Bio Bubble Impact On Players: 'ಹೀಗೆಯೇ ಮುಂದುವರೆದರೆ ಟೀಂ ಇಂಡಿಯಾ ಆಟಗಾರರು ಮಾನಸಿಕ ಅನಾರೋಗ್ಯಕ್ಕೆ ಒಳಗಾಗಬಹುದು'

Bio Bubble Impact On Players - ಬಯೋ ಬಬಲ್ ನಲ್ಲಿದ್ದುಕೊಂಡು ಟೀಂ ಇಂಡಿಯಾ ಆಟಗಾರರು ಮಾನಸಿಕವಾಗಿ ಅಸ್ವಸ್ಥರಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಟೀಂ ಇಂಡಿಯಾ ಮೆಂಟಲ್ ಕೋಚ್ ಪ್ಯಾಡಿ ಆಪ್ಟನ್ (Paddy Upton) BCCI ಸೇರಿದಂತೆ ಇತರೆ ಕ್ರಿಕೆಟ್ ಮಂಡಳಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

Written by - Nitin Tabib | Last Updated : Jan 29, 2021, 07:56 PM IST
  • ಬಯೋ ಬಬಲ್ ನಲ್ಲಿರುವ ಆಟಗಾರರು ಮಾನಸಿಕ ಅಸ್ವಸ್ಥರಾಗಬಹುದು.
  • ಎಚ್ಚರಿಕೆ ನೀಡಿದ ಟೀಂ ಇಂಡಿಯಾ ಮಾಜಿ ಮಾನಸಿಕ ತರಬೇತುದಾರ ಪ್ಯಾಡಿ ಆಪ್ಟನ್.
  • ಈ ಕುರಿತು ಇದುವರೆಗೆ ಯಾವುದೇ ಮಂಡಳಿ ಸರಿಯಾದ ಅಧ್ಯಯನ ನಡೆಸಿಲ್ಲ.
Bio Bubble Impact On Players: 'ಹೀಗೆಯೇ ಮುಂದುವರೆದರೆ ಟೀಂ ಇಂಡಿಯಾ ಆಟಗಾರರು ಮಾನಸಿಕ ಅನಾರೋಗ್ಯಕ್ಕೆ ಒಳಗಾಗಬಹುದು' title=
Bio Bubble Impact On Players (Paddy Upton-File Photo)

ನವದೆಹಲಿ: Bio Bubble Impact On Players - BCCI ಸೇರಿದಂತೆ ಜಾಗತಿಕ ಕ್ರಿಕೆಟ್ ಮಂಡಳಿಗಳ ಅಧ್ಯಯನ ನಡೆಸಿರುವ ಮಾಜಿ ಟೀಂ ಇಂಡಿಯಾ ಮೆಂಟಲ್ ಕೋಚ್ ಪ್ಯಾಡಿ ಆಪ್ಟನ್ (Paddy Upton), ದೀರ್ಘ ಕಾಲದವರೆಗೆ ಜೈವಿಕ ಸುರಕ್ಷತೆಯ ವಾತಾವರಣ (Bio Bubble) ದಲ್ಲಿರುವ ಕ್ರಿಕೆಟ್ ಆಟಗಾರರನ್ನು ಮಾನಸಿಕ ಅಸ್ವಸ್ಥತೆಯಿಂದ ಕಾಪಾಡಿ ಎಂದು ಸಲಹೆ ನೀಡಿದ್ದಾರೆ. ಕೋವಿಡ್ -19 ಸಾಂಕ್ರಾಮಿಕದ ಬಳಿಕ ಆರಂಭಗೊಂಡ ಕ್ರೀಡಾ ಸ್ಪರ್ಧೆಗಳಲ್ಲಿಅಂತರರಾಷ್ಟ್ರೀಯ ಆಟಗಾರರು ಜೈವಿಕ ಸುರಕ್ಷಿತ ವಾತಾವರಣದಲ್ಲಿ ವಾಸಿಸುತ್ತಿದ್ದಾರೆ ಮತ್ತು ಅನೇಕ ಕ್ರಿಕೆಟಿಗರು, ಫುಟ್ಬಾಲ್ ಆಟಗಾರರು ಮತ್ತು ಟೆನಿಸ್ ಆಟಗಾರರು ಮಾನಸಿಕ ಆರೋಗ್ಯದ ಬಗ್ಗೆ ದೂರುತ್ತಿದ್ದಾರೆ. ಈ ಸಮಸ್ಯೆಯನ್ನು ನಿಭಾಯಿಸಲು ಉನ್ನತ ಕ್ರೀಡಾ ಸಂಘಗಳು ಸಾಕಷ್ಟು ಕೆಲಸ ಮಾಡುತ್ತಿಲ್ಲ ಎಂದು ಅಪ್ಟನ್ ಹೇಳಿದ್ದಾರೆ.

ಇದನ್ನು ಓದಿ- ಬಿಸಿಸಿಐ ಮುಖ್ಯಸ್ಥ ಸೌರವ ಗಂಗೂಲಿ ಆರೋಗ್ಯದಲ್ಲಿ ಸ್ಥಿರ

"ಮಾನಸಿಕ ಆರೋಗ್ಯ ಕಾಯ್ದುಕೊಳ್ಳುವುದು ಇಂದು  ಎಲ್ಲಾ ಆಟಗಾರರಿಗೆ ಸಾಮಾನ್ಯ ಸವಾಲಾಗಿ ಪರಿಣಮಿಸಿದೆ ಮತ್ತು ವಿಭಿನ್ನ ಆಟಗಾರರಿಂದ ಪ್ರತಿಕ್ರಿಯೆ ಪಡೆಯಲು ನಾವು ಸಾಕಷ್ಟು ಸಂಶೋಧನೆ ಮಾಡದ ಕಾರಣ, ವೈದ್ಯಕೀಯ ಕ್ಷೇತ್ರದ ಎಲ್ಲ ಜನರು ನಾವು ಸೂಕ್ತ ಪರೀಕ್ಷೆ ಮಾಡದ ಹೊರತುಯಾವುದಾದರೊಂದು ಔಷಧಿಗೆ ಅನುಮೋದನೆ ನೀಡುವುದು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ನಾವು ಸರಿಯಾದ ನಿಟ್ಟಿನಲ್ಲಿ ಸಂಶೋಧನೆ ಮಾಡಿದ್ದೇವೆಯೇ ಎಂಬುದನ್ನು ಪರಿಶೀಲಿಸಬೇಕಿದೆ" ಎಂದಿದ್ದಾರೆ. 

ಇದನ್ನು ಓದಿ- ಥೈಲ್ಯಾಂಡ್ ಓಪನ್ ಆಡಲು ಹೋದ ಸೈನಾ ನೆಹ್ವಾಲ್ Corona Positive

ಆಟಗಾರರು ಮಾನಸಿಕವಾಗಿ ಅನಾರೋಗ್ಯಕ್ಕೆ ಒಳಗಾಗಲಿದ್ದಾರೆ-ಆಪ್ಟನ್ 
"ವಿಶ್ವದಲ್ಲಿ ಹಲವು ಬಯೋ ಬಬಲ್ ಗಳನ್ನು ನಿರ್ಮಿಸಲಾಗಿದೆ. ಆದರೆ, ಐಸಿಸಿ (ICC) ಆಗಲಿ, ಬ್ಯಾಡ್ಮಿಂಟನ್ ಅಥವಾ ಫುಟ್ಬಾಲ್ ಗೆ ಸಂಬಂದಿಸಿದ ಜನರಾಗಲಿ ಅಥವಾ ಬಿಸಿಸಿಐ ಪದಾಧಿಕಾರಿಗಳೇ ಆಗಿರಲಿ, ಈ ಬಯೋ ಬಬಲ್ ಗಳಿಂದ ಆಟಗಾರರ ಮೇಲಾಗುವ ಪ್ರಭಾವಗಳ ಪ್ರತಿಕ್ರಿಯೆಗಳ ವ್ಯಾಪಕ ಅಧ್ಯಯನ ನಡೆಸುವ ಕುರಿತು ಯೋಚಿಸಿಲ್ಲ ಎಂದು ನನಗನಿಸುತ್ತದೆ "ಎಂದು ಆಪ್ಟನ್ ಹೇಳಿದ್ದಾರೆ. "ನಾವು ಇದುವರೆಗೆ ಬಯೋಬಬಲ್ ಗಳ ದುಷ್ಪರಿಣಾಮಗಳನ್ನು ನೋಡಿಲ್ಲ. ಆದರೆ ಸತತವಾಗಿ ಜೈವಿಕ ಸುರಕ್ಷತೆಯ ವಾತಾವರಣದಲ್ಲಿರುವುದರಿಂದ ನಾವು ಅಧಿಕ ಮಾನಸಿಕ ಸಮಸ್ಯೆಗಳನ್ನು ಹಾಗೂ ಅನಾರೋಗ್ಯವನ್ನು ಎದುರಿಸುವ ಸ್ಥಿತಿ ಬಂದೊದಗಲಿದೆ" ಎಂದೂ ಕೂಡ ಅವರು ಹೇಳಿದ್ದಾರೆ.

ಇದನ್ನು ಓದಿ- Covid 19: ಸೈನಾ ನೆಹ್ವಾಲ್ ಕೊವಿಡ್ ಪಾಸಿಟಿವಾ..ನೆಗೆಟಿವಾ..? ಆಗಿದ್ದೇನು? ಇಲ್ಲಿದೆ ಡಿಟೇಲ್ಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News