ಗುರುವಾರ ಬಿಡುಗಡೆಯಾದ ಐಸಿಸಿ ತಂಡದ ಶ್ರೇಯಾಂಕದ ವಾರ್ಷಿಕ ನವೀಕರಣದ ನಂತರ ಭಾರತವು ಟೆಸ್ಟ್ ತಂಡದಲ್ಲಿ ಪ್ರಥಮ ಸ್ಥಾನದಲ್ಲಿದೆ.24 ಪಂದ್ಯಗಳಿಂದ 2914 ಅಂಕಗಳನ್ನು ಗಳಿಸಿರುವುದಲ್ಲದೆ 121 ರೇಟಿಂಗ್ ಪಾಯಿಂಟ್ ಗಳಿಸಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ (ಡಬ್ಲ್ಯುಟಿಸಿ) ಫೈನಲ್ ಪಂದ್ಯವನ್ನು ಸೌತಾಂಪ್ಟನ್ನ ಏಗಾಸ್ ಬೌಲ್ ಅಥವಾ ಹ್ಯಾಂಪ್ಶೈರ್ ಬೌಲ್ನಲ್ಲಿ ಆಡಲಾಗುವುದು ಮತ್ತು ಮೂಲತಃ ಯೋಜಿಸಿದಂತೆ ಲಂಡನ್ನಲ್ಲಿರುವ ಲಾರ್ಡ್ಸ್ ಅಲ್ಲ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬುಧವಾರ ದೃಢಪಡಿಸಿದೆ.
Bio Bubble Impact On Players - ಬಯೋ ಬಬಲ್ ನಲ್ಲಿದ್ದುಕೊಂಡು ಟೀಂ ಇಂಡಿಯಾ ಆಟಗಾರರು ಮಾನಸಿಕವಾಗಿ ಅಸ್ವಸ್ಥರಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಟೀಂ ಇಂಡಿಯಾ ಮೆಂಟಲ್ ಕೋಚ್ ಪ್ಯಾಡಿ ಆಪ್ಟನ್ (Paddy Upton) BCCI ಸೇರಿದಂತೆ ಇತರೆ ಕ್ರಿಕೆಟ್ ಮಂಡಳಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ICC ODI Player of the Decade: ಇದಕ್ಕೂ ಮೊದಲು ICC ವಿರಾಟ್ ಕೊಹ್ಲಿ ಅವರಿಗೆ ತನ್ನ ಮೂರು ಫಾರ್ಮ್ಯಾಟ್ ತಂಡಗಳಲ್ಲಿ ಸ್ಥಾನ ಕಲ್ಪಿಸಿದೆ. ಇದಲ್ಲದೆ ICC ವಿರಾಟ್ ಕೊಹ್ಲಿಯನ್ನು ತನ್ನ ದಶಕದ ಟೆಸ್ಟ್ ತಂಡದ ನಾಯಕನೆಂದು ಕೂಡ ಘೋಷಿಸಿದೆ.
ICC Women's Cricket World Cup: ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಮಹಿಳಾ ಕ್ರಿಕೆಟ್ ವರ್ಲ್ಡ್ ಕಪ್ ಶೆಡ್ಯೂಲ್ ಬಿಡುಗಡೆ ಮಾಡಿದೆ. ಟೂರ್ನಿಯ ಮೊದಲ ಪಂದ್ಯ ಮಾರ್ಚ್ 4, 2022 ರಲ್ಲಿ ವೆಲಿಂಗ್ಟನ್ ನ ಬೇಸಿನ್ ರಿಜರ್ವ್ ನಲ್ಲಿ ನಡೆಯಲಿದೆ. ಭಾರತದ ನಾಲ್ಕು ಪಂದ್ಯಗಳು ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಹಾಗೂ ಇಂಗ್ಲೆಂಡ್ ವಿರುದ್ಧ ನಡೆಯಲಿವೆ.
ಎಂಎಸ್ ಧೋನಿ ಮತ್ತು ಸುರೇಶ್ ರೈನಾ ಅವರು ಏಕದಿನ ಪಂದ್ಯಗಳಲ್ಲಿ ಭಾರತದ ಮಧ್ಯಮ ಕ್ರಮಾಂಕದಲ್ಲಿ ಇಬ್ಬರು ಸ್ಥಿರರಾಗಿದ್ದರು. ಈ ಅಪ್ರತಿಮ ಜೋಡಿ ಅನೇಕ ಪಂದ್ಯಗಳನ್ನು ಗೆಲ್ಲುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ.
ಕೋವಿಡ್ -19 ರ ಕಾರಣದಿಂದ ಮುಂದೂಡಲ್ಪಟ್ಟ ಐಸಿಸಿ ಪುರುಷರ ಟಿ 20 ವಿಶ್ವಕಪ್ 2022 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಶುಕ್ರವಾರ ದೃಢಪಡಿಸಿದೆ.ಇನ್ನು ಭಾರತವು ಐಸಿಸಿ ಪುರುಷರ ಟಿ 20 ವಿಶ್ವಕಪ್ 2021 ಅನ್ನು ಆಯೋಜಿಸುತ್ತದೆ.
ಈ ತಿಂಗಳ ಕೊನೆಯಲ್ಲಿ ನಡೆಯಬೇಕಿದ್ದ ಭಾರತದ ಶ್ರೀಲಂಕಾ ಪ್ರವಾಸವು COVID-19 ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲ್ಪಟ್ಟಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಈ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.