ಆಕ್ಸಿಡೆಂಟ್ ನಿಂದಾಗಿ ಕ್ರಿಕೆಟ್ ಜೀವನ ಮುಗಿದೇ ಹೋಯಿತು ಎನ್ನುವಾಗ ಪುಟಿದೆದ್ದ ರಿಷಬ್ ಪಂತ್ !ಚೇತರಿಕೆಗೆ ಸಹಾಯವಾಗಿದ್ದು ಅವರ ಈ ಡಯಟ್

Rishabh Pant Recovery Diet:ಷಬ್ ಪಂತ್ ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿದ್ದರು. ಇದಾದ ನಂತರ ಅವರ ವೃತ್ತಿಜೀವನಕ್ಕೆ ಗ್ರಹಣ ಹಿಡಿದ ಹಾಗೆ ಆಯಿತು. ಹಾಗಂತ ರಿಷಬ್ ಪಂತ್ ಸುಮ್ಮನೆ ಕುಳಿತಿರಲಿಲ್ಲ. ಕ್ರಿಕೆಟ್ ಲೋಕಕ್ಕೆ ಮತ್ತೆ ಮರಳಲು ಬೇಕಾಗುವ ಸರ್ವ ಪ್ರಯತ್ನವನ್ನೂ ಮಾಡಿದ್ದಾರೆ.

Written by - Ranjitha R K | Last Updated : Nov 25, 2024, 01:57 PM IST
  • ಐಪಿಎಲ್‌ನ ಮೆಗಾ ಹರಾಜಿನಲ್ಲಿ 27 ಕೋಟಿ ರೂ.ಗೆ ಖರೀದಿಯಾದ ಪಂತ್
  • ಲಕ್ನೋ ಸೂಪರ್‌ಜೈಂಟ್ ತಂಡದ ಭಾಗವಾಗಿರುವ ಪಂತ್
  • ಕ್ರಿಕೆಟ್ ಲೋಕಕ್ಕೆ ಮತ್ತೆ ಮರಳಲು ಬೇಕಾಗುವ ಸರ್ವ ಪ್ರಯತ್ನ
ಆಕ್ಸಿಡೆಂಟ್ ನಿಂದಾಗಿ ಕ್ರಿಕೆಟ್ ಜೀವನ ಮುಗಿದೇ ಹೋಯಿತು ಎನ್ನುವಾಗ ಪುಟಿದೆದ್ದ ರಿಷಬ್ ಪಂತ್ !ಚೇತರಿಕೆಗೆ ಸಹಾಯವಾಗಿದ್ದು ಅವರ ಈ ಡಯಟ್  title=

Rishabh Pant Recovery Diet : ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರನ್ನು ಐಪಿಎಲ್‌ನ ಮೆಗಾ ಹರಾಜಿನಲ್ಲಿ 27 ಕೋಟಿ ರೂ.ಗೆ ಖರೀದಿಸಲಾಗಿದೆ. ಇದೀಗ ಲಕ್ನೋ ಸೂಪರ್‌ಜೈಂಟ್ ತಂಡದ ಭಾಗವಾಗಿರುವ ಪಂತ್, ಈ ಪಂದ್ಯಾವಳಿಯ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಒಂದು ವರ್ಷಕ್ಕೂ ಮುನ್ನ ಅಂದರೆ 2023 ರಲ್ಲಿ, ರಿಷಬ್ ಪಂತ್ ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿದ್ದರು. ಇದಾದ ನಂತರ ಅವರ ವೃತ್ತಿಜೀವನಕ್ಕೆ ಗ್ರಹಣ ಹಿಡಿದ ಹಾಗೆ ಆಯಿತು. ಹಾಗಂತ ರಿಷಬ್ ಪಂತ್ ಸುಮ್ಮನೆ ಕುಳಿತಿರಲಿಲ್ಲ. ಕ್ರಿಕೆಟ್ ಲೋಕಕ್ಕೆ ಮತ್ತೆ ಮರಳಲು ಬೇಕಾಗುವ ಸರ್ವ ಪ್ರಯತ್ನವನ್ನೂ ಮಾಡಿದ್ದಾರೆ.

ಅಪಘಾತಕ್ಕೆ ಗುರಿಯಾಗಿದ್ದ ರಿಷಬ್ ಪಂತ್ ಅತಿಯಾದ ಔಷಧಿಗಳನ್ನು ತೆಗೆದುಕೊಳ್ಳುತಿದ್ದರು. ಇದರಿಂದ ಅವರು ಜೀರ್ಣಕ್ರಿಯೆ ಮತ್ತು ಗ್ಯಾಸ್ಟ್ರಿಕ್  ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವಂತಾಗಿತ್ತು.

ಇದನ್ನೂ ಓದಿ : ಮಜ್ಜಿಗೆ ಜೊತೆ ಈ ಚಿಕ್ಕ ಕಾಳು ಬೆರೆಸಿ ಒಮ್ಮೆ ಕುಡಿದರೆ ಸಾಕು.. 45 ದಿನದವರೆಗೆ ಹೆಚ್ಚಾಗೋದೇ ಇಲ್ಲ ಶುಗರ್‌ ಲೆವಲ್‌!

ಖಿಚಡಿಯೊಂದಿಗೆ ಡಯಟ್ ಪ್ರಾರಂಭ :
ಪಂತ್ ಅವರಿಗೆ ಮೊದಲ ಎರಡು ವಾರ ಖಿಚಡಿಯನ್ನು ನೀಡಲಾಗಿತ್ತು. ಇದನ್ನು ಪ್ರೆಶರ್ ಕುಕ್ಕರ್‌ನಲ್ಲಿ ಅಕ್ಕಿ ಮತ್ತು ತೊಗರಿಬೇಳೆಯನ್ನು ಬೆರೆಸಿ ತಯಾರಿಸಲಾಗುತ್ತದೆ. ಇದು ದೇಹಕ್ಕೆ ಪೌಷ್ಟಿಕಾಂಶ ಮಾತ್ರವಲ್ಲ, ಜೀರ್ಣಿಸಿಕೊಳ್ಳಲು ಕೂಡಾ ಸುಲಭವಾಗಿದೆ. ಹೆಚ್ಚುವರಿ ಪೋಷಣೆಗಾಗಿ ಕೆಲವು ತರಕಾರಿಗಳನ್ನು ಕಿಚಡಿಗೆ ಸೇರಿಸಲಾಯಿತು.

ಜ್ಯೂಸ್ ಕುಡಿಯಲು ಸಲಹೆ:
ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಕಡಿಮೆ ಮಾಡಲು, ಜ್ಯೂಸ್ ಅನ್ನು ಆಹಾರದಲ್ಲಿ ಸೇರಿಸಲಾಯಿತು. ಇದು ಉರಿಯೂತದ ಮತ್ತು ಕ್ಷಾರೀಯ ಸ್ವಭಾವವನ್ನು ಹೊಂದಿದೆ. ಅದರಲ್ಲಿ ಕ್ಯಾರೆಟ್, ಬೀಟ್ರೂಟ್, ನೆಲ್ಲಿಕಾಯಿ, ಪುದೀನಾ, ಕೊತ್ತಂಬರಿ, ಓಮ, ಸೌತೆಕಾಯಿ ಮತ್ತುಕುಂಬಳಕಾಯಿ ತರಕಾರಿಗಳನ್ನು ಬೆರೆಸಲಾಯಿತು.

ವೆಜ್ ಡಯಟ್ ನಿಂದ ಹಸಿವಿನಲ್ಲಿ ಹೆಚ್ಚಳ :
ರಿಷಬ್ ಪಂತ್ ಚಿಕನ್ ಪ್ರಿಯರಾಗಿದ್ದರೂ, ಆರಂಭಿಕ ವಾರಗಳಲ್ಲಿ ಅವರಿಗೆ ಕೇವಲ ವೆಜ್ ಆಹಾರವನ್ನು ಮಾತ್ರ ನೀಡಲಾಗಿತ್ತು. ಈ ಸಮಯದಲ್ಲಿ, ಅವರು ಜೋಳದ ಪರಾಠ,  ಚೀನೀಕಾಯಿ ಪ್ಯಾನ್‌ಕೇಕ್, ವೆಜ್ ಕಬಾಬ್ ಮತ್ತು ಸೂಪ್ ಅನ್ನು ನೀಡಲಾಯಿತು.  ಇದರಿಂದಾಗಿ ಅವರ ಹಸಿವು ಮತ್ತೆ ಹೆಚ್ಚಾಗಲು ಆರಂಭವಾಯಿತು. ಹೀಗಾಗಿ ಅವರಿಗೆ ನಂತರ ಸಾಮಾನ್ಯ ಊಟ ನೀಡುವುದು ಸಾಧ್ಯವಾಯಿತು. ಡಯಟ್ ನಲ್ಲಿ ಹುರಿದ ಬೇಳೆ, ಬೆಲ್ಲ ಮತ್ತು ತುಪ್ಪವನ್ನು ಈ ಆಹಾರದಲ್ಲಿ ಸೇರಿಸಲಾಯಿತು. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ರಿಷಬ್ ಪಂತ್ ಅವರ ಫಿಟ್ನೆಸ್ ಜರ್ನಿ ಪ್ರಾರಂಭವಾದಾಗ, ಅವರ ಆಹಾರಕ್ರಮದಲ್ಲಿ ಬದಲಾವಣೆಯನ್ನು ತರಲಾಯಿತು. ಅವರು ಸಸ್ಯ ಆಧಾರಿತ ಪ್ರೋಟೀನ್ ತಿನ್ನಲು ಪ್ರಾರಂಭಿಸಿದರು. ಇದು ಸ್ನಾಯುವಿನ ಚೇತರಿಕೆಗೆ ಕಾರಣವಾಯಿತು. ಈ ಸಂದರ್ಭದಲ್ಲಿ, ಅವರಿಗೆ ನಟ್ಸ್, ಸೀಡ್ಸ್, ಜೇನು ತುಪ್ಪ, ಖರ್ಜೂರ ಬೆರೆಸಿ  ತಯಾರಿಸಿದ ವಿಶೇಷ ರೀತಿಯ ಲಡ್ಡುಗಳನ್ನು  ನೀಡಲಾಯಿತು. 

ಕೊನೆಗೂ ಚೇತರಿಸಿಕೊಂಡ ಪಂತ್ : 
ಪೌಷ್ಟಿಕತಜ್ಞರ ಪರಿಣತಿ ಮತ್ತು ರಿಷಬ್ ಪಂತ್ ಡೆಡಿಕೇಶನ್  ನಿಂದಾಗಿ ಅವರು ಕ್ರಿಕೆಟ್ ಕ್ಷೇತ್ರಕ್ಕೆ ಮತ್ತೆ ಅದ್ಭುತ ರೀತಿಯಲ್ಲಿ ಮರಳುವುದು ಸಾಧ್ಯವಾಯಿತು. ಅವರ ಪ್ರಸ್ತುತ ಡಯಟ್ ನಲ್ಲಿ ಮೊಟ್ಟೆ, ಕೋಳಿ ಮತ್ತು ಮೀನುಗಳೂ ಸೇರಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News