ಇಂದು ಮತ್ತು ನಾಳೆ ಮೈಸೂರಿನಲ್ಲಿ ಸಿದ್ದರಾಮಯ್ಯ ಆರ್ಭಟ, ಸರಿ ಹೈಕಮಾಂಡ್ ಪ್ಲ್ಯಾನ್ಗೆ ಕೌಂಟರ್ ನೀಡಲು ರಣತಂತ್ರ, ಟಗರು ಸಿದ್ದರಾಮಯ್ಯಗೆ ಟಗರು ಶಿವಣ್ಣ ಸಾಥ್, ಸ್ಟಾರ್ಗಳ ಪ್ರಚಾರದಲ್ಲಿ ಕಳೆಗಟ್ಟಿದ ವರುಣಾ ಕ್ಷೇತ್ರ
ಸಿಎಂ ಬೊಮ್ಮಾಯಿ ಕ್ಷೇತ್ರಕ್ಕೆ ದಳಪತಿಯ ಎಂಟ್ರಿ. JDS ಅಭ್ಯರ್ಥಿ ಶಶಿಧರ ಯಲಿಗಾರ ಪರ ಕುಮಾರಸ್ವಾಮಿ ಕ್ಯಾಂಪೇನ್. ಬೆಳಗ್ಗೆ 10 ಗಂಟೆಗೆ JDS ಬಹಿರಂಗ ಸಮಾವೇಶದಲ್ಲಿ ಹೆಚ್ಡಿಕೆ ಭಾಗಿ. ಹಾವೇರಿಯ ಸಂತೆ ಮೈದಾನದಲ್ಲಿ ಜೆಡಿಎಸ್ ಬಹಿರಂಗ ಸಮಾವೇಶ. ಬಹಿರಂಗ ಸಮಾವೇಶದ ಮೂಲಕ ಮಾಜಿ ಸಿಎಂ ಮತಯಾಚನೆ.
ವಿಧಾನಸಭೆ ಚುನಾವಣೆಗೆ 6 ದಿನಗಳು ಬಾಕಿ ಇವೆ. ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರ ದಂಡೇ ರಾಜ್ಯದಲ್ಲಿ ಬೀಡು ಬಿಟ್ಟಿದೆ. ಮೇ 7ಕ್ಕೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಮೂರು ದಿನಗಳು ಬಿಜೆಪಿ ನಾಯಕರು ಅಬ್ಬರದ ರೋಡ್ ಶೋ, ಸಭೆಗಳ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ.
ದೇಶದಲ್ಲಿ ಯಾವ ಸಿಎಂ ದೊಡ್ಡಮಟ್ಟದಲ್ಲಿ ಸಾಲಮನ್ನಾ ಮಾಡಿಲ್ಲ. HDK ಏಕಾಂಗಿಯಾಗಿ ನಿಂತು ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದು ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ರು. ದಯಮಾಡಿ ಜೆಡಿಎಸ್ ಪಕ್ಷದ ಬಗೆಗಿನ ಟೀಕೆಗಳನ್ನ ನಿಲ್ಲಿಸಿ. ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಕ್ಕೆ ಹೆಚ್ಚಿನ ಬೆಂಬಲ ಇದೆ. ಇಲ್ಲಿಯೂ ಪ್ರಾದೇಶಿಕ ಪಕ್ಷ ಉಳಿಸಿ, ಬೆಳೆಸಿ ಎಂದು ಮನವಿ ಮಾಡಿದ್ರು.
ಬಜರಂಗದಳ ಬ್ಯಾನ್ ಮಾಡ್ತೀವಿ ಅನ್ನೋದೇ ಅಕ್ಷಮ್ಯ ಅಪರಾಧ. ಈ ವಿಚಾರದಲ್ಲಿ ಕಾಂಗ್ರೆಸ್ ತಕ್ಷಣ ಕ್ಷಮೆಯಾಚನೆ ಮಾಡಬೇಕು ಎಂದು ಚಿಕ್ಕಮಗಳೂರಲ್ಲಿ ಶಾಸಕ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬಜರಂಗದಳ ಬ್ಯಾನ್ ವಿಚಾರ. 5 ವರ್ಷ ಅಧಿಕಾರದಲ್ಲಿದ್ದಾಗ ಬಜರಂಗದಳ ನೆನಪಾಗಲಿಲ್ವಾ ಎಂದು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ವಿರುದ್ಧ ಸಿ.ಎಂ.ಇಬ್ರಾಹಿಂ ವಾಗ್ದಾಳಿ ನಡೆಸಿದ್ರು.
ಕುಂದಾನಗರಿಯಲ್ಲಿ JDS ಅಭ್ಯರ್ಥಿಗಳ ಪರ HDK ಪ್ರಚಾರ. ರಾಯಬಾಗ, ಕುಡಚಿ, ಅಥಣಿ ಅಭ್ಯರ್ಥಿ ಪರವಾಗಿ ಪ್ರಚಾರ. ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ, ಇನ್ನು ಬಡತನ ಹೋಗಿಲ್ಲ ಎಂದು ಚಿಕ್ಕೋಡಿಯಲ್ಲಿ ಮಾಜಿ ಸಿಎಂ HD ಕುಮಾರಸ್ವಾಮಿ ಹೇಳಿದ್ರು. ಶ್ರೀಮಂತರಿಗೆ ಸರಿಸಾಟಿ ಹೊಂದುವಂತೆ ಯೋಜನೆ ರೂಪಿಸಲಾಗಿದೆ. ಪಂಚರತ್ನ ಯೋಜನೆಯಿಂದ ಹಲವು ಯೋಜನೆಗಳನ್ನ ರೂಪಿಸಲಾಗಿದೆ ಎಂದರು.
ರಾಜ್ಯ ರಾಜಕೀಯದಲ್ಲಿ ಕೆಪಿ ಬಚ್ಚೇಗೌಡ ಹಾಗೂ ಬಿಜೆಪಿ ಅಭ್ಯರ್ಥಿ ಸಚಿವ ಸುಧಾಕರ್ ಡೀಲ್ ಆರೋಪ ಸಾಕಷ್ಟು ಸುದ್ದಿ ಮಾಡುತ್ತಿದೆ. ಈ ಹೊತ್ತಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ತುರ್ತು ಸುದ್ದೀಗೋಷ್ಠಿ ನಡೆಸಿ ಸಚಿವ ಡಾ. ಕೆ.ಸುಧಾಕರ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಕೆ.ಪಿ.ಬಚ್ಚೇಗೌಡ, ನಾನು ಮಾಜಿ ಶಾಸಕ ಕೆ.ಪಿ.ಪಿಳ್ಳಪ್ಪನ ಮಗ. ನನ್ನ ಖರೀದಿ ಮಾಡೋದು ಹೋಗಲಿ, ನನ್ನ ಎಡಗಾಲಿನ ಚ*ಲಿ ಕೂಡ ಖರೀದಿ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಸುಧಾಕರ್ಗೆ ಟಾಂಗ್ ಕೊಟ್ಟಿದ್ದಾರೆ.
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ JDS ಭರ್ಜರಿ ಪ್ರಚಾರ. ಪ್ರಚಾರ ಸಂದರ್ಭದಲ್ಲಿ ಕುಣಿದು ಕುಪ್ಪಳಿಸಿದ ಜಿ.ಟಿ.ದೇವೇಗೌಡ. ಗ್ರಾಮಸ್ಥರ ಜೊತೆಗೂಡಿ ಜಿ.ಟಿ.ದೇವೇಗೌಡ ಮಸ್ತ್ ಮಸ್ತ್ ಡ್ಯಾನ್ಸ್. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಪ್ರಚಾರದ ವೇಳೆ ಜಿಟಿಡಿ ಡ್ಯಾನ್ಸ್. ಹುಟ್ಟೂರು ಗುಂಗ್ರಾಲ್ ಛತ್ರದ ಗ್ರಾಮದಲ್ಲಿ ದೇವೇಗೌಡ ಮಸ್ತ್ ಡ್ಯಾನ್ಸ್.
Karnataka Election 2023: ಇಂದು ಹುಬ್ಬಳ್ಳಿಯ ಗೋಪನಕೊಪ್ಪ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ತೆಂಗಿನಕಾಯಿ ಪರ ಪ್ರಚಾರ ನಡೆಸಿ ಅವರು ಮಾತನಾಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಹೊಲಸು ತೆಗೆಯಲು ಅಸಾಧ್ಯ. ಅಷ್ಟು ಕೆಟ್ಟು ಹೋಗಿದೆ ಎಂದರು.
Rain Effect: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೊಂದು ವಾರವಷ್ಟೆ ಬಾಕಿ ಉಳಿದಿದೆ. ರಾಜ್ಯದಲ್ಲಿ ಚುನಾವಣಾ ರಂದು ಹೆಚ್ಚಾಗುತ್ತಿದ್ದು ಪ್ರಚಾರದ ಭರಾಟೆಯೂ ಜೋರಾಗಿದೆ. ಇನ್ನೊಂದೆಡೆ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿರುವ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಬೆಳಿಗ್ಗೆ, ಸಂಜೆ ಎಂದು ನೋಡದೆ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ, ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ವರುಣನ ಅಬ್ಬರವೂ ಜೋರಾಗಿದ್ದು ಚುನಾವಣಾ ಪ್ರಚಾರದ ಭರಾಟೆಗೆ ವರುಣರಾಜ ಅಡ್ಡಿಪಡಿಸುವ ಲಕ್ಷಣಗಳು ಹೆಚ್ಚಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.