Anamadheya Ashok Kumar: ಕಿಶೋರ್ ಕುಮಾರ್ ಹಾಗೂ "ಆಚಾರ್ & ಕೋ" ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ಹರ್ಷಿಲ್ ಕೌಶಿಕ್ ಪ್ರಮುಖಪಾತ್ರದಲ್ಲಿ ನಟಿಸಿರುವ ಚಿತ್ರ "ಅನಾಮಧೇಯ ಅಶೋಕ್ ಕುಮಾರ್". ಸಾಗರ್ ಕುಮಾರ್ ಚೊಚ್ಚಲ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಹಾಗೂ ಚಿತ್ರೀಕರಣ ನಂತರದ ಚಟುವಟಿಕೆಗಳು ಪೂರ್ಣವಾಗಿದ್ದು, ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ನಿಜ ನೀವು ಸಾರ್ವಜನಿಕ ಜೀವನಕ್ಕೇ ಅಲ್ಲ, ಮನುಷ್ಯನಾಗಿರಲೇ ಅಯೋಗ್ಯ.. ನಿಮ್ಮಂಥವರ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹೆಸರೂ ಮಹಾಪಾಪ. ಚಿಲ್ಲರೆ ಕಳ್ಳನನ್ನೂ ನಾಚಿಸುವ, ಸತ್ಯ ಸಿದ್ಧಾಂತ ನೈತಿಕತೆ ವ್ಯಕ್ತಿತ್ವ.. ಅದಾವುದೂ ಇಲ್ಲದ ವಿಶ್ವ ಕಂಡ.. ಅತೀ ಸುಳ್ಳುಗಾರ, ಅತೀ ಪುಕ್ಕಲು ಎಂದು ಮೋದಿ ವಿರುದ್ಧ ನಟ ಕಿಶೋರ್ ಹರಿಹಾಯ್ದಿದ್ದಾರೆ.
ಸುಮಾರು 100 ಸಿನಿಮಾಗಳಲ್ಲಿ ನಟ ಕಿಶೋರ್ ನಟಿಸಿದ್ದಾರೆ.. ಈ ಬಗ್ಗೆ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿದ ಕಿಶೋರ್, ಒಳ್ಳೆಯ ಮಾಧ್ಯಮದಲ್ಲಿ ಇದ್ದೇನೆ ಅನ್ನೋ ತೃಪ್ತಿ ಇದೆ ಎಂದಿದ್ದಾರೆ..
ಬರೀ ಕನ್ನಡ ಬಾವುಟ ಹಾರಿಸೋದು ಕನ್ನಡ ಹೋರಾಟವಲ್ಲ. ಕನ್ನಡ ಮಾತಾಡೋ ಪ್ರತಿಯೊಬ್ಬನೂ ಕನ್ನಡ ಹೋರಾಟಗಾರ ಎಂದು ನಟ ಕಿಶೋರ್ ಹೇಳಿದ್ದಾರೆ.. ʻಪೆಂಟಗನ್ʼ ಸಿನಿಮಾ ಕುರಿತಂತೆ ಜೀ ಕನ್ನಡ ನ್ಯೂಸ್ ಜೊತೆ ಕಿಶೋರ್ ಮಾತನಾಡಿದ್ದಾರೆ..
ಕೊಲ್ಲುವ ಶಕ್ತಿ ಇರುವ ದೈವಕ್ಕೆ ಮನಪರಿವರ್ತನೆ ಮಾಡೋ ಶಕ್ತಿ ಇಲ್ವಾ ಎಂದು ನೀಡಿದ್ದ ಹೇಳಿಕೆಗೆ ನಟ ಕಿಶೋರ್ ಸ್ಪಷ್ಟನೆ ನೀಡಿದ್ದಾರೆ.. ʻಕಾಂತಾರʼ ಮೂಢನಂಬಿಕೆಯಾಗಿ ಬದಲಾಗೋ ಸಾಧ್ಯತೆ ಇತ್ತು.. ಆದರೆ ಕಾಂತಾರ ಉದ್ದೇಶ ಅದಲ್ಲ ಎಂದು ನಟ ಕಿಶೋರ್ ಹೇಳಿದ್ದಾರೆ.
ಯಾವುದೇ ಮಾಧ್ಯಮವಾದ್ರೂ ಜನತೆಯ ಧ್ವನಿಯಾಗಿರಬೇಕು ಎಂದು ನಟ ಕಿಶೋರ್ ಹೇಳಿದ್ದಾರೆ.. ಸರ್ಕಾರದ ರೀತಿ ನಾವು ಕೂಡಾ ಜರ ದುಡ್ಡಿನಿಂದ ಬದುಕುತ್ತಿದ್ದೇವೆ.. ಹಿಂದೂ-ಮುಸ್ಲಿಂ ಎಂದು ಒಡೆಯುತ್ತಿದ್ದಾರೆ. ಮುಸ್ಲಿಮರು ಟ್ಯಾಕ್ಸ್ ಕೊಡದಿದ್ರೆ ಸರ್ಕಾರ ಹೇಗೆ ನಡೆಯುತ್ತೆ ಎಂದು ಪ್ರಶ್ನಿಸಿದ್ದಾರೆ.
ನಾನು ಹೇಳೋದೆಲ್ಲ ಸರಿ ಅಂತಾ ಹೇಳೋದಕ್ಕೆ ಆಗಲ್ಲ... ನಾನು ಹೇಳೋದು ನನ್ನ ಅನಿಸಿಕೆ ಅಷ್ಟೇ ಎಂದು ನಟ ಕಿಶೋರ್ ಹೇಳಿದ್ದಾರೆ. ಜೀ ಕನ್ನಡ ನ್ಯೂಸ್ಗೆ ನೀಡಿರೋ ಸಂದರ್ಶನದಲ್ಲಿ ಕಿಶೋರ್ ಹಲವು ವಿಚಾರ ಹಂಚಿಕೊಂಡಿದ್ದಾರೆ..
ಬಾಲಿವುಡ್ ಪರ ನಿಲ್ಲಬೇಕು ಎಂದು ನೀಡಿದ್ದ ಹೇಳಿಕೆ ಬಗ್ಗೆ ನಟ ಕಿಶೋರ್ ಸ್ಪಷ್ಟನೆ ನೀಡಿದ್ದಾರೆ.. ನೋವಿನಿಂದ ಬಂದ ಹೋರಾಟ ಅರ್ಥಪೂರ್ಣ ಎಂದು ನಟ ಕಿಶೋರ್ ಹೇಳಿದ್ದಾರೆ.. ಜೀ ಕನ್ನಡ ನ್ಯೂಸ್ಗೆ ನೀಡಿರೋ ವಿಶೇಷ ಸಂದರ್ಶನ ಇಲ್ಲಿದೆ..
kantara actor Kishore : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ಕುರಿತು ಪ್ರತಿಕ್ರಿಯೆ ನೀಡಿದ್ದ ಬಹುಭಾಷಾ ನಟ ಕಿಶೋರ್ ಅವರು ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಅವರು ನೀಡಿದ್ದ ಕೆಜಿಎಫ್ 2 ಮೈಂಡ್ಲೆಸ್ ಸಿನಿಮಾ ವಿಚಾರವಾಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುಧೀರ್ಘವಾದ ಬರಹದೊಂದಿದೆ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.