Elephant Attack On Women: 2 ತಿಂಗಳ ಹಿಂದೆ ಅರೆನೂರು ಬಳಿ ಚಿನ್ನಿ ಎಂಬುವರು ಕಾಡಾನೆ ದಾಳಿಗೆ ಬಲಿಯಾಗಿದ್ದರು. ಇದೀಗ 45 ವರ್ಷದ ವೀಣಾ ಸಾವನ್ನಪ್ಪಿದ್ದಾರೆ. ನಿಮಗೆ ಇನ್ನೆಷ್ಟು ಬಲಿ ಬೇಕು? ಎಂದು ಚಿಕ್ಕಮಗಳೂರು ತಾಲೂಕಿನ ಆಲ್ದೂರು ಅರಣ್ಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ವಿಕಾಸಸೌಧದಲ್ಲಿಂದು ಸಭೆ ನಡೆಸಿದ ಸಚಿವರು, ಮಾನವ – ವನ್ಯಮೃಗಗಳ ಸಂಘರ್ಷ ಹೆಚ್ಚಳದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಅಮೂಲ್ಯವಾದ ಮಾನವ ಪ್ರಾಣ ಹಾನಿಯೂ ಆಗಬಾರದು, ಅದೇ ವೇಳೆ ವನ್ಯ ಮೃಗಗಳ ಕೂಡ ಅಕ್ರಮ ವಿದ್ಯುತ್ ಬೇಲಿ ಸ್ಪರ್ಶದಿಂದ ಹಾಗೂ ಬೇಲಿಯಲ್ಲಿ ಹಾಕುವ ಉರುಳಿಗೆ ಸಿಲುಕಿ ಸಾವಿಗೀಡಾಗಬಾರದು.
Elephant Attack: ಅಪ್ಪ ಒಂದು ಭಾಗದಲ್ಲಿ ಮಗ ಒಂದು ಭಾಗದಲ್ಲಿ ಪೊರಕೆ ಕಡ್ಡಿ ಕೀಳುತ್ತಿದ್ದಾಗ ಆನೆ ದಾಳಿ ಮಾಡಿದೆ, ಪ್ರಭುಸ್ವಾಮಿ ಸ್ಥಳದಲ್ಲೇ ಅಸುನೀಗಿದ್ದಾರೆ. ಅದೃಷ್ಟವಶಾತ್ ಮಗ ಪಾರಾಗಿದ್ದಾನೆ.
Karnataka Vidhansabha Chunav 2023 Latest Update: ಮತದಾನ ಮಾಡಲು ಹಳೆ ಮಾಟಳ್ಳಿ ಗ್ರಾಮದಿಂದ ತೋಕೆರೆ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ವರದಿ ಆಗಿದೆ. ಮೃತ ವ್ಯಕ್ತಿಯನ್ನು ಹನೂರು ತಾಲೂಕಿನ ತೋಕರೆ ಗ್ರಾಮದ ಪುಟ್ಟಸ್ವಾಮಿ (42) ಎಂದು ಗುರುತಿಸಲಾಗಿದೆ.
ಆನೆ ದಾಳಿಯಿಂದ ಬೈಕ್ ಸವಾರ ಸ್ವಲ್ಪದರಲ್ಲೇ ಪಾರಾಗಿರುವ ಘಟನೆ ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ತಲೆಮಲೈಯಲ್ಲಿ ನಡೆದಿದೆ. ನೈನಿತಾಳಪುರಂ ಗ್ರಾಮದ ರಾಮಸ್ವಾಮಿ ಎಂಬವರು ಪ್ರಾಣಪಾಯದಿಂದ ಪಾರಾದ ಸವಾರ. ರಸ್ತೆ ಮಧ್ಯೆ ಬಂದು ನಿಂತ ಆನೆಯನ್ನು ಗಮನಿಸಿದ ರಾಮಸ್ವಾಮಿ ದಿಢೀರ್ ಬಂದಿದ್ದಾರೆ. ಆನೆ ನೋಡುತ್ತಿದ್ದಂತೆ ಆಯತಪ್ಪಿ ಬಿದ್ದಿದ್ದಾರೆ. ಬಳಿಕ ಇನ್ನಿತರ ಸವಾರರ ಸಮಯಪ್ರಜ್ಞೆಯಿಂದ ಆನೆ ತಿರುಗುವ ಮುನ್ನ ಇತ್ತ ಕಡೆ ಬಂದಿದ್ದಾರೆ.
Elephant Attack On Car : ಭಾರತದಲ್ಲಿ ಜನಸಂಖ್ಯೆಯ ಹೆಚ್ಚಳದಿಂದಾಗಿ ಕಾಡನ್ನು ನಾಶ ಪಡಿಸಿ ಜನರು ಮನೆಗಳನ್ನು ಕಟ್ಟಲು ಪ್ರಾರಂಭಿಸಿದ್ದಾರೆ ಮತ್ತು ಕಾಡು ಪ್ರಾಣಿಗಳು ಆ ಮನೆಗಳ ಸುತ್ತಲೂ ತಿರುಗಲು ಇದು ಕಾರಣವಾಗಿದೆ. ಕೆಲವೊಮ್ಮೆ ಪ್ರಾಣಿಗಳು ಕಾಡಿನ ಸಮೀಪ ವಾಸಿಸುವ ಜನರ ಮೇಲೆ ದಾಳಿ ಮಾಡುತ್ತವೆ.
ಏಕಾಏಕಿ ಗ್ರಾಮದೊಳಗೆ ಎಂಟ್ರಿ ಕೊಟ್ಟ ಒಂಟಿ ಸಲಗ. ಕಾಡಾನೆ ಬರುತ್ತಿದ್ದಂತೆ ಓಡಿ ಹೋದ ಜನ, ಜಾನುವಾರುಗಳು. ಒಂಟಿಸಲಗ ಕಂಡು ಮನೆಯೊಳಗೆ ಓಡಿ ಹೋದ ಮಹಿಳೆಯರು. ಹಾಸನ ಜಿಲ್ಲೆ ಅರಕಲಗೂಡು ತಾ. ಕೆಳಗಳಲೆ ಗ್ರಾಮದಲ್ಲಿ ಘಟನೆ.
ಹನೂರು ತಾಲೂಕಿನ ಹುತ್ತೂರು ಗ್ರಾಪಂ ವ್ಯಾಪ್ತಿಯ ಕತ್ತೆಕಾಲುಪೊಡು ಗ್ರಾಮದ ನಿವಾಸಿ ಮಾದೇಶ್(45) ಗಾಯಗೊಂಡಾತ.ಮಾದೇಶ್ ಅಂಧ ವ್ಯಕ್ತಿಯಾಗಿದ್ದು ಮಧ್ಯಾಹ್ನ ಜಮೀನಿನಲ್ಲಿದ್ದಾಗ ಕಾಡಾನೆ ದಾಳಿ ಮಾಡಿದೆ. ಪರಿಣಾಮ ಕೈ ಹಾಗೂ ಕಾಲು ಮುರಿದಿದೆ.
ಶಿವಮೊಗ್ಗದ ಜಿಲ್ಲೆಯ ಹಲವು ಗ್ರಾಮಸ್ಥರು ಕಾಡು ಪ್ರಾಣಿಗಳ ಉಪಟಳದಿಂದ ನಲುಗಿ ಹೋಗಿದ್ದಾರೆ.. ಕಷ್ಟಪಟ್ಟು ಬೆಳೆದ ಬೆಳೆಗಳು ನಮ್ಮ ಕೈಗೆ ಸಿಗುತ್ತಿಲ್ಲ. ದಯಮಾಡಿ ಇವುಗಳ ಕಾಟದಿಂದ ನಮಗೆ ರಕ್ಷಣೆ ನೀಡಿ ಅಂತಾ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ.
Viral Video : ಜನಸಂಖ್ಯೆ ಹೆಚ್ಚಾದಂತೆ ಮತ್ತು ಪ್ರಾಣಿಗಳ ಆವಾಸಸ್ಥಾನಗಳು ಕಳೆದುಹೋದಂತೆ ಮಾನವ-ವನ್ಯಜೀವಿ ಸಂಘರ್ಷಗಳು ವ್ಯಾಪಕವಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ, ವಸತಿ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ವೀಕ್ಷಣೆ ಮತ್ತು ದಾಳಿಗಳ ಸಂಖ್ಯೆ ಹೆಚ್ಚಾಗಿದೆ.
Wedding Photoshoot: ಹಲವು ಬಾರಿ ಆನೆಗಳ ದಾಳಿಯ ವಿಡಿಯೋಗಳು ವೈರಲ್ ಆಗುತ್ತವೆ. ರಸ್ತೆಯಲ್ಲಿ ನಡೆಯುತ್ತಿರುವವರ ಮೇಲೆ ಆನೆಗಳು ದಾಳಿ ಮಾಡಿದ್ದನ್ನು ಅಥವಾ ಸಫಾರಿಗೆ ಹೋದವರ ಮೇಲೆ ದಾಳಿಗೆ ಮುಂದಾಗಿದ್ದನ್ನು ನಾವು ಕಾಣಬಹುದು. ಇತ್ತೀಚೆಗೆ ಇಂತಹದ್ದೇ ಒಂದು ವಿಡಿಯೋ ಎಲ್ಲಡೆ ವೈರಲ್ ಆಗಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಕುಂದೂರು ಗ್ರಾಮದಲ್ಲಿ ಆನೆ ದಾಳಿಗೆ ಮಹಿಳೆ ಬಲಿಯಾಗಿದ್ದು ಸಾಂತ್ವನ ಹೇಳಲು ಬಂದ ಶಾಸಕ ಕುಮಾರಸ್ವಾಮಿ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ. ಕೆಲ ದುಷ್ಕರ್ಮಿಗಳು ಸಂಚು ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಗುಂಡಾಪುರ ಗ್ರಾಮದಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ. ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಗುಂಡಾಪುರದಲ್ಲಿ ಅಪಾರ ಪ್ರಮಾಣದ ಹಲಸು ನಾಶವಾಗಿದೆ. ಕಾಳೇಗೌಡ ಎಂಬುವವರ ಜಮೀನಿನ ಬೆಳೆ ಸಂಪೂರ್ಣ ನಾಶವಾಗಿದೆ..
ಒಂದು ಕ್ಷಣ ಈತನ ಪ್ರಾಣವೇ ಹೋದಂಗಾಗಿತ್ತು.. ಸುಮ್ಮನೆ ನಿಂತಿದ್ದೋನ ಹಿಂದೆ ಕಳ್ಳನ ರೀತಿ ಮೆಲ್ಲನೆ ಆನೆಯೊಂದು ಬಂದು ನಿಂತಿತ್ತು.. ಯಾವುದೇ ಸದ್ದು ಮಾಡದ ಆನೆ ಕಾಲಿನಿಂದಲೇ ಮಣ್ಣನ್ನು ಎರಚಿದೆ. ಆಗಲೇ ಆತನಿಗೆ ಆನೆ ಇರೋದು ಗೊತ್ತಾಗಿದೆ.. ಹಿಂದೆ ತಿರುಗಿ ನೋಡಿದಾಗ ಆತನ ಪ್ರಾಣವೇ ಹೋದಂಗಾಗಿತ್ತು. ಕೂಡಲೇ ಆತ ಕಾಲಿಗೆ ಬುದ್ಧಿ ಹೇಳಿದ್ದಾನೆ.. ಕ್ಯಾಮರಾದಲ್ಲಿ ಸೆರೆಯಾಗಿರೋ ಈ ದೃಶ್ಯ ಈಗ ವೈರಲ್ ಆಗಿದೆ. ಆದ್ರೆ ಘಟನೆ ನಡೆದಿರೋ ಎಲ್ಲಿ ಅನ್ನೋದು ಗೊತ್ತಾಗಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.