Karnataka Election 2023: ನಮ್ಮ ಹಿರಿಯ ನಾಯಕರು ಕಾಂಗ್ರೆಸ್ ಸೇರಿದ್ದು ದುರ್ದೈವ - ಸಿಎಂ ಬೊಮ್ಮಾಯಿ‌

Karnataka Election 2023: ಇಂದು ಹುಬ್ಬಳ್ಳಿಯ ಗೋಪನಕೊಪ್ಪ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ತೆಂಗಿನಕಾಯಿ ಪರ ಪ್ರಚಾರ ನಡೆಸಿ ಅವರು ಮಾತನಾಡಿದ ಸಿಎಂ ಬೊಮ್ಮಾಯಿ‌, ಕಾಂಗ್ರೆಸ್ ಹೊಲಸು ತೆಗೆಯಲು ಅಸಾಧ್ಯ. ಅಷ್ಟು ಕೆಟ್ಟು ಹೋಗಿದೆ ಎಂದರು.   

Written by - Prashobh Devanahalli | Last Updated : May 3, 2023, 10:41 PM IST
  • ಗೋಪನಕೊಪ್ಪ ಗ್ರಾಮದಲ್ಲಿ ಬೊಮ್ಮಾಯಿ ಮತಬೇಟೆ
  • ನಮ್ಮ ಹಿರಿಯ ನಾಯಕರು ಕಾಂಗ್ರೆಸ್ ಸೇರಿದ್ದು ದುರ್ದೈವ
  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Karnataka Election 2023: ನಮ್ಮ ಹಿರಿಯ ನಾಯಕರು ಕಾಂಗ್ರೆಸ್ ಸೇರಿದ್ದು ದುರ್ದೈವ - ಸಿಎಂ ಬೊಮ್ಮಾಯಿ‌ title=
CM Bommai

ಹುಬ್ಬಳ್ಳಿ (ಗೋಪನಕೊಪ್ಪ): ನಮ್ಮ ಬಿಜೆಪಿ ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ಹೊಲಸು ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ. ಅದು ಅಷ್ಟು ಕೆಟ್ಟು ಹೋಗಿದೆ. ಇವರು ಅಲ್ಲಿ ಹೋಗಿ ಹೊಲಸು ತೆಗೆಯುತ್ತೇನೆ ಎಂದರೆ, ಇವರ ಕೈ ಹೊಲಸಾಗುತ್ತದೆ. ಅದು ಶುದ್ಧವಾಗುವುದಿಲ್ಲ. ಅವರು ಕಾಂಗ್ರೆಸ್ ಸೇರಿದ್ದು ದುರ್ದೈವ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಗೋಪನಕೊಪ್ಪ ಜೊತೆಗೆ 40 ವರ್ಷದ ಭಾವನಾತ್ಮಕ ಸಂಬಂಧವಿದೆ. ಭೋವಿ, ಗೌಡರು, ಲಿಂಗಾಯತ ಸೇರಿದಂತೆ ಎಲ್ಲ ಸಮುದಾಯದವರು ಪ್ರೀತಿ ವಿಶ್ವಾಸ ಕೊಟ್ಟಿದ್ದಾರೆ. ಅದನ್ನು ನಾನು ಎಂದು ಮರೆಯುವುದಿಲ್ಲ. ನಮ್ಮ ತಂದೆಯವರು ಸ್ಪರ್ಧಿಸಿದ ಕ್ಷೇತ್ರವಿದು.‌ ಇಲ್ಲಿ ಹೈಸ್ಕೂಲ್,  ಪಿಯುಸಿ ಕಾಲೇಜು ತಂದೆಯವರು ಮಾಡಿದನ್ನು ನಾವು ಎಂದು ಮರೆಯುವುದಕ್ಕೆ ಸಾಧ್ಯವಿಲ್ಲ ಎಂದರು.

ಈ ಚುನಾವಣೆ ಮಹತ್ವದ ಚುನಾವಣೆ ಇದೆ. ಇಡೀ ರಾಜ್ಯದ ಗಮನವನ್ನು ಈ ಕ್ಷೇತ್ರ ಸೆಳೆದಿದೆ.‌ ಏಕೆಂದರೆ ಆರು ಬಾರಿ ಆಯ್ಕೆಯಾದ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರೊಬ್ಬರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ.‌ ಕಾಂಗ್ರೆಸ್ ಪಕ್ಷ ಯಾವಾಗಲೂ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗೆ ವಿರೋಧವಾಗಿ ನಡೆದುಕೊಂಡಿದೆ.‌ ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಅಭಿವೃದ್ಧಿ ಆಗಿದೆ. ಅದನ್ನು ನೀವು ನೆನೆಪಿಟ್ಟುಕೊಳ್ಳಬೇಕು ಎಂದರು.

ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಸಾವು ಬಯಸಿದ ಬಿಜೆಪಿ ಶಾಸಕ; ಮೋದಿ ಕ್ಷಮೆಗೆ ಸುರ್ಜೇವಾಲ ಪಟ್ಟು 

1968 ರಲ್ಲಿ 9 ಹಳ್ಳಿಗಳು ಮಹಾನಗರ ಪಾಲಿಕೆ ಸೇರಿದ್ದವು. ಇಲ್ಲಿ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಶಾಲೆ, ಹೈಸ್ಕೂಲ್ ಏನು ಇರಲಿಲ್ಲ. ಎಲ್ಲವನ್ನೂ ನಮ್ಮ ತಂದೆಯವರು ಮಾಡಿದ್ದನ್ನು ನಾವು ನೋಡಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿದೆ. ಈ ಎಲ್ಲ ವಿರೋಧ ನಡುವೆಯೂ ಬಿಜೆಪಿ ಅಧಿಕಾರಕ್ಕೆ ಬಂದ್ಮೇಲೆ ಅನುದಾನ ನೀಡಿದ್ದಾರೆ. ‌ನಾನು ಅಮೃತ ನಗರೋತ್ಥಾನ ಮಾಡಿ 100 ಕೋಟಿ ರೂ ಅನುದಾನ ನೀಡಿದ್ದೇನೆ. ಒಂದೂವರೆ ವರ್ಷದಲ್ಲಿ 250 ಕೋಟಿ ಗೂ ಅಧಿಕ ಹಣ ಹುಬ್ಬಳ್ಳಿ ಧಾರವಾಡ ಅಭಿವೃದ್ಧಿಗೆ ಕೊಟ್ಟಿದ್ದೇವೆ. ನರೇಂದ್ರ ಮೋದಿಯವರ ಕಾರ್ಯಕ್ರಮ ಸ್ಮಾರ್ಟ್ ಸಿಟಿ ಯೋಜನೆಯಡಿ 500 ಕೋಟಿ ರೂ ಅನುದಾನದಲ್ಲಿ ಅಭಿವೃದ್ಧಿ ಆಗುತ್ತಿದೆ. ಗೋಪನಕೊಪ್ಪ ಅಭಿವೃದ್ಧಿಗೆ ‌ 4 ಕೋಟಿ ಕೊಟ್ಟಿದ್ದೇವೆ. ಈ ಅಭಿವೃದ್ಧಿ ಮುಂದುವರೆಯಬೇಕು ಎಂದರೆ ಬಿಜೆಪಿ ಮತ‌ ನೀಡಿ ಎಂದರು.

ಕಾಂಗ್ರೆಸ್ ಪ್ರಣಾಳಿಕೆ ಜಾರಿಗೊಳಿಸಲು 6 ಲಕ್ಷ ಕೋಟಿ ರೂ. ಬೇಕು. ಅವರು ಆ ಕೆಲಸ ಮಾಡದೇ ಜನರ ಕಣ್ಣಿಗೆ ಮಣ್ಣು ಹಾಕುವ ಕೆಲಸ ಮಾಡುತ್ತಿದ್ದಾರೆ.‌ ಮೇ 10 ರವರೆಗೆ ಮಾತ್ರ ಕಾಂಗ್ರೆಸ್ ಗ್ಯಾರಂಟಿ. ಭಾರತೀಯ ಜನತಾ ಪಕ್ಷ ಅಭಿವೃದ್ಧಿ ಪರವಾಗಿದೆ. ಎಸ್ಸಿ, ಎಸ್ಟಿ, ಲಿಂಗಾಯತ ಮೀಸಲಾತಿ ಹೆಚ್ಚಿಸಿದ್ದು ನಿಮ್ಮ ಬಸವರಾಜ ಬೊಮ್ಮಾಯಿ‌. ‌ಸಾಮಾಜಿಕ ನ್ಯಾಯವನ್ನು ಎಲ್ಲ ವರ್ಗಕ್ಕೆ ಕೊಟ್ಟಿದ್ದೇವೆ. ಯಾವುದೇ‌ ತಾರತಮ್ಯ ಮಾಡಿಲ್ಲ ಎಂದರು.

ಇದನ್ನೂ ಓದಿ: "ಕಷ್ಟ ಬಂದಾಗ ಮೋದಿ ಕರ್ನಾಟಕಕ್ಕೆ ಬರಲ್ಲ, ಚುನಾವಣೆ ಬಂದಾಗ ಬರುತ್ತಾರೆ"

ನಮ್ಮ ಬಿಜೆಪಿ ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ಹೊಲಸು ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ. ಅಷ್ಟು ಕೆಟ್ಟು ಹೋಗಿದೆ. ಇವರು ಅಲ್ಲಿ ಹೋಗಿ ಹೊಲಸು ತೆಗೆಯುತ್ತೇನೆ ಎಂದರೆ, ಇವರ ಕೈ ಹೊಲಸಾಗುತ್ತದೆ. ಅದು ಶುದ್ಧವಾಗುವುದಿಲ್ಲ. ಅವರು ಕಾಂಗ್ರೆಸ್ ಸೇರಿದ್ದು ದುರ್ದೈವ ಎಂದರು.

ಏನೇ ಮಾಡಲಿ ನಮ್ಮ ಪಕ್ಷ ಕಮಲ. ಕೆಸರಿನಲ್ಲಿ ಅರಳಿ ಅಭಿವೃದ್ಧಿ ಮಾಡುವ ಕಮಲ. ಇದುವರೆಗೂ ಕಮಲಕ್ಕೆ ಬೆಂಬಲ ನೀಡಿದ್ದೀರಿ.‌ ಇದನ್ನು ಮುಂದುವರಿಸಿಕೊಂಡು ಹೋಗಬೇಕು. ತೆಂಗಿನಕಾಯಿ ಅವರ ಜೊತೆಗೆ ನಾನು ಇದ್ದೇನೆ ಎಂದರು. ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ಮಂಜೂರಾತಿ ಕೊಡುತ್ತೇನೆ ಎಂದರು.

ಇದನ್ನೂ ಓದಿ: ತಮ್ಮ ಕಚೇರಿಯಲ್ಲಿರುವ ಪ್ರಧಾನಿ ಮೋದಿ ,ಶಾ ಫೋಟೋ ತೆಗೆಯಲ್ಲ ಎಂದ ಜಗದೀಶ್ ಶೆಟ್ಟರ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News