ಬೆಂಗಳೂರು: ವಸಂತನರಸಾಪುರದಲ್ಲಿ ಕೈಗಾರಿಕಾ ವಲಯ ನಿರ್ಮಾಣವಾಗುತ್ತಿದ್ದು, ಇಲ್ಲಿಯೇ ಜಪಾನೀಸ್ ಟೌನ್‌ಶಿಪ್ ತೆರೆಯಲು ಸಹ ಮುಂದಾಗಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಜಪಾನ ದೇಶದ ಕೌನ್ಸಿಲ್ ಟಕಯುಕಿ ಕಿತಗ್ವ ವಿಧಾನಸೌಧದಲ್ಲಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದರು.
Met with Takayuki Kitagawa, Hon'bleConsul-General of Japan in Bengaluru, today.
We look forward to developing an exclusive Japanese township in Vasantha Narasapur in Tumakuru. Karnataka is a veritable treasure trove for investors & many Japanese companies are witness to this. pic.twitter.com/g0sQVvS4XV— Dr. G Parameshwara (@DrParameshwara) October 4, 2018
ಹಿಂದಿನಿಂದಲೂ ಜಪಾನೀಸ್ ಟೌನ್‌ಶಿಪ್ ನಿರ್ಮಾಣದ ಕನಸು ಇದೆ. ಸಂತನರಸಾಪುರಸಲ್ಲಿ ಈಗಾಗಲೇ ಭೂ ಸ್ವಾಧೀನ ಪ್ರಕ್ರಿಯೆ ಬಹುತೇಕ ನಡೆಯುತ್ತಿದೆ. ಅಲ್ಲಿನ ಮೂಲಸೌಕರ್ಯ ಒದಗಿಸಿಕೊಡುವ ಸಂಬಂಧ ಇನ್ನೆರಡು ದಿನದಲ್ಲಿ ಸಭೆ ಕರೆದಿದ್ದು ಆ ಸಂದರ್ಭದಲ್ಲಿ ಸಭೆಗೆ ತಾವೂ ಬರಬಹುದು ಎಂದು ಆಹ್ವಾನಿಸಿದರು.