ಅದೊಂದು ಬಡವರ ಸಂಜೀವಿನಿ ಆಸ್ಪತ್ರೆ ನಿತ್ಯವೂ ಅಲ್ಲಿ ಸಾವಿರಾರು ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಾರೆ. ಆದ್ರೀಗ ಅಲ್ಲಿ ನೀರಿಗಾಗಿ ಬರ ಎದುರಾಗಿದೆ.. ಕಳೆದ ಕೆಲ ದಿನಗಳಿಂದ ಅಲ್ಲಿ ನೀರು ಬರ್ತಿಲ್ಲಾ ಎಂಬ ದೂರುಗಳು ಕೇಳಿಬಂದಿವೆ. ಈ ಕುರಿತು ಒಂದು ವರದಿ ಇಲ್ಲಿದೆ.
ಹುಬ್ಬಳ್ಳಿಯ ಕಾರವಾರ ರಸ್ತೆಯ ಕೆಂಪಗೇರಿ ಮತ್ತು ಧಾರವಾಡದ ಹೊಸ ಯಲ್ಲಾಪುರದ ತ್ಯಾಜ್ಯ ಘಟಕದಲ್ಲಿ ವರ್ಷಗಳಿಂದ ಗುಡ್ಡದಂತೆ ಸಂಗ್ರಹವಾಗಿರುವ ತ್ಯಾಜ್ಯದ ವಿಲೇವಾರಿಗೆ ಪಾಲಿಕೆ ಟೆಂಡರ್ ಕರೆದಿದೆ. ಕೆಂಪಗೇರಿ ಘಟಕದಲ್ಲಿರುವ ಅಂದಾಜು 3.6 ಲಕ್ಷ ಟನ್ ಹಳೆಯ ತ್ಯಾಜ್ಯ ತೆರವಿಗೆ 22.70 ಕೋಟಿ ಮತ್ತು ಹೊಸ ಯಲ್ಲಾಪುರದಲ್ಲಿರುವ 1.2 ಲಕ್ಷ ಟನ್ ತ್ಯಾಜ್ಯ ತೆರವಿಗೆ 7.15 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ.
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ಮೇ 13ರಂದು ನಡೆಯಲಿರುವ ಮತ ಎಣಿಕೆ ಸಂಬಂಧವಾಗಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಕೊಪ್ಪಳ ಜಿಲ್ಲೆಯಾದ್ಯಂತ ಮೇ 12ರ ಸಂಜೆ 6ರಿಂದ ಮೇ 13ರ ರಾತ್ರಿ 11 ಗಂಟೆಯವರೆಗೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಆದೇಶ ಹೊರಡಿಸಿದ್ದಾರೆ.
ಧಾರವಾಡ ಎಲೆಕ್ಷನ್ ಅಖಾಡಕ್ಕಿಂದು ಪ್ರಿಯಾಂಕಾ ಗಾಂಧಿ ಎಂಟ್ರಿ. ಧಾರವಾಡದ ನವಲಗುಂದಕ್ಕೆ ಆಗಮಿಸಲಿರುವ ಪ್ರಿಯಾಂಕಾ ಗಾಂಧಿ. ನವಲಗುಂದ ಕಾಂಗ್ರೆಸ್ ಅಭ್ಯರ್ಥಿ N.H.ಕೋನರಡ್ಡಿ ಪರ ಪ್ರಚಾರ. ನವಲಗುಂದ ಮಾಡೆಲ್ ಹೈಸ್ಕೂಲ್ನಲ್ಲಿ ಬಹಿರಂಗ ಸಭೆಯಲ್ಲಿ ಭಾಗಿ. ಸಾರ್ವಜನಿಕ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿರುವ ಪ್ರಿಯಾಂಕಾ.
ಸಿದ್ದರಾಮಯ್ಯ ಲಿಂಗಾಯತ ಸಿಎಂ ಬಗ್ಗೆ ನೀಡಿರೋ ಹೇಳಿಕೆಯಿಂದ ತುಂಬಾ ನೋವಾಗಿದೆ ಎಂದು ಧಾರವಾಡದಲ್ಲಿ ಶಾಸಕ ಅರವಿಂದ ಬೆಲ್ಲದ್ ಹೇಳಿಕೆ ನೀಡಿದ್ದಾರೆ.. ರಾಹುಲ್ ಮಾತ್ರ ಹೀಗೆ ಹುಚ್ಚುಚ್ಚಾಗಿ ಮಾತಾಡ್ತಾರೆ ಅನ್ಕೊಂಡಿದ್ವಿ. ಆದ್ರೆ ಸಿದ್ದರಾಮಯ್ಯ ಹೀಗೆ ಮಾತಾಡಿದ್ದು ಅಚ್ಚರಿಯಾಗಿದೆ ಎಂದಿದ್ದಾರೆ.
Vinay Kulkarni : ಧಾರವಾಡ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಧಾರವಾಡ ಭೇಟಿಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿಲ್ಲ. ಯೋಗೇಶ್ ಗೌಡ ಹತ್ಯೆ ಪ್ರಕರಣದ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಅವರಿಗೆ ಸುಪ್ರೀಂ ಕೋರ್ಟ್ ಧಾರವಾಡ ಭೇಟಿಗೆ ನಿರ್ಭಂದಿಸಿದೆ.
ಸರ್ಕಾರಿ ಕೆಲಸದಲ್ಲಿ ನಿಷ್ಕಾಳಜಿತನ ತೋರಿದ ಕಾರಣಕ್ಕಾಗಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ನಾಗರಾಜ ಕೂಬಳ್ಳಿ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆದೇಶ ಮಾಡಿದ್ದಾರೆ.
ನಕಲಿ ಬಿಎಡ್ ಅಂಕಪಟ್ಟಿ ಪಡೆದು ವಾರ್ಡನ್ ಹುದ್ದೆ... ವಾರ್ಡನ್ ಹುದ್ದೆಯಿಂದ ನೇರವಾಗಿ ಪ್ರಾಂಶುಪಾಲ.. ಧಾರವಾಡದಲ್ಲಿ ಪ್ರಾಂಶುಪಾಲನೊಬ್ಬನ ವಂಚನೆ ಬಯಲಾಗಿದೆ.. ಸದ್ಯ ಡಾ.ಯಲ್ಲಪ್ಪಗೌಡ ಪಿ.ಕಲ್ಲನಗೌಡರ್ ಎಂಬ ಪ್ರಾಂಶುಪಾಲನ ವಿರುದ್ಧ ಕೇಸ್ ದಾಖಲಾಗಿದೆ.
ಮಾರ್ಚ 10, 2020 ರಂದು ನವಲಗುಂದದ ಶಿರಾಜ ಅಣ್ಣಿಗೇರಿ ಅನ್ನುವ 26 ವರ್ಷದ ಯುವಕ ಹುಬ್ಬಳ್ಳಿಗೆ ತನ್ನ ಪಾನ ಅಂಗಡಿಗೆ ಬೇಕಾದ ಸಾಮಾನು ಖರೀದಿಸಲು ಸ್ನೇಹಿತರ ಜೊತೆ ಬಂದಿದ್ದನು. ತನ್ನ ಖರೀದಿ ಕೆಲಸ ಮುಗಿದ ಮೇಲೆ ಸ್ನೇಹಿತರೊಂದಿಗೆ ಶಿರಾಜ ಹುಬ್ಬಳ್ಳಿಯ ಹೊಸ ಕೋರ್ಟರಸ್ತೆ, ಹತ್ತಿರ ಇರುವ ಪ್ಲಾಷ್ ಈಜುಕೊಳ್ಳಕ್ಕೆ ಸಾಯಂಕಾಲ 6:00 ಗಂಟೆ ಸುಮಾರಿಗೆ ಈಜಲು ಹೋಗಿದ್ದರು. ಈಜುಕೊಳ್ಳದಲ್ಲಿ ಹಣ ಸಂದಾಯ ಮಾಡಿಟಿಕೇಟ್ ಖರೀದಿಸಿ ಅವರ ನಿಯಮದಂತೆ ಈ ಜಾಡಲು ಪ್ರಾರಂಭಿಸಿದರು.
ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಮಧ್ಯಾಹ್ನ ಮಕ್ಕಳಿಗೆ ಬಿಸಿಯೂಟ ನೀಡಿದಾಗ, ಅನ್ನದಲ್ಲಿ ಹಲ್ಲಿಯಂತ ಹುಳು ಕಂಡುಬಂದ್ದರಿಂದ, ಊಟ ಸೇವಿಸಿದ ಸುಮಾರು 36 ಮಕ್ಕಳಲ್ಲಿ ವಾಂತಿ, ವಾಕರಿಕೆ ಕಂಡುಬಂದಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.