ಅಪ್ಪು-ಅಂಬಿ ಅಭಿಮಾನಕ್ಕೆ ಸಾಕ್ಷಿಯಾಯ್ತು ಮದ್ದೂರಿನ ಡಿ.ಹೊಸೂರು ಗ್ರಾಮ

 ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಡಿ.ಹೊಸೂರು ಗ್ರಾಮದಲ್ಲಿ ಮಂಡ್ಯದ ಗಂಡು ದಿ.ಅಂಬರೀಶ್ ಮತ್ತು‌ ದಿ‌‌.ಪುನೀತ್ ರಾಜ್ ಕುಮಾರ್ ರವರ ಅಭಿಮಾನಿಗಳು ತಮ್ಮ ನೆಚ್ಚಿನ‌ ಆರಾಧ್ಯ ನಟರಿಬ್ಬರ ಮೇಲಿನ ಅಭಿಮಾನಕ್ಕೆ ತಮ್ಮೂರಿನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಗುಡಿಯೊಂದನ್ನ ನಿರ್ಮಿಸಿದ್ದಾರೆ.

Written by - Ranjitha R K | Last Updated : Nov 24, 2022, 03:29 PM IST
  • ಸಕ್ಕರೆನಾಡು ಮಂಡ್ಯ ಜಿಲ್ಲೆಯ ಜನರು ಹೃದಯ ಶ್ರೀಮಂತಿಕೆ ಉಳ್ಳವರು.
  • ಅಂಬರೀಶ್, ಪುನೀತ್ ಗೆ ಗುಡಿ ಕಟ್ಟಿ ಪೂಜೆಗೆ ನಿರ್ಧಾರ
  • ಸಂಜೆ ಇಬ್ಬರು ನಟರ ಪುತ್ಥಳಿ ಅನಾವರಣ
ಅಪ್ಪು-ಅಂಬಿ ಅಭಿಮಾನಕ್ಕೆ ಸಾಕ್ಷಿಯಾಯ್ತು ಮದ್ದೂರಿನ ಡಿ.ಹೊಸೂರು ಗ್ರಾಮ title=

ಮಂಡ್ಯ : ಸಕ್ಕರೆನಾಡು ಮಂಡ್ಯ ಜಿಲ್ಲೆಯ ಜನರು  ಹೃದಯ ಶ್ರೀಮಂತಿಕೆ ಉಳ್ಳವರು. ಅದರಲ್ಲೂ ನೆಚ್ಚಿನ ಚಿತ್ರನಟರನ್ನು ಅಭಿಮಾನಿಸೋ ಸಹೃದಯಿಗಳು. ಇದಕ್ಕೆ ಸಾಕ್ಷಿ ಮಂಡ್ಯದ ಗಂಡು ದಿವಂಗತ ಅಂಬರೀಶ್ ಹಾಗೂ ದಿ.ಪುನೀತ್ ಮೃತರಾದಾಗ ಜಿಲ್ಲೆಯ ಜನರು ಅವರ ಮೇಲಿನ ಅಭಿಮಾನಕ್ಕೆ ಏನೆಲ್ಲ‌ ಕೆಲಸಗಳು ಮಾಡಿದ್ರು.ತಮ್ಮ ಅಭಿಮಾನವನ್ನು‌ ಹೇಗೆಲ್ಲ ತೋರಿಸಿದ್ರು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಇದರ ನಡುವೆ ಮಂಡ್ಯದ ಮದ್ದೂರು ತಾಲೂಕಿನ ಡಿ.ಹೊಸೂರು ಗ್ರಾಮದಲ್ಲಿ ಅವರಿಬ್ಬರ ಅಭಿಮಾನಿಗಳು ಆ ದಿವಂಗತ ನಟರಿಬ್ಬರಿಗೆ ಗುಡಿ ಕಟ್ಟಿ ಅವರಿಬ್ಬರ ಪುತ್ಥಳಿ ಕೂರಿಸಿ ಪ್ರತಿನಿತ್ಯ ಪೂಜೆಗೆ ನಿರ್ಧರಿಸಿದ್ದಾರೆ‌.

ಹೌದು! ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಡಿ.ಹೊಸೂರು  ಗ್ರಾಮದಲ್ಲಿ ಮಂಡ್ಯದ ಗಂಡು ದಿ.ಅಂಬರೀಶ್ ಮತ್ತು‌ ದಿ‌‌.ಪುನೀತ್ ರಾಜ್ ಕುಮಾರ್ ರವರ ಅಭಿಮಾನಿಗಳು ತಮ್ಮ ನೆಚ್ಚಿನ‌ ಆರಾಧ್ಯ ನಟರಿಬ್ಬರ ಮೇಲಿನ ಅಭಿಮಾನಕ್ಕೆ ತಮ್ಮೂರಿನಲ್ಲಿಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಗುಡಿಯೊಂದನ್ನ ನಿರ್ಮಿಸಿದ್ದಾರೆ.ಈ ಗುಡಿಗೆ ಅಪ್ಪು- ಅಂಬಿ ಅರಮನೆ ಎಂದು ಹೆಸರಿಟ್ಟಿದ್ದಾರೆ. ಅಲ್ಲದೆ, ಈ ಗುಡಿಯಲ್ಲಿ  ಈ ಇಬ್ಬರು ನಟರ ಕಂಚಿನ ಪ್ರತಿಮೆಯನ್ನು ಪ್ರತಿಷ್ಟಾಪಿಸಲು ಮುಂದಾಗಿದ್ದಾರೆ. ಇದಕ್ಕಾಗಿ  ಸುಮಾರು 12 ಲಕ್ಷ ರೂ ವೆಚ್ಚದಲ್ಲಿ ಅಂಬಿ ಮತ್ತು ಅಪ್ಪುವಿನ ಕಂಚಿನ ಪುತ್ಥಳಿಗಳನ್ನು ಮಾಡಿಸಿದ್ದು ಅಂಬಿ ಯ 4 ನೇ ವರ್ಷದ ಪುಣ್ಯ ಸ್ಮರಣೆಯ ದಿನವಾದ ಇಂದು ಈ ಪುತ್ಥಳಿಗಳನ್ನು ಅನಾವರಣಗೊಳಿಸಲು ಸಿದ್ದತೆ ಮಾಡಿಕೊಂಡಿ ದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬಾರದೆಂದು ಜನರು ತೀರ್ಮಾನಿಸಿದ್ದಾರೆ: ಸಿಎಂ ಬೊಮ್ಮಾಯಿ

ಇನ್ನು ಗ್ರಾಮದಲ್ಲಿ ನಿರ್ಮಿಸಲಾಗಿರುವ ಈ ಅಪ್ಪು-ಅಂಬಿ ಅರಮನೆಯ ಈ ಗುಡಿ  ಲೋಕಾರ್ಪಣೆಗೊಳಿಸಲು ಸಕಲ ಸಿದ್ದತೆ  ನಡೆಸಲಾಗಿದೆ. ಇಂದು ದಿವಂಗತ ಅಂಬರೀಶ್ ರವರ 4 ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಈ ಅಪ್ಪು-ಅಂಬಿ ಗುಡಿಯನ್ನು ಲೋಕಾರ್ಪಣೆ ಮಾಡಿಸಲು ಮುಂದಾಗಿದ್ದಾರೆ. ವಿಶೇಷ ಅಂದ್ರೆ ಈ ಎರಡು ಪುತ್ಥಳಿಗಳ ಲೋಕಾರ್ಪಣೆಯನ್ನು ದಿವಂಗತ ನಟರ ಪತ್ನಿಯರೇ ಉದ್ಘಾಟನೆ ಮಾಡುತ್ತಿರುವುದು.  ಸಂಜೆ 6 ಗಂಟೆಗೆ ಈ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಸಂಸದೆ ಸುಮಲತಾ ತಮ್ಮ ಪತಿಯ ಪುತ್ತಳಿಯನ್ನು ಲೋಕಾರ್ಪಣೆಗೊಳಿಸಿದರೆ, ಪುನೀತ್ ಪತ್ನಿ ಅಶ್ಚಿನಿ ಪುನೀತ್ ಅಪ್ಪು ಪುತ್ಥಳಿಯನ್ನು ಅನಾವರಣ ಮಾಡಲಿದ್ದಾರೆಂದು ಗ್ರಾಮದ ಅಭಿಮಾನಿ ಯುವಕ ಸಂಘದವರು ತಿಳಿಸಿದ್ದಾರೆ.

ಇದನ್ನೂ ಓದಿ : ರಾಜಧಾನಿಯ ದಕ್ಷಿಣ ವಲಯದ ಬಹುತೇಕ ರಸ್ತೆಗುಂಡಿ ಕಾಮಗಾರಿ ಕಂಪ್ಲೀಟ್..!

ಒಟ್ಟಾರೆ ಅಪ್ಪುಮತ್ತು ಅಂಬಿ ಮೇಲಿನ‌ ಅಭಿಮಾನಕ್ಕೆ ಈ ಗ್ರಾಮದ ಯುವಕರು ಮತ್ತು ಗ್ರಾಮಸ್ಥರು ಇಬ್ಬರು ನಟರ ಹೆಸರಲ್ಲಿ ಗುಡಿ ಕಟ್ಟಿ ಅಭಿಮಾನ ಮೆರೆದಿದ್ದಾರೆ. ಅಲ್ಲದೆ ಆ ಗುಡಿಯಲ್ಲಿ ಆ ಇಬ್ಬರು ನಟರ ಪುತ್ಥಳಿ ಕೂರಿಸಿ ಆರಾಧಿಸಲು ಮುಂದಾಗಿರುವ ಈ ಗ್ರಾಮಸ್ಥರ ಅಭಿಮಾನ ಮೆಚ್ಚಲೇಬೇಕಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News