ʼಸೌಂದರ್ಯ ಮಾಸಿತುʼ ಎಂದವರಿಗೆ ಪ್ರೀತಿ ಮಾತು ಹೇಳಿದ ಸಮಂತಾ..! ಗ್ರೇಟ್‌ ಸ್ಯಾಮ್‌

ನಟಿ ಸಮಂತಾ ರುತ್ ಪ್ರಭು ತಾನೊಬ್ಬ ಫೈಟರ್ ಎಂಬುದನ್ನು ಮತ್ತೇ ಸಾಬೀತು ಮಾಡಿದ್ದಾರೆ. ಶಾಕುಂತಲಂ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟಿಯ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಕೆಲವರು, ಅವರ ಮುಖದ ಸೌಂದರ್ಯ ಕಳೆಗುಂದಿದೆ, ಹೊಳಪು ಕಡಿಮೆಯಾಗಿದೆ ಅಂತ ಪೋಸ್ಟ್‌ ಹಾಕಿದ್ದರು. ಅದಕ್ಕೆ ಸಮಂತ ಕೊಟ್ಟ ಉತ್ತರ ಹೃದಯಕ್ಕೆ ಬಲು ಹತ್ತಿರವಾಗಿದೆ.

Written by - Krishna N K | Last Updated : Jan 10, 2023, 05:28 PM IST
  • ನಟಿ ಸಮಂತಾ ರುತ್ ಪ್ರಭು ತಾನೊಬ್ಬ ಫೈಟರ್ ಎಂಬುದನ್ನು ಮತ್ತೇ ಸಾಬೀತು ಮಾಡಿದ್ದಾರೆ.
  • ಸ್ಯಾಮ್‌ ನಟಿಯ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು.
  • ಮುಖದ ಹೊಳಪು ಕಡಿಮೆಯಾಗಿದೆ ಅಂತ ಪೋಸ್ಟ್‌ ಹಾಕಿದವರಿಗೆ ಸಮಂತ ಕೊಟ್ಟ ಉತ್ತರ ಹೃದಯಕ್ಕೆ ಬಲು ಹತ್ತಿರವಾಗಿದೆ.
ʼಸೌಂದರ್ಯ ಮಾಸಿತುʼ ಎಂದವರಿಗೆ ಪ್ರೀತಿ ಮಾತು ಹೇಳಿದ ಸಮಂತಾ..! ಗ್ರೇಟ್‌ ಸ್ಯಾಮ್‌ title=

Samantha Ruth Prabhu : ನಟಿ ಸಮಂತಾ ರುತ್ ಪ್ರಭು ತಾನೊಬ್ಬ ಫೈಟರ್ ಎಂಬುದನ್ನು ಮತ್ತೇ ಸಾಬೀತು ಮಾಡಿದ್ದಾರೆ. ಶಾಕುಂತಲಂ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟಿಯ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಕೆಲವರು, ಅವರ ಮುಖದ ಸೌಂದರ್ಯ ಕಳೆಗುಂದಿದೆ, ಹೊಳಪು ಕಡಿಮೆಯಾಗಿದೆ ಅಂತ ಪೋಸ್ಟ್‌ ಹಾಕಿದ್ದರು. ಅದಕ್ಕೆ ಸಮಂತ ಕೊಟ್ಟ ಉತ್ತರ ಹೃದಯಕ್ಕೆ ಬಲು ಹತ್ತಿರವಾಗಿದೆ.

ಬಹಳ ದಿನಗಳ ಬಳಿಕ ಸಮಂತಾ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಸ್ಯಾಮ್‌ ಕೆಲವು ತಿಂಗಳುಗಳಿಂದ ಮಯೋಸಿಟಿಸ್ ವಿರುದ್ಧ ಹೋರಾಡುತ್ತಿದ್ದಾರೆ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಕೆಲವೊಂದಿಷ್ಟು ದಿನಗಳ ಕಾಲ ಅವರು ಚಿಕಿತ್ಸೆಗಾಗಿ ಅಮೇರಿಕಾದಲ್ಲಿದ್ದರು. ಅಲ್ಲದೆ, ಕೆಲ ದಿನಗಳ ಕಾಲ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ಮಯೋಸಿಟಿಸ್‌ ಬಹಳವಾಗಿ ಕಾಡಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಸಮಂತಾ ರುತ್ ಪ್ರಭು ದಕ್ಷಿಣ ಕೊರಿಯಾಕ್ಕೆ ಹೇಗೆ ಹಾರಲು ಯೋಜಿಸುತ್ತಿದ್ದಾರೆ ಎಂಬ ವರದಿಗಳಿವೆ. ಈ ಖಾಯಿಲೆಗೆ ಭಾರೀ ಔಷಧಿಗಳ ಅಗತ್ಯವಿರುತ್ತದೆ. ಒಬ್ಬರ ಜೀವನಶೈಲಿಯುನ್ನೂ ಈದು ತೀವ್ರವಾಗಿ ಬದಲಾಯಿಸುತ್ತದೆ. 

ಇದನ್ನೂ ಓದಿ: Oscar 2023 : ಆಸ್ಕರ್‌ಗೆ ನಾಮಿನೇಟ್‌ ಆದ ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ..!

ಇದೀಗ, ಸಮಂತಾ ರುತ್ ಪ್ರಭು ಅವರು ಅನಾರೋಗ್ಯದಿಂದ ತಮ್ಮ ಮುಖದ ಕಾಂತಿ ಮತ್ತು ಆಕರ್ಷಣೆಯನ್ನು ಕಳೆದುಕೊಂಡಂತೆ ಕಾಣುತ್ತಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಫೋಸ್ಟ್‌ ಒಂದನ್ನು ಹಾಕಲಾಗಿತ್ತು. ಕಳೆದ ಎರಡು ವರ್ಷಗಳು ಅವಳಿಗೆ ಕಠಿಣವಾಗಿದ್ದವು. 2021 ರಲ್ಲಿ, ಅವರು ತಮ್ಮ ಪತಿ ನಾಗ ಚೈತನ್ಯ ಅವರಿಂದ ಬೇರ್ಪಟ್ಟರು. ಈಗ, ಮಯೋಸಿಟಿಸ್‌ ಎಂದು ಸಮಂತಾ ಸೌಂದರ್ಯದ ಬಗ್ಗೆ ಬರೆದಿದ್ದರು. 

ಇದೀಗ ಆ ಫೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಸಮಂತಾ, ನನಗೆ ಬಂದ ಈ ಸ್ಥಿತಿ ನಿಮಗೆ ಯಾವತ್ತೂ ಬರಬಾರದು, ನನ್ನಂತೆ ನೀವು ಎಂದಿಗೂ ತಿಂಗಳುಗಳ ಕಾಲ ಚಿಕಿತ್ಸೆ ಮತ್ತು ಔಷಧಿಗಳ ಒಳಗಾಗಬಾರದು ಅಂತ ನಾನು ಪ್ರಾರ್ಥಿಸುತ್ತೇನೆ. ನಿಮ್ಮ ಹೊಳಪು ಹೆಚ್ಚಿಸಲು ನನ್ನ ಪ್ರೀತಿ ನಿಮಗಾಗಿ.. ಅಂತ ಬಲು ಆತ್ಮೀಯತೆಯಿಂದ ರಿಯಾಕ್ಟ್‌ ಮಾಡಿದ್ದಾರೆ. ಸದ್ಯ ಸಮಂತಾ ನಟನೆಯ ಶಾಕುಂತಲಂ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಟ್ರೇಲರ್‌ ಬಹಳ ಅದ್ಭುತವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News