ICC ODI Player of the Decade: ದಶಮಾನದ ಸರ್ವಶ್ರೇಷ್ಠ ODI ಕ್ರಿಕೆಟಿಗನಾಗಿ Virat Kohli ಆಯ್ಕೆ

ICC ODI Player of the Decade: ಇದಕ್ಕೂ ಮೊದಲು ICC ವಿರಾಟ್ ಕೊಹ್ಲಿ ಅವರಿಗೆ ತನ್ನ ಮೂರು ಫಾರ್ಮ್ಯಾಟ್ ತಂಡಗಳಲ್ಲಿ ಸ್ಥಾನ ಕಲ್ಪಿಸಿದೆ. ಇದಲ್ಲದೆ ICC ವಿರಾಟ್ ಕೊಹ್ಲಿಯನ್ನು ತನ್ನ ದಶಕದ ಟೆಸ್ಟ್ ತಂಡದ ನಾಯಕನೆಂದು ಕೂಡ ಘೋಷಿಸಿದೆ.

Written by - Nitin Tabib | Last Updated : Dec 28, 2020, 03:07 PM IST
  • ICC ದಶಮಾನದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರ.
  • ದಶಮಾನದ ಟೆಸ್ಟ್ ಕ್ರಿಕೆಟ್ ತಂಡದ ನಾಯಕನಾಗಿಯೂ ಕೂಡ ಕೊಹ್ಲಿ ಆಯ್ಕೆ
  • ಕ್ರಿಕೆಟ್ ನ ಮೂರು ಸ್ವರೂಪದ ದಶಮಾನದ ತಂಡಗಳಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ವಿರಾಟ್ ಕೊಹ್ಲಿ
ICC ODI Player of the Decade: ದಶಮಾನದ ಸರ್ವಶ್ರೇಷ್ಠ ODI ಕ್ರಿಕೆಟಿಗನಾಗಿ Virat Kohli ಆಯ್ಕೆ title=
ICC Player Of Decade (File Image)

ನವದೆಹಲಿ: ICC ODI Player of the Decade: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ದಶಕದ ಅತ್ಯುತ್ತಮ ಏಕದಿನ ಕ್ರಿಕೆಟಿಗನನ್ನಾಗಿ ಆಯ್ಕೆ ಮಾಡಿದೆ. ಈ ದಶಕದಲ್ಲಿ, ಏಕದಿನ ಕ್ರಿಕೆಟ್‌ನಲ್ಲಿ 10,000 ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಕ್ರಿಕೆಟಿಗ ಕೊಹ್ಲಿ. ನಿನ್ನೆ ಅಂದರೆ ಭಾನುವಾರ, ಐಸಿಸಿ ಈ ದಶಕದ ಎಲ್ಲಾ ಮೂರು ಸ್ವರೂಪಗಳ ತಂಡಗಳಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನ ನೀಡಿತ್ತು. ಇದಲ್ಲದೆ, ಐಸಿಸಿ ಕೊಹ್ಲಿಯನ್ನು ಈ ದಶಕದ ಟೆಸ್ಟ್ ತಂಡದ ನಾಯಕರನ್ನಾಗಿ ಕೂಡ ಘೋಷಿಸಿದೆ.

ಈ ದಶಕದಲ್ಲಿ ವಿರಾಟ್ ಕೊಹ್ಲಿ ಅವರ ಸಾಧನೆ ಅದ್ಭುತವಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಅವರುಅತಿ ಹೆಚ್ಚು ರನ್, ಹೆಚ್ಚು ಶತಕಗಳನ್ನು ಮತ್ತು ಹೆಚ್ಚು ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ದಶಕದಲ್ಲಿ, ಕೊಹ್ಲಿ  39 ಶತಕಗಳು ಮತ್ತು 48 ಅರ್ಧಶತಕಗಳನ್ನು ಗಳಿಸಿದ್ದಾರೆ. ಇದಲ್ಲದೆ ಅವರು 122 ಕ್ಯಾಚ್‌ಗಳನ್ನು ಸಹ ಹಿಡಿದಿದ್ದಾರೆ.

ನಿನ್ನೆ, ಭಾನುವಾರ, ಐಸಿಸಿ ಈ ದಶಕದ ಟೆಸ್ಟ್, ಏಕದಿನ ಮತ್ತು ಟಿ 20 ತಂಡಗಳನ್ನು ಘೋಷಿಸಿತ್ತು. ಐಸಿಸಿ ಈ ದಶಕದ ಟೆಸ್ಟ್ ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿಗೆ (Virat Kohli) ಹಸ್ತಾಂತರಿಸಿದರೆ, ಏಕದಿನ ಮತ್ತು ಟಿ 20 ತಂಡದ ನಾಯಕತ್ವದ ಜವಾಬ್ದಾರಿಯನ್ನು ಕ್ಯಾಪ್ಟನ್ ಕೂಲ್ MS Dhoniಗೆ ನೀಡಿದೆ. ಆದರೆ, ಈ ದಶಕದ ಎಲ್ಲಾ ಮೂರು ಸ್ವರೂಪಗಳಲ್ಲಿ ಐಸಿಸಿ ಹೆಸರಿಸಿದ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.

ICCಯ ಈ ದಶಕದ ಟೆಸ್ಟ್ ತಂಡದಲ್ಲಿ ಭಾರತದ ವಿರಾಟ್ ಕೊಹ್ಲಿ ಹಾಗೂ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆದಿದ್ದಾರೆ. ODI ತಂಡದಲ್ಲಿ ICC ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ MS ಧೋನಿಗೆ ಸ್ಥಾನ ಕಲ್ಪಿಸಿದೆ. ಇದಲ್ಲದೆ ICC ತನ್ನ ದಶಕದ ಟಿ20 ತಂಡದಲ್ಲಿ ನಾಲ್ವರು ಭಾರತೀಯರಿಗೆ ಸ್ಥಾನ ಕಲ್ಪಿಸಿದ್ದು, ತಂಡದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಂ.ಎಸ್. ಧೋನಿ ಹಾಗೂ ಜಸ್ಪ್ರೀತ್ ಬೂಮ್ರಾ ಶಾಮೀಲಾಗಿದ್ದಾರೆ. 

ಇದನ್ನು ಓದಿ- ICC Awards Of Decade: ಈ ದಶಕದ T20 ಹಾಗೂ ODI ತಂಡಕ್ಕೆ ಕ್ಯಾಪ್ಟನ್ ಕೂಲ್ MSD ನಾಯಕ

ICC ದಶಕದ ಟೆಸ್ಟ್ ತಂಡ ಇಂತಿದೆ: ಅಲಿಸ್ಟರ್ ಕುಕ್, ಡೇವಿಡ್ ವಾರ್ನರ್, ಕೆನ್ ವಿಲಿಯಮ್ಸನ್, ವಿರಾಟ್ ಕೊಹ್ಲಿ (ನಾಯಕ), ಸ್ಟೀವ್ ಸ್ಮಿತ್, ಕುಮಾರ ಸಂಗಕಾರಾ (Wicket Keeper), ಬೆನ್ ಸ್ಟೋಕ್ಸ್, ರವಿಚಂದ್ರನ್ ಅಶ್ವಿನ್, ಡೆಲ್ ಸ್ಟೇನ್ಸ್, ಸ್ಟುವರ್ಟ್ ಬ್ರಾಡ್ ಹಾಗೂ ಜೇಮ್ಸ್ ಅಂಡರ್ಸನ್.

ಇದನ್ನು ಓದಿ- ಬಿಸಿಸಿಐ ನೂತನ ಹಿರಿಯ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಚೇತನ್ ಶರ್ಮಾ ನೇಮಕ

ICC ಈ ದಶಕದ ODI ತಂಡ ಇಂತಿದೆ: ಮಹೇಂದ್ರ ಸಿಂಗ್ ಧೋನಿ (ನಾಯಕ), ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ಅಬ್ರಹಾಂ ಡಿವಿಲಿಯರ್ಸ್, ಶಾಕಿಬ್ ಅಲ್ ಹಸನ್, ಬೆನ್ ಸ್ಟೋಕ್ಸ್, ಮಿಷೆಲ್ ಸ್ಟಾರ್ಕ್, ಟ್ರೆಂಟ್ ಬೌಲ್ಟ್, ಇಮ್ರಾನ್ ತಾಹೀರ್, ಲಸಿತ್ ಮಲಿಂಗಾ.

ಇದನ್ನು ಓದಿ- ICC Test Ranking: ಸ್ಥಾನೋನ್ನತಿ ಪಡೆದ ವಿರಾಟ್ ಕೊಹ್ಲಿ, ಟಾಪ್ 10 ನಲ್ಲಿ ಶಾಮೀಲಾದ ಪೂಜಾರಾ ಹಾಗೂ ರಹಾಣೆ

ICC ದಶಕದ ಪುರುಷರ ಟಿ20 ತಂಡ ಇಂತಿದೆ: ಮಹೇಂದ್ರ ಸಿಂಗ್ ಧೋನಿ (ನಾಯಕ), ಡೇವಿಡ್ ವಾರ್ನರ್, ರೋಹಿತ್ ಶರ್ಮಾ, ಕ್ರಿಸ್ ಗೈಲ್,  ಎರೋನ್ ಫಿಂಚ್, ವಿರಾಟ್ ಕೊಹ್ಲಿ, ಅಬ್ರಹಾಂ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ವೆಲ್, ಕೆರಾನ್ ಪೋಲಾರ್ಡ್, ರಾಶೀದ್ ಖಾನ್, ಜಸ್ಪ್ರೀತ್ ಬುಮ್ರಾ, ಲಸಿತ್ ಮಲಿಂಗಾ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News