂಗಮೇಶ್ ನಿರಾಣಿ ಬೇಕಿದ್ರೆ ಸ್ಪರ್ಧೆ ಮಾಡಲಿ, ನನ್ನ ಮಗ ಮಾತ್ರ ರಾಜಕಾರಣಕ್ಕೆ ಬರಲ್ಲ. ದೇಶ, ವಿದೇಶಗಳಲ್ಲಿ ನನ್ನ ಮಗ ಕೈಗಾರಿಕೋದ್ಯಮಗಳ ಎದುರು, ವಿದ್ಯಾರ್ಥಿಗಳ ಎದುರು ಸ್ಪೀಚ್ ಮಾಡ್ತಾನೆ. ಅವನಿಗೆ ಒಂದು ಟಾರ್ಗೆಟ್ ಇದೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News