ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ತಮ್ಮ ಹುಟ್ಟೂರು ಪೆರೇಸಂದ್ರ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು. ಅಪ್ಪ ಅಮ್ಮಂದಿರ ಸಮಾನರಾದವರ ಕಾಲಿಗೆ ಎರಗಿ ಆಶೀರ್ವಾದ ಪಡೆದರು. ಗ್ರಾಮಗಳಿಗೆ ಪ್ರವೇಶ ನೀಡುತಿದ್ದಂತೆ ಮನೆ ಮಂದಿಯೆಲ್ಲಾ ಹಾರ ಹಿಡಿದು ಆರತಿ ಮಾಡಿ ಸ್ವಾಗತಿಸಿದರು. ಕೆಲ ಹಿರಿಯರಂತೂ ಪ್ರದೀಪ್ ಊರಿಗೆ ಬಂದಾಕ್ಷಣ ಮನೆಗೆ ಮಗ ಬಂದಂತೆ ಭಾವಿಸಿ ಗಲ್ಲ ಹಿಡಿದು ಮಾತನಾಡಿಸಿದರು.
ಸರ್ಕಾರದ ಒಳಮೀಸಲಾತಿ ಪ್ರಸ್ತಾವನೆಯು ಅಸಂವಿಧಾನಿಕ ಮತ್ತು ಮೋಸದ ಉದ್ದೇಶವಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಸಹ ಅಧ್ಯಕ್ಷ ಹೆಚ್ ಪಿ ಸುಧಾಮ್ ದಾಸ್ ಆರೋಪಿಸಿದರು. ಅಲ್ಲದೇ ಜಗದೀಶ್ ಶೆಟ್ಟರ್ ಅವರು ತಮ್ಮ ಆತ್ಮ ಗೌರವಕ್ಕಾಗಿ ಪಕ್ಷವನ್ನ ತೊರೆದು ನಂಬಿದವರಿಗಾಗಿ ಕಾಂಗ್ರೆಸ್ ಪಕ್ಷವನ್ನ ಸೇರಿದ್ದಾರೆ ಎಂದು ಶೆಟ್ಟರ್ ಪರವಾಗಿ ಬ್ಯಾಟ್ ಬೀಸಿದ್ದಾರೆ. ಜೊತೆಗೆ ಯಡಿಯೂರಪ್ಪನವರ ಆಪ್ತರ ಮೇಲೆ CBI ಮತ್ತು EDಯಲ್ಲಿ ಕಡತ ತಯಾರಿಸಿದ್ದು, ಯಡಿಯೂರಪ್ಪ ರವರನ್ನು ಭಯದ ಬಂಧನದಲ್ಲಿ ಬಿಜೆಪಿ ನಾಯಕರುಗಳೇ ಇಟ್ಟಿದ್ದಾರೆ ಎಂದು ಸುಧಾಮ್ ದಾಸ್ ಬಾಂಬ್ ಸಿಡಿಸಿದ್ದಾರೆ.
Karnataka Election 2023: ಕರ್ನಾಟಕದ ಈ ಚುನಾವಣೆ ಕೇವಲ 5 ವರ್ಷದ ಆಡಳಿತಕ್ಕೆ ಸರ್ಕಾರ ಮಾಡುವ ಚುನಾವಣೆ ಅಲ್ಲ. ಇದು ಕರ್ನಾಟಕವನ್ನು ದೇಶದಲ್ಲಿ ನಂಬರ್ 1 ರಾಜ್ಯ ಮಾಡುವ ಚುನಾವಣೆ. ಇದು ವಿಕಸಿತ ಭಾರತಕ್ಕೆ ಕರ್ನಾಟಕದ ಭೂಮಿಕೆಯನ್ನು ತಯಾರು ಮಾಡುವ ಚುನಾವಣೆ ಎಂದು ಪ್ರಧಾನಿ ಮೋದಿ ಹೇಳಿದರು.
ರಾಜ್ಯ ಚುನಾವಣಾ ರಣರಂಗಕ್ಕೆ ಪ್ರಧಾನಿ ಮೋದಿ ಎಂಟ್ರಿ. ಇಂದಿನಿಂದ ಎರಡು ದಿನಗಳ ಕಾಲ ನಮೋ ಎಲೆಕ್ಷನ್ ಟೂರ್. ಬಿಜೆಪಿ ಅಭ್ಯರ್ಥಿಗಳಿಗೆ ಪ್ರಧಾನಿ ಮೋದಿ ಎಲೆಕ್ಷನ್ ಡೋಸ್. ಬೀದರ್ನಿಂದ ಬೆಂಗಳೂರಿನವರೆಗೂ ನಮೋ ದಂಡಯಾತ್ರೆ. ಬೀದರ್.. ವಿಜಯಪುರ.. ಕಲಬುರಗಿಯಲ್ಲಿ ಪ್ರಧಾನಿ ಕ್ಯಾಂಪೇನ್.
ಕೊರಟಗೆರೆಯಲ್ಲಿ ಮಾಜಿ ಡಿಸಿಎಂ ಪರಮೇಶ್ವರ್ಗೆ ಕಲ್ಲೇಟು. ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಪರಮ್ ಡಿಸ್ಚಾರ್ಜ್. ಪರಮೇಶ್ವರ್ ನೋಡಲು ಅಭಿಮಾನಿಗಳ ದೌಡು. ಚಿಕಿತ್ಸೆ ಬಳಿಕ ವಿಶ್ರಾಂತಿ ಪಡೆಯುತ್ತಿರುವ ಪರಮೇಶ್ವರ್. ತುಮಕೂರಿನ ಹೆಗ್ಗೆರೆ ಬಳಿಯ ಪರಮೇಶ್ವರ್ ನಿವಾಸ.
ಧಾರವಾಡ ಎಲೆಕ್ಷನ್ ಅಖಾಡಕ್ಕಿಂದು ಪ್ರಿಯಾಂಕಾ ಗಾಂಧಿ ಎಂಟ್ರಿ. ಧಾರವಾಡದ ನವಲಗುಂದಕ್ಕೆ ಆಗಮಿಸಲಿರುವ ಪ್ರಿಯಾಂಕಾ ಗಾಂಧಿ. ನವಲಗುಂದ ಕಾಂಗ್ರೆಸ್ ಅಭ್ಯರ್ಥಿ N.H.ಕೋನರಡ್ಡಿ ಪರ ಪ್ರಚಾರ. ನವಲಗುಂದ ಮಾಡೆಲ್ ಹೈಸ್ಕೂಲ್ನಲ್ಲಿ ಬಹಿರಂಗ ಸಭೆಯಲ್ಲಿ ಭಾಗಿ. ಸಾರ್ವಜನಿಕ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿರುವ ಪ್ರಿಯಾಂಕಾ.
ರಾಯಚೂರಿನಲ್ಲಿ ಸಿದ್ದರಾಮಯ್ಯ ಭಾಷಣಕ್ಕೆ ಮಳೆ ಅಡ್ಡಿ. ಸಿಂಧನೂರಿನಲ್ಲಿ ಅರ್ಧಕ್ಕೆ ಭಾಷಣ ನಿಲ್ಲಿಸಿದ ಸಿದ್ದರಾಮಯ್ಯ. ಹಂಪನಗೌಡ ಬಾದರ್ಲಿ ಪರ ಮತ ಪ್ರಚಾರ ವೇಳೆ ಮಳೆ. ಸಿಂಧನೂರು ಕಾಂಗ್ರೆಸ್ ಅಭ್ಯರ್ಥಿ ಹಂಪನಗೌಡ ಬಾದರ್ಲಿ. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಹೇಳಿ ಭಾಷಣ ಮೊಟಕು.
Karnataka Election 2023: ರಾಜ್ಯದಲ್ಲಿ ಸದ್ಯ ಚುನಾವಣಾ ಕಾವು ಜೋರಾಗಿದೆ. ಎಲ್ಲ ಪಕ್ಷಗಳ ಅಭ್ಯರ್ಥಿಗಳು ಭರ್ಜರಿ ಮತಬೇಟೆಯಾಡುತ್ತಿದ್ದಾರೆ. ಎಲೆಕ್ಷನ್ ಕಾಂಪೇನ್ ಹಿನ್ನೆಲೆ ಹಾರ, ತುರಾಯಿಗಳ ಮಾರಾಟ ಸಹ ಜೋರಾಗಿದೆ.
ಬಿಜೆಪಿ ಪಕ್ಷದ ಆಡಳಿತ ಅಂದ್ರೆ ಕಮಿಷನ್ ಸರ್ಕಾರದ ಆಡಳಿತ. 40% ಕಮಿಷನ್ ಕೊಟ್ರೆ ಕೆಲಸ ಆಗುತ್ತೆ.. ಇಲ್ಲ ಅಂದ್ರೆ ಇಲ್ಲ. ಕಡಪಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಧಾರವಾಡದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.