Nora Fatehi: ಬಾಲಿವುಡ್ನ ಓ ಸಾಕಿ ಸಾಕಿ ಹಾಡಿನ ಮೂಲಕ ಮನಗೆದ್ದ ನೋರಾ ಫತೇಹಿ ವೈಟ್ ಗೌನ್ ಧರಿಸಿ ಸ್ಟೈಲ್ ಐಕಾನ್ ಪ್ರಶಸ್ತಿಗಳಿಗಾಗಿ ಆಗಮಿಸಿದ್ದರು. ಕಾರ್ಯಕ್ರಮದ ಗೌನ್ ನೋಟಕ್ಕೆ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
Kiara Advani : ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ವಿವಾಹದ ಬಳಿಕ ನಟಿ ಕಿಯಾರಾ ಅಡ್ವಾಣಿ ಮತ್ತೆ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಕ್ಯೂಟ್ ಬ್ಯೂಟಿ ಹಾಟ್ ಉಡುಗೆ ತೊಟ್ಟು ಫೋಸ್ ನೀಡಿದ್ದಾರೆ.
ಖ್ಯಾತ ಚಲನಚಿತ್ರ ನಿರ್ಮಾಪಕ ಮುರಳಿ ರಾಜು ನಿಧನರಾಗಿದ್ದಾರೆ. ಅವರಿಗೆ 70 ವರ್ಷ ತುಂಬಿತ್ತು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮುರಳಿರಾಜು ಅವರು ಮಂಗಳವಾರ ಬೆಳಗ್ಗೆ ಹೈದರಾಬಾದ್ನ ಮಥುರಾ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಆಂಧ್ರಪ್ರದೇಶದ ಭೀಮಾವರಂ ಪ್ರದೇಶದವರಾದ ಮುರಳಿ ರಾಜು ಅವರು ನಿರ್ಮಾಪಕರಾಗಿ ಈ ಹಿಂದೆ ಕೆಲವು ಚಿತ್ರಗಳನ್ನು ಮಾಡಿದ್ದಾರೆ.
ಬಿಟೌನ್ ನವ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಹನಿಮೂನ್ನಿಂದ ಹಿಂತಿರುಗಿದ್ದಾರೆ. ನಿನ್ನೆ ಸಂಜೆ ಶೇರ್ಷಾ ದಂಪತಿಗಳು ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇನ್ನು ಕಿಯಾರಾ ನೋಡಿದ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮದುವೆಯ ನಂತರವೂ ಕಿಯಾರಾ ಹಣೆಯಲ್ಲಿ ಕುಂಕುಮ, ಕೊರಳಲ್ಲಿ ತಾಳಿ ಇಲ್ಲದ್ದನ್ನು ಕಂಡ ಅವರ ಅಭಿಮಾನಿಗಳು ಬೇಜಾರಾಗಿದ್ದಾರೆ.
ತಮ್ಮ ನೇರ ದಿಟ್ಟ ಮಾತುಗಳಿಂದ ಬಾಲಿವುಡ್ ನಟಿ ಕಂಗನಾ ರನೌತ್ ಸದಾ ಸುದ್ದಿಯಲ್ಲಿರುತ್ತಾರೆ. ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಬಿಟೌನ್ ಬೆಡಗಿಯ ಹೇಳಿಕೆಗಳಿಂದಾಗಿ ವಿವಾದಗಳು ಕೂಡ ಕೇಳಿಬರುತ್ತಿದ್ದವು. ಇದರಿಂದ ಆಕೆಯ ಟ್ವಿಟ್ಟರ್ ಖಾತೆಯನ್ನೂ ಬ್ಯಾನ್ ಮಾಡಲಾಗಿತ್ತು. ಕೆಲ ದಿನಗಳ ಹಿಂದೆ ಕಂಗನಾ ಟ್ವಿಟರ್ಗೆ ಮರಳಿದ್ದರು.
ಪ್ರೇಕ್ಷಕರನ್ನು ರಂಜಿಸುವ ಜೊತೆ ಅವರಿಗೆ ಶಿಕ್ಷಣ ನೀಡುವ ಉದ್ದೇಶಿತ ಸಿನಿಮಾಗಳು ಇತ್ತೀಚಿಗೆ ಹಚ್ಚಾಗುತ್ತಿವೆ. ಇನ್ನು ಲೈಂಗಿಕ ಶಿಕ್ಷಣ ಮನುಷ್ಯನಿಗೆ ಬಹು ಮುಖ್ಯ ಎಂಬ ಅಂಶವನ್ನು ಹೇಳಲು ನಟಿ ರಾಕುಲ್ ಪ್ರೀತ್ ಸಿಂಗ್ ʼಛತ್ರಿವಾಲಿʼ ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಛತ್ರಿವಾಲಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇದೀಗ WION ಜೊತೆ ಮಾತನಾಡಿರುವ ರಾಕುಲ್ ತಮ್ಮ ಸಿನಿಮಾದ ಬಗ್ಗೆ ತಿಳಿಸಿದ್ದಾರೆ.
Shama Sikandar Bold Pics: ಬೋಲ್ಡ್ ನೆಸ್ ಕುರಿತು ಚರ್ಚೆ ನಡೆಯುತ್ತಿದೆ ಎಂದರೆ ಅದರಲ್ಲಿ ಶಮಾ ಸಿಕಂದರ್ ಹೆಸರು ಮುಂಚೂಣಿಯಲ್ಲಿ ಇದ್ದೆ ಇರುತ್ತದೆ. ತನ್ನ ಮಾದಕ ಸೌಂದರ್ಯದಿಂದ ಪಡ್ಡೆ ಹೈಕ್ಳ ಎದೆಬಡಿತ ಹೆಚ್ಚಿಸುವ ಒಂದು ಸಣ್ಣ ಚಾನ್ಸ್ ಕೂಡ ಈ ಬೆಡಗಿ ಬಿಡುವುದಿಲ್ಲ.
ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ತಮ್ಮ ಮಗಳು ಮಾಲ್ಟಿ ಮೇರಿ ಚೋಪ್ರಾ ಜೋನಾಸ್ ಜೊತೆ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಕುರಿತು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ ದೇಸಿ ಗರ್ಲ್ ತನ್ನ ಮಗಳ ಮುಖವನ್ನು ಮರೆಮಾಚಿದ್ದರಿಂದ ಸಾಕಷ್ಟು ಟ್ರೋಲ್ಗೆ ಒಳಗಾಗಿದ್ದಾರೆ.
ಆರ್ಆರ್ಆರ್ ಸಿನಿಮಾ ಅಶ್ವಮೇಧದ ಕುದುರೆಯಂತೆ ಒಂದರ ಮೇಲೊಂದು ದಾಖಲೆ ಬರೆಯುತ್ತ ಸಾಗುತ್ತಿದೆ. ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ರಾಜಮೌಳಿ ನಿರ್ದೇಶನದ ಚಿತ್ರ ಇತ್ತೀಚೆಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದುಕೊಂಡು ಇತಿಹಾಸ ಸೃಷ್ಟಿಸಿತು. ಅತ್ಯುತ್ತಮ ಒರಿಜಿನಲ್ ಹಾಡಿಗಾಗಿ ಈ ಪ್ರಶಸ್ತಿ ಬಂದಿತ್ತು. ನಾಟು ನಾಟು ಹಾಡಿಗೆ ಸಂಗೀತ ನೀಡಿದ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ತಂಡದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಮುಂಬರುವ ಚಿತ್ರ ʼಮಿಷನ್ ಮಜ್ನುʼ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಸಿನಿಮಾ ನೋಡಲು ಸಿದ್ಧಾರ್ಥ್ ಗೆಳತಿ ಕಿಯಾರಾ ಅಡ್ವಾಣಿ ಕೂಡ ಬಂದಿದ್ದರು. ಸ್ಟಾರ್ ಜೋಡಿಯ ಮದುವೆಯ ರೂಮರ್ಸ್ ನಡುವೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು, ಕುತೂಹಲ ಮೂಡಿಸಿದೆ. ಅಲ್ಲದೆ, ʼಮಿಷನ್ ಮಜ್ನುʼ ಸಿನಿಮಾ ಕುರಿತು ಮಾತನಾಡುವಾಗ ಕಿಯಾರಾ ನಾಚಿ ನೀರಾಗಿದ್ದು, ಇವರಿಬ್ಬರ ನಡುವೆ ಏನೋ ಇದೆ ಎನ್ನುವ ಸಂಶಯಕ್ಕೆ ಸಾಕ್ಷಿ ಸಿಕ್ಕಂತ್ತಿತ್ತು.
ಸ್ಟಾರ್ ಡೈರೆಕ್ಟರ್ ಎಸ್. ಎಸ್. ರಾಜಮೌಳಿ ಚಿತ್ರ ಆರ್ಆರ್ಆರ್ ಭಾರತ ಮತ್ತು ವಿದೇಶಗಳಲ್ಲಿಯೂ ಅದ್ಬುತ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ. ಕಳೆದ ವಾರವಷ್ಟೇ, ಈ ಸಿನಿಮಾದ ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ಸ್ 2023 ಅತ್ಯುತ್ತಮ ಒರಿಜಿನಲ್ ಸಾಂಗ್ ಎಂಬ ಪ್ರಶಸ್ತಿ ಬಂದಿತ್ತು. ಈ ಮೂಲಕ ರಾಜಮೌಳಿ ಸಿನಿಮಾ ಇತಿಹಾಸವನ್ನು ನಿರ್ಮಿಸಿತು. ಅಲ್ಲದೆ, ಆಸ್ಕರ್ ಅಂಗಳದಲ್ಲಿಯೂ ಈ ಸಿನಿಮಾದ ಹೆಸರು ಕೇಳಿ ಬರುತ್ತಿದೆ.
ಇಂದಿನ ಕಾಲದಲ್ಲಿ ಲೈಂಗಿಕ ಶಿಕ್ಷಣವು ತುಂಬಾ ಅಗತ್ಯವಾಗಿದೆ. ಈ ವಿಷಯದ ಬಗ್ಗೆ ಜನರು ಮುಕ್ತವಾಗಿ ಮಾತನಾಡಲು ಹಿಂದೇಟು ಹಾಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಬಾಲಿವುಡ್ ಎಂದಿನಂತೆ ಮುಂದೆ ಬಂದಿದೆ. ವಾಸ್ತವವಾಗಿ, ಲೈಂಗಿಕ ಶಿಕ್ಷಣಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಅಕ್ಷಯ್ ಕುಮಾರ್ ಅವರು ʼಓ ಮೈ ಗಾಡ್ 2ʼ ಚಿತ್ರದಲ್ಲಿ ತೋರಿಸಿದ್ದರು. ಈಗ ಇದೇ ವಿಷಯಗಳನ್ನು ಮುಂದಿಟ್ಟುಕೊಂಡು ರಕುಲ್ ಪ್ರೀತ್ ಸಿಂಗ್ ಕೂಡ ಲೈಂಗಿಕ ಶಿಕ್ಷಣದ ಪಾಠ ಹೇಳಲು ಬರುತ್ತಿದ್ದಾರೆ.
ನಟಿ ಸಮಂತಾ ರುತ್ ಪ್ರಭು ತಾನೊಬ್ಬ ಫೈಟರ್ ಎಂಬುದನ್ನು ಮತ್ತೇ ಸಾಬೀತು ಮಾಡಿದ್ದಾರೆ. ಶಾಕುಂತಲಂ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟಿಯ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಕೆಲವರು, ಅವರ ಮುಖದ ಸೌಂದರ್ಯ ಕಳೆಗುಂದಿದೆ, ಹೊಳಪು ಕಡಿಮೆಯಾಗಿದೆ ಅಂತ ಪೋಸ್ಟ್ ಹಾಕಿದ್ದರು. ಅದಕ್ಕೆ ಸಮಂತ ಕೊಟ್ಟ ಉತ್ತರ ಹೃದಯಕ್ಕೆ ಬಲು ಹತ್ತಿರವಾಗಿದೆ.
kantara actor Kishore : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ಕುರಿತು ಪ್ರತಿಕ್ರಿಯೆ ನೀಡಿದ್ದ ಬಹುಭಾಷಾ ನಟ ಕಿಶೋರ್ ಅವರು ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಅವರು ನೀಡಿದ್ದ ಕೆಜಿಎಫ್ 2 ಮೈಂಡ್ಲೆಸ್ ಸಿನಿಮಾ ವಿಚಾರವಾಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುಧೀರ್ಘವಾದ ಬರಹದೊಂದಿದೆ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
Alia bhatt daughter : ಬಾಲಿವುಡ್ ಸ್ಟಾರ್ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮಗಳು ರಾಹಾ ಕಪೂರ್ ಚಿತ್ರಗಳನ್ನು ಕ್ಲಿಕ್ ಮಾಡದಂತೆ ಪಾಪರಾಜಿಗಳಿಗೆ ವಿನಂತಿಸಿದ್ದಾರೆ. ವರದಿಯ ಪ್ರಕಾರ ರಣಬೀರ್ ತಮ್ಮ ಫೋನ್ನಲ್ಲಿದ್ದ ಮಗಳ ಫೋಟೋವನ್ನು ಪ್ರೇಸ್ಮೀಟ್ನಲ್ಲಿ ಹಾಜರಿದ್ದ ಪ್ರತಿಯೊಬ್ಬ ಛಾಯಾಗ್ರಾಹಕರಿಗೆ ತೋರಿಸಿದ್ದಾರೆ. ಅವರೆಲ್ಲರೂ ಕ್ಯೂಟಾಗಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಕಪೂರ್ ಫ್ಯಾಮಿಲಿ ಪ್ರತಿಯೊಬ್ಬ ಛಾಯಾಗ್ರಾಹಕರಿಗೂ ತಮ್ಮ ಮನೆಮಗಳ ಫೋಟೋವನ್ನು ಕ್ಲಿಕ್ ಮಾಡದಂತೆ ಮನವಿ ಮಾಡಿದ್ದಾರೆ.
ನಟ ಸಲ್ಮಾನ್ ಖಾನ್ ಅವರು ಇತ್ತೀಚಿಗೆ ತಮ್ಮ 57ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡರು. ಸಲ್ಲು ಬರ್ತಡೇ ಪಾರ್ಟಿಗೆ ಬಾಲಿವುಡ್ ಮಂದಿಯಲ್ಲಿ ಸೇರಿದ್ದರು. ಶಾರುಖ್ ಖಾನ್ ಸೇರಿದಂತೆ ಸಲ್ಮಾನ್ ಗೆಳೆಯ, ಗೆಳತಿಯರು ಹಾಗೂ ಉದ್ಯಮಿಗಳು ಪಾರ್ಟಿಯಲ್ಲಿದ್ದರು. ಆದರೆ ಸಲ್ಮಾನ್ ಖಾನ್ ಅವರ ಗುಡ್ ಫ್ರೆಂಡ್ ಕಂಗನಾ ರನೌತ್ ಮಾತ್ರ ಮಿಸ್ ಆಗಿದ್ದು, ಹಲವಾರು ಗಾಸಿಫ್ಗಳಿಗೆ ಕಾರಣವಾಗಿದೆ.
ಕ್ರಿಕೆಟ್ ದೇವರು ಸಚಿನ್ ತೆಂಡಲ್ಕೂರ್ ಅವರ ಮುದ್ದು ಮಗಳು ಸಾರಾ ತೆಂಡೂಲ್ಕರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಅಪ್ಪನಂತೆ ಮಗಳು ಸಹ ಫುಲ್ ಫೇಮಸ್. ಈಗಾಗಲೇ ಇನ್ಸ್ಟಾಗ್ರಾಮ್ನಲ್ಲಿ ಎರಡು ಮಿಲಿಯನ್ ಫಾಲೋವರ್ಸ್ ಹೊಂದಿರುವ ಸಾರಾ ಇದೀಗ ಹೊಸ ಪ್ಲಾನ್ ಬುಕ್ ಒಂದನ್ನು ಬಿಡುಗಡೆ ಮಾಡುವ ಮೂಲಕ ಮತ್ತೆ ಟ್ರೆಂಡ್ ಕ್ರಿಯೆಟ್ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.