ದೇವಾಲಯದ ಪೂಜೆ ಸಮಯಕ್ಕೆ ಬಂದು ಪ್ರಸಾದ ಸ್ವೀಕರಿಸೋ ಕೋತಿ!

ದೇವಾಲಯದ ಪೂಜೆ ಸಮಯಕ್ಕೆ ಸರಿಯಾಗಿ ಆಗಮಿಸಿ ಪ್ರಸಾದ ಸ್ವೀಕರಿಸುವ ಕೋತಿಯೊಂದರ ಈಗ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಪೂಜೆ ಮಾಡಿ ಮಂಗಳಾರತಿ ನೆರವೇರಿದ ನಂತರ ದೇವಾಲಯದ ಗರ್ಭಗುಡಿಗೆ ತೆರಳಿ ಪ್ರಸಾದ ತಿನ್ನುತ್ತಂತೆ. 

Written by - Chetana Devarmani | Last Updated : Nov 12, 2022, 05:36 PM IST
  • ದೇವಾಲಯದ ಪೂಜೆ ಸಮಯಕ್ಕೆ ಬಂದು ಪ್ರಸಾದ ಸ್ವೀಕರಿಸೋ ಕೋತಿ
  • ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿರುವ ಹೊಳೆ ಆಂಜನೇಯಸ್ವಾಮಿ ದೇವಾಲಯ
  • ಕಳೆದ ಹಲವು ದಿನಗಳಿಂದಲೂ ದೇವಾಲಯದ ಆವರಣದಲ್ಲೇ ನೆಲೆಸಿರುವ ವಾನರ
ದೇವಾಲಯದ ಪೂಜೆ ಸಮಯಕ್ಕೆ ಬಂದು ಪ್ರಸಾದ ಸ್ವೀಕರಿಸೋ ಕೋತಿ! title=
ಕೋತಿ

ಮಂಡ್ಯ: ಮಂಡ್ಯ ಜಿಲ್ಲೆಯ ಪ್ರಸಿದ್ದ ದೇಗುಲವಾದ ಮದ್ದೂರಿನ ಹೊಳೆ ಆಂಜನೇಯ ದೇಗುಲದಲ್ಲಿ ವಾನರವೊಂದು ದಿನನಿತ್ಯ 
ದೇಗುಲಕ್ಕೆ ಆಗಮಿಸಿ ದೇವರಿಗೆ ಕೈ ಮುಗಿದು ಪ್ರಸಾದ ಸ್ವೀಕರಿಸಿ ದೇಗುಲದಲ್ಲಿನ ಆಕಳಿನೊಂದಿಗೆ ಜೊತೆ ಅನ್ಯೋನ್ಯತೆ ಬೆಳೆಸಿ ಕೊಂಡ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ದೇವಾಲಯದ ಪೂಜೆ ಸಮಯಕ್ಕೆ ಸರಿಯಾಗಿ ಆಗಮಿಸಿ ಪ್ರಸಾದ ಸ್ವೀಕರಿಸುವ ಕೋತಿಯೊಂದರ ಈಗ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿರುವ ಹೊಳೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಅಚ್ಚರಿಯ ಘಟನೆ ನಡೆಯುತ್ತಿದೆ. 

ಇದನ್ನೂ ಓದಿ : ಗಮನಸೆಳೆಯುತ್ತಿರುವ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರ.. ಮೇಕಿಂಗ್ ಫೋಟೋಸ್‌ ಇಲ್ಲಿವೆ

ಮದ್ದೂರು ಪಟ್ಟಣದ ಹೊಳೆ ಆಂಜನೇಯ ದೇಗುಲ ದಲ್ಲಿ ಕಳೆದ ಒಂದು ತಿಂಗಳಿನಿಂದ ದೇವಾಲಯದ ಪೂಜೆ ಸಮ ಯಕ್ಕೆ ವಾನರವೊಂದು ಆಗಮಿಸುತ್ತಿದೆ.ಅಲ್ದೆ ಪೂಜೆ ಬಳಿಕ ದೇ ವರನ್ನು ನಮಸ್ಕರಿಸಿ ಪ್ರಸಾದ ಸ್ವೀಕರಿಸಿ ಅಚ್ಚರಿಸಿ‌ ಮೂಡಿಸುತ್ತಿ ದೆ.ದೇವಾಲಯದ ಆವರಣದಲ್ಲಿ ಕಳೆದ ಒಂದು ತಿಂಗಳಿನಿಂದ ಇದು ವಾಸವಾಗಿದ್ದು ಈ ವಾನರ ಎಲ್ಲಿಂದ ಬಂತು ಅನ್ನೋದು ಕೂಡ ಅಚ್ಚರಿಯಾಗಿದೆ.ದೇಗುಲದಲ್ಲಿ ಪೂಜೆ ವೇಳೆಗೆ ಸರಿಯಾಗಿ ಹಾಜರಾಗುವ ಈ ವಾನರ  ದೇವರ ಮುಂದೆ ಕುಅನ್ನುತ್ತಿದ್ದಾರೆ.
ನನಾಗಿ ಕುಳಿತು ಪೂಜೆ ಮುಗಿದ ಬಳಿಕ ಮೂಲ ವಿಗ್ರಹದ ಬಳಿ ತೆರಳಿ ದೇವರನ್ನು‌ ಮುಟ್ಟಿ ನಮಸ್ಕರಿಸಿ ದೇವರ ಬಳಿ ಇಟ್ಟಿದ್ದ ಪ್ರ ಸಾದ ಸೇವಿಸಿ ತೆರಳುತ್ತಿದೆ.

ಇದನ್ನೂ ಓದಿ : ಅಸ್ತಿತ್ವದ ಭಯದಿಂದ ಎಚ್.ಡಿ.ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆಯೇ?: ಬಿಜೆಪಿ

ಇನ್ನು ಈ ವಾನರ ಈ ದೇವಾಲಯದ ಆವರಣಲ್ಲೇ ಬೀಡು ಬಿಟ್ಟಿದ್ದು ಅಲ್ಲದೆ ಈ ದೇವಾಲಯದ ಗೋ ಶಾಲೆಯಲ್ಲಿರುವ ಆಕಳು ಹಾಗೂ ಕರುವಿನೊಂದಿಗೆ ಅನ್ಯೋನ್ಯತೆ ಬೆಳೆಸಿಕೊಂಡು ಅದರ ಜೊತೆ ಚಿನ್ನಾಟವಾಡ್ತಾ ಅದನ್ನು ಕಾವಲು ಕಾಯುತ್ತಾ ಅವುಗಳ ಬಳಿಯ ಮಲಗಿನಿದ್ರಿಸುತ್ತಿದೆ.ಅಲ್ಲದೆ ರಾತ್ರಿ ವೇಳೆ ದೇಗುಲವನ್ನು ಹಾಗು ಈ ಆಕಳನ್ನು ಕೂಡ ಕಾವಲು ಕಾಯುತ್ತಿದೆ. ಇದನ್ನು‌ ಕಂ ಡು ದೇಗುಲದ ಅರ್ಚಕ ಕೂಡ ಅಚ್ಚರಿಗೊಳಗಾಗಿದ್ದು ಇದು ದೇವರ ರೂಪದ ವಾನರ ಇರಬೇಕು ಅನ್ನುತ್ತಿದ್ದಾರೆ.

ಒಟ್ಟಿನಲ್ಲಿ ವಾನರವೊಂದು ಆಂಜನೇಯನ ದೇಗುಲಕ್ಕೆ ಬಂದು ಭಕ್ತಿಯಿಂದ  ದೇವರಿಗೆ ನಮಿಸಿ ದೇಗುಲದಲ್ಲಿ ವಾಸಗಿರುವ ಸುದ್ದಿ ತಿಳಿದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ‌ ಈ ವಾನರನ ಭಕ್ತಿಯ‌ನ್ನು ಕಂಡು ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News