ಕೆ.ಆರ್. ಮಾರುಕಟ್ಟೆಗೆ ಲಕ್ಷಾಂತರ ಜನ ಬರುವುದರಿಂದ ಸದಾ ಗಿಜುಗುಡುತ್ತಿದೆ. ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಗರದ ವಿವಿಧ ಭಾಗಗಳಲ್ಲಿ ಕೆ.ಆರ್. ಮಾರುಕಟ್ಟೆ ಮಾದರಿಯಲ್ಲೇ ಮಾರುಕಟ್ಟೆ ತೆರೆಯುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ, ಕೌನ್ಸಿಲಿಂಗ್ ಮೂಲಕ ಒಪ್ಪಿಗೆ ಪಡೆದು, ಬಜೆಟ್ನಲ್ಲಿ ಅನುದಾನ ಮೀಸಲಿಡಲಾಗುವುದು.
ಇನ್ಫೋಸಿಸ್ ಹಿಂದಿನಿಂದಲೂ ಪೊಲೀಸ್ ಇಲಾಖೆಗೆ ಕಟ್ಟಡ ನಿರ್ಮಿಸಿಕೊಡುವ ಮೂಲಕ ಬೆಂಬಲ ನೀಡುತ್ತಾ ಬಂದಿದೆ. ಈಗ ಸೈಬರ್ ಲ್ಯಾಬ್, ತರಬೇತಿ ಕೇಂದ್ರ ನಿರ್ಮಿಸಲು ಮುಂದೆ ಬಂದಿರುವುದು ಇತರೆ ಕಾರ್ಪೋರೇಟ್ ಕಂಪನಿಗಳಿಗೆ ಮಾದರಿಯಾಗಿದೆ- ಡಾ.ಜಿ. ಪರಮೇಶ್ವರ್
ಶ್ರವಣ ದೋಷ ಹೊಂದಿರುವವರಿಗೆ ವೈದ್ಯಕೀಯ ಪ್ರಮಾಣ ಪತ್ರ ಪಡೆದುಕೊಳ್ಳಲು ತೊಂದರೆಯಾಗುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ವತಿಯಿಂದ ಸುಸಜ್ಜಿತ ಶ್ರವಣ ಮಾಪನ ಕೊಡಿಸುವ ಕೆಲಸ ಮಾಡಲಾಗುವುದು.
ರಿಯಲ್ ಎಸ್ಟೇಟ್ನಿಂದಾಗಿ ಹಲವು ಕೆರೆಗಳು ಮುಚ್ಚಿ ಹೋಗಿವೆ. ಈಗಿರುವ ಕೆರೆಗಳನ್ನು ಕಾಪಾಡಿಕೊಳ್ಳಬೇಕಿದೆ. ಈ ಕೆರೆಗಳ ಅಭಿವೃದ್ಧಗೆ ಕಾರ್ಪೋರೇಟ್ ಕಂಪನಿಗಳು ಆಸಕ್ತಿ ತೋರಲಿ- ಡಾ.ಜಿ. ಪರಮೇಶ್ವರ್
ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಬಿಬಿಎಂಪಿ ಶಾಲೆಗಳ ಗುಣಮಟ್ಟ ಕಡಿಮೆ ಇದರಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರುಸುತ್ತಿದ್ದಾರೆ. ಅದಕ್ಕಾಗಿ ಬಿಬಿಎಂಪಿಯಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡಲು ಮೈಕ್ರೋಸಾಫ್ಟ್ ಕಂಪನಿ ರೋಷನಿ ಶೀರ್ಷಿಕೆಯಡಿ ಮುಂದೆ ಬಂದಿದೆ.
ಸರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಏಳ್ಗೆಗಾಗಿ ವರ್ಷಕ್ಕೆ 27 ಕೋಟಿ ರೂ.ಗಳಂತೆ ಐದು ವರ್ಷಕ್ಕೆ 82 ಸಾವಿರ ಕೋಟಿ ರೂ. ಗಳನ್ನು ತೆಗೆದಿಟ್ಟಿದೆ. ಈ ಮೊತ್ತ ಸಂಪೂರ್ಣ ಸದ್ಬಳಕೆಯಾಗಬೇಕು ಎಂಬುದೇ ಸರಕಾರದ ಉದ್ದೇಶ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.