Mission Majnu movie review : ಸಿದ್ಧಾರ್ಥ್‌ ʼಮಿಷನ್ ಮಜ್ನುʼ ನೋಡಿ ʼಸೂಪರ್ಬ್... ಸೂಪರ್ಬ್ʼ ಎಂದ ಕಿರಾಯಾ..!

ಬಾಲಿವುಡ್‌ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಮುಂಬರುವ ಚಿತ್ರ ʼಮಿಷನ್ ಮಜ್ನುʼ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಸಿನಿಮಾ ನೋಡಲು ಸಿದ್ಧಾರ್ಥ್‌ ಗೆಳತಿ ಕಿಯಾರಾ ಅಡ್ವಾಣಿ ಕೂಡ ಬಂದಿದ್ದರು. ಸ್ಟಾರ್‌ ಜೋಡಿಯ ಮದುವೆಯ ರೂಮರ್ಸ್‌ ನಡುವೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು, ಕುತೂಹಲ ಮೂಡಿಸಿದೆ. ಅಲ್ಲದೆ, ʼಮಿಷನ್‌ ಮಜ್ನುʼ ಸಿನಿಮಾ ಕುರಿತು ಮಾತನಾಡುವಾಗ ಕಿಯಾರಾ ನಾಚಿ ನೀರಾಗಿದ್ದು, ಇವರಿಬ್ಬರ ನಡುವೆ ಏನೋ ಇದೆ ಎನ್ನುವ ಸಂಶಯಕ್ಕೆ ಸಾಕ್ಷಿ ಸಿಕ್ಕಂತ್ತಿತ್ತು.

Written by - Krishna N K | Last Updated : Jan 18, 2023, 08:52 PM IST
  • ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಮುಂಬರುವ ಚಿತ್ರ ʼಮಿಷನ್ ಮಜ್ನುʼ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
  • ಸಿನಿಮಾ ನೋಡಲು ಸಿದ್ಧಾರ್ಥ್‌ ಗೆಳತಿ ನಟಿ ಕಿಯಾರಾ ಅಡ್ವಾಣಿ ಕೂಡ ಬಂದಿದ್ದರು.
  • ಗೆಳೆಯನ ಚಿತ್ರ ನೋಡಿ "ಸೂಪರ್ಬ್... ಸೂಪರ್ಬ್" ಎಂದು ಕಿಯಾರಾ ಹಾಡಿ ಹೊಗಳಿದರು.
Mission Majnu movie review : ಸಿದ್ಧಾರ್ಥ್‌ ʼಮಿಷನ್ ಮಜ್ನುʼ ನೋಡಿ ʼಸೂಪರ್ಬ್... ಸೂಪರ್ಬ್ʼ ಎಂದ ಕಿರಾಯಾ..! title=

Mission majnu movie review : ಬಾಲಿವುಡ್‌ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಮುಂಬರುವ ಚಿತ್ರ ʼಮಿಷನ್ ಮಜ್ನುʼ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಸಿನಿಮಾ ನೋಡಲು ಸಿದ್ಧಾರ್ಥ್‌ ಗೆಳತಿ ಕಿಯಾರಾ ಅಡ್ವಾಣಿ ಕೂಡ ಬಂದಿದ್ದರು. ಸ್ಟಾರ್‌ ಜೋಡಿಯ ಮದುವೆಯ ರೂಮರ್ಸ್‌ ನಡುವೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು, ಕುತೂಹಲ ಮೂಡಿಸಿದೆ. ಅಲ್ಲದೆ, ʼಮಿಷನ್‌ ಮಜ್ನುʼ ಸಿನಿಮಾ ಕುರಿತು ಮಾತನಾಡುವಾಗ ಕಿಯಾರಾ ನಾಚಿ ನೀರಾಗಿದ್ದು, ಇವರಿಬ್ಬರ ನಡುವೆ ಏನೋ ಇದೆ ಎನ್ನುವ ಸಂಶಯಕ್ಕೆ ಸಾಕ್ಷಿ ಸಿಕ್ಕಂತ್ತಿತ್ತು.

ನಟಿ ಕಿಯಾರಾ ತನ್ನ ಗೆಳೆಯನ ಚಿತ್ರ ʼಮಿಷನ್ ಮಜ್ನುʼ ನೋಡಿ ಫುಲ್ ಹಾಡಿ ಹೊಗಳಿದ್ದಾರೆ. ಚಿತ್ರದ ಬಗ್ಗೆ ಅವರ ಪ್ರತಿಕ್ರಿಯೆಯ ಬಗ್ಗೆ ಪ್ರಶ್ನಿಸಿದಾಗ, ನಾಚಿ ನೀರಾದ ಚೆಲುವೆ, ಸಂತೋಷದಿಂದ "ಸೂಪರ್ಬ್... ಸೂಪರ್ಬ್" ಎಂದು ಹೇಳಿದರು. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಮಿಷನ್‌ ಮಜ್ನುಗೆ ಕಿಯಾರಾ ಫುಲ್‌ ಮಾರ್ಕ್ಸ್‌ ನೀಡಿದ್ದಾರೆ. 

ಇದನ್ನೂ ಓದಿ: Janhvi Kapoor Video : ʼಅಲ್ಲಿಯವರೆಗೆ ತಡೆಯೊಕೆ ಆಗಲ್ಲʼ ಜಾನ್ವಿ ಕಪೂರ್‌ ವಿಡಿಯೋ ವೈರಲ್‌..!

ಮಿಷನ್ ಮಜ್ನು ಸ್ಕ್ರೀನಿಂಗ್‌ ವೇಳೆ ಒಟ್ಟಿಗೆ ಕಾಣಿಸಿಕೊಂಡ ಕ್ಯೂಟ್‌ ಜೋಡಿ ನೋಡಿ ಇಬ್ಬರು ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದಾರೆ. ಕಿಯಾರಾ ಅಡ್ವಾಣಿ ಸಿದ್ಧಾರ್ಥ್‌ ಸಿನಿಮಾಗೆ ಬೆಂಬಲಿಸಿದ್ದಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಇದೇ ರೀತಿ ಲೈಫ್‌ ಲಾಂಗ್‌ ಅವರಿಗೆ ಸಫೋರ್ಟ್‌ ಮಾಡಿ ಅಂತ ಇಬ್ಬರ ಮದುವೆ ವಿಚಾರನ್ನು ಪರೋಕ್ಷವಾಗಿ ಪ್ರಸ್ತಾಪ ಮಾಡಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಪೋಸ್ ನೀಡುವಂತೆ ಪಾಪರಾಜಿ ಕೇಳಿದಾಗ ಕಿಯಾರಾ ನಾಚಿಕೆ ನೀರಾದ ದೃಶ್ಯ ವೀಡಿಯೊದಲ್ಲಿದೆ.. ವೀಕ್ಷಿಸಿ.

ಸಿದ್ಧಾರ್ಥ್ ಮತ್ತು ಕಿಯಾರಾ ʼಶೇರ್ಷಾʼ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಪ್ರೀತಿಯಲ್ಲಿ ಬಿದ್ದರು ಎನ್ನಲಾಗಿದೆ. ಕಾರ್ಗಿಲ್ ಹೀರೋ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಜೀವನಾಧಾರಿತ ಚಿತ್ರದಲ್ಲಿ ದಂಪತಿಗಳು ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದರು. ಅಂದಿನಿಂದ ಈ ಮುದ್ದಾದ ಜೋಡಿ ಪ್ರೇಕ್ಷಕರ ಗಮನವನ್ನು ಸೆಳೆದಿದೆ. ಮಿಷನ್ ಮಜ್ನು ಒಂದು ಸ್ಪೈ ಥ್ರಿಲ್ಲರ್ ಚಿತ್ರವಾಗಿದ್ದು, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

ಇದನ್ನೂ ಓದಿ:  ಅಭಿಮಾನಿಯ ಅಗಲಿಕೆಗೆ ಕಂಬನಿ ಮಿಡಿದ ʼದಾಸʼ..! ಪ್ಯಾನ್ಸ್‌ಗೆ ದಚ್ಚು ಮಾಡಿದ ಮನವಿ ಏನು..?

ಶಂತನು ಬಾಗ್ಚಿ ಅವರ ನಿರ್ದೇಶನದ ಈ ಚಿತ್ರವು ನೈಜ ಘಟನೆಗಳಿಂದ ಪ್ರೇರಿತವಾಗಿದೆ. 1971 ರ ಇಂಡೋ-ಪಾಕಿಸ್ತಾನ ಯುದ್ಧದ ಮೊದಲು ನಡೆದ ಭಾರತದ ರಹಸ್ಯ ಕಾರ್ಯಾಚರಣೆಯ ಕಾಲ್ಪನಿಕ ಕಥೆಯಾಗಿದೆ. 2023 ರ ಜನವರಿ 20 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News