Koppala : ಕೊಪ್ಪಳ ಜಿಲ್ಲೆಗೆ ಆಗಮಿಸಿದ ಸಿಎಂ. ಗಂಗಾವತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನವನ್ನು ಉದ್ಘಾಟಿಸಿ ಈ ಕೆಳಗಿನ ಹೇಳಿಕೆಗಳನ್ನು ನೀಡಿದ್ದಾರೆ. ಜೊತೆಗೆ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿದರು.
CM Bommai : ಕೊಪ್ಪಳದ ಗಂಗಾವತಿಯ ಅಂಜನಾದ್ರಿಗೆ ಆಗಮಿಸಿದ ಸಿಎಂ ಬೊಮ್ಮಾಯಿ..! ಹೆಲಿಕಾಪ್ಟರ್ ಮೂಲಕ ಆಂಜನೇಯನ ದರ್ಶನಕ್ಕೆ ಆಗಮಿಸಿದ ಸಿಎಂ. ಆಂಜನೇಯನ ಮೂರ್ತಿಗೆ ಪೂಜೆ ಸಲ್ಲಿಸಿದ ಸಿಎಂ ಬೊಮ್ಮಾಯಿ ಅಂಜನಾದ್ರಿ ಪರ್ವತದ ಕೆಳಭಾಗದಲ್ಲಿ ಪೂಜೆ ಸಲ್ಲಿಸಿದ ಸಿಎಂ.
ಮತದಾರರನ್ನ ಸೆಳೆಯಲು ಗಣಿಧಣಿ ಹೊಸ ಗೇಮ್. ಬೋರ್ವೆಲ್ ಕೊರಿಸಿ ಮತಕ್ಕೆ ಗಾಳ ಹಾಕಿದ ರೆಡ್ಡಿ. ಜನಾರ್ದನ ರೆಡ್ಡಿಯಿಂದ ಕೊಳವೆ ಬಾವಿ ರಾಜಕೀಯ. ಬೋರ್ವೆಲ್ ಕೊರೆಸಿ ಮತ ಸೆಳೆಯಲು ರೆಡ್ಡಿ ಪ್ರಯತ್ನ. ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗಿಮಿಕ್.
ನಾಳೆ ಕೊಪ್ಪಳ ಜಿಲ್ಲಾ ರಜತ ಮಹೋತ್ಸವ.. ಹೀಗಾಗಿ ಕೊಪ್ಪಳದಲ್ಲಿ ಸಂಭ್ರಮ ಮನೆ ಮಾಡಿದೆ.. ರಜತ ಮಹೋತ್ಸವ ಹಾಗೂ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರು ಕಾಲ್ನಡಿಗೆ ಜಾಥಾ ನಡೆಸುತ್ತಿದ್ದಾರೆ.. ಜಿಲ್ಲಾಡಳಿತ ಭವನದಿಂದ ಗವಿಮಠದವರೆಗೂ ಜಾಥಾ ನಡೆಯುತ್ತಿದೆ.. ಮೆರವಣಿಗೆಗೆ ವಿವಿಧ ಕಲಾ ತಂಡಗಳು ಮೆರುಗು ನೀಡಿದೆ.
ಅಂಜನಾದ್ರಿ ಬೆಟ್ಟದಲ್ಲಿ ರಾತ್ರಿ ಕರಡಿ ಪ್ರತ್ಯಕ್ಷ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ನಿನ್ನೆ ರಾತ್ರಿ ಬಂದಿರುವ ಕರಡಿ. ಅಂಜನಾದ್ರಿಯಲ್ಲಿ ಕರಡಿ ಪ್ರತ್ಯಕ್ಷದಿಂದ ಭಯದಲ್ಲಿ ಭಕ್ತರು.
ತಮ್ಮ ಹಾಗೂ ಯಡಿಯೂರಪ್ಪ ಅವರ ನಡುವೆ ಭಿನ್ನಾಭಿಪ್ರಾಯ ಇದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ “ನಮ್ಮದು ತಂದೆ ಮಕ್ಕಳ ಸಂಬಂಧ. ಯಾವುದೇ ಕಾರಣಕ್ಕೂ ಯಾವುದೇ ಸಂದರ್ಭದಲ್ಲಿಯೂ ಭಿನ್ನಾಭಿಪ್ರಾಯ ಬರುವುದಿಲ್ಲ. ನಿರೀಕ್ಷೆ ಮಾಡುವವರಿಗೆ ನಿರಾಸೆಯಾಗುತ್ತದೆ” ಎಂದರು.
ಕೊಪ್ಪಳದಲ್ಲಿ RTO ಅಧಿಕಾರಿಗಳ ಹಗಲು ದರೋಡೆ ಕ್ಯಾಮರಾದಲ್ಲಿ ಸೆರೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅಧಿಕಾರಿಗಳು ಹಗಲು ದರೋಡೆ ನಡೆಸಿದ್ದಾರೆ. ಲಾರಿ ಚಾಲಕರಿಂದ ಮಾಮೂಲಿ ವಸೂಲಿ ಮಾಡ್ತಿದ್ದ ಅಧಿಕಾರಿಗಳು ಕ್ಯಾಮರಾ ಕಂಡು ಎದ್ನೊಬಿದ್ನೋ ಅಂತಾ ಓಡಿದ್ದಾರೆ.
ನಾವ್ ಯಾರಿಗೂ ಏನು ಅಂದಿಲ್ಲ. ಆದ್ರೂ ನನ್ನ ಫೋಟೋ ಸುಟ್ರಿ. ಕೊಪ್ಪಳ, ಬಿಜಾಪುರ, ಬೆಂಗಳೂರಲ್ಲಿ ನನ್ನ ಫೋಟೋ ಸುಟ್ರಿ. ಗಂಡಸ್ಥನ ಇದ್ರೆ ಜಗದೀಶ್ ಶೆಟ್ಟರ್ ಮನೆ ಮುಂದೆ ಸುಡಿ ಎಂದು ಬಣಜಿಗ ಸಮುದಾಯ ಪ್ರತಿಭಟನೆಗೆ ಯತ್ನಾಳ್ ಕೆಂಡಾಮಂಡಲ.
ನಿನ್ನೆ ಬಲಿಪಾಡ್ಯ ಹಿನ್ನೆಲೆ ರಾಜ್ಯದ ವಿವಿಧ ದೇವಸ್ಥಾನದಲ್ಲಿ ಗೋ ಪೂಜೆ ಸಂಭ್ರಮ ನಡೆಯಿತು.. ಕೊಪ್ಪಳದ ಹುಲಿಗಿ ದೇವಸ್ಥಾನದಲ್ಲಿ ಸರ್ಕಾರದ ಆದೇಶದ ಅನ್ವಯ ಪೂಜೆ ಕಾರ್ಯಕ್ರಮ ನಡೆಸಿದ್ರು.. ದೇವಸ್ಥಾನದ ಆವರಣಕ್ಕೆ ಗೋ ಕರೆ ತಂದು, ಗೋವುಗಳಿಗೆ ಆಹಾರ ಧಾನ್ಯ ತಿನ್ನಿಸಿ ಪೂಜೆ ಸಲ್ಲಿಸಿದ್ರು
ಕೊಪ್ಪಳದಲ್ಲಿ ಬಿಜೆಪಿ ಶಾಸಕನ ವಿರುದ್ಧ BJP ಕಾರ್ಯಕರ್ತರು ಸಭೆ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಶಾಸಕ ಬಸವರಾಜ ದಡೇಸೂಗೂರು ಅವರಿಗೆ ಟಿಕೆಟ್ ನೀಡಬೇಡಿ. ಹೊಸಬರಿಗೆ ಟಿಕೆಟ್ ನೀಡಿ ಎಂದು ಆಗ್ರಹಿಸಿದ್ದಾರೆ..
ವಿಧಾನಸಭೆ ಅವಧಿ ಮುಕ್ತಾಯಕ್ಕೆ 6 ತಿಂಗಳು ಬಾಕಿ ಇದೆ. ಅದಾಗಲೇ ಬಿಜೆಪಿ ಚುನಾವಣಾ ಸಿದ್ಧತೆಗೆ ಮುಂದಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ರಣ ಕಹಳೆ ಮೊಳಗಿಸಿದೆ. ಬಿಜೆಪಿ ಆಯೋಜಿಸಿದ್ದ ಜನ ಸಂಕಲ್ಪ ಯಾತ್ರೆ ಮೂಲಕ ಹಾಲಿ ಮತ್ತು ಮಾಜಿ ಸಿಎಂ ಇಬ್ಬರೂ ಚುನಾವಣೆಗೆ ಸಿದ್ಧರಾಗಿ ಅಂತಾ ಕಾರ್ಯಕರ್ತರನ್ನು ಹುರಿದುಂಬಿಸಿದ್ರು.
ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಹಳ್ಳಕ್ಕೆ ಪ್ರವಾಹ ಬಂದ ಹಿನ್ನೆಲೆ ವಾಹನ ಸಂಚಾರ ಸ್ಥಗಿತವಾಗಿದೆ. ಚಿಕೇನಕೊಪ್ಪ, ಭಟಪನಳ್ಳಿ ಮಧ್ಯೆ ಇರುವ ಹಳ್ಳದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕುಕನೂರಿಂದ ಗದಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತವಾಗಿದೆ.
ಕೊಪ್ಪಳ ತಾಲೂಕಿನ ಕವಲೂರಿನಲ್ಲಿ ಪ್ರತೀ ವರ್ಷ ಮೊಹರಂ ಹಬ್ಬ ಆಚರಿಸಲಾಗುತ್ತೆ. ಭಾವೈಕ್ಯತೆಯಿಂದ ಆಚರಿಸಲ್ಪಡುವ ಮೋಹರಂ ಹಬ್ಬದಲ್ಲಿ ಆಂಜನೇಯ ದೇವಸ್ಥಾನದ ಗರ್ಭಗುಡಿಗೆ ತೆರಳಿ ಮುಸ್ಲಿಂ ದೇವರು ಅಲಾಯಿ ಪೂಜೆ ಸಲ್ಲಿಸೋದು ವಾಡಿಕೆ. ಈ ವೇಳೆ ಅಲಾಯಿ ದೇವರಿಗೆ ಹನುಮಂತ ಹೂವಿನ ಪ್ರಸಾದ ನಿಡಿದ್ದು, ಈ ದೃಶ್ಯ ವೈರಲ್ ಆಗಿದೆ.
ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿ ಮುಸ್ಲಿಂ ಕುಟುಂಬದವರಿಂದ ವರಮಹಾಲಕ್ಷ್ಮೀ ಹಬ್ಬ ಆಚರಿಸಲಾಗಿದೆ. ಅಳವಂಡಿ ಗ್ರಾಮದ ನಜರುದ್ದೀನ್ ಮನೆಯಲ್ಲಿ ವರಮಾಹಲಕ್ಷ್ಮೀ ಪೂಜೆ ನೆರವೇರಿಸಲಾಯಿತು. ಮನೆಯಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವರಮಾಹಲಕ್ಷ್ಮೀ ಹಬ್ಬ ಆಚರಣೆ ಮಾಡಿದೆ ನಜರುದ್ದೀನ್ ಕುಟುಂಬ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.