ಹುಬ್ಬಳ್ಳಿ : ಮತದಾನ ಮಾಡಿ, ಮತ ಮಾರಬೇಡಿ ಎಂದು ಹುಬ್ಬಳ್ಳಿಯಲ್ಲಿ ಉತ್ತಮ ಪ್ರಜಾಕೀಯ ಪಕ್ಷದಿಂದ ವಿಭಿನ್ನವಾಗಿ ಜಾಗೃತಿ ಮೂಡಿಸಿದರು.
ಹೌದು,,, ಮುಖಕ್ಕೆ ಕನ್ನಡಿ ಹಾಕಿಕೊಂಡು ಜನರಲ್ಲಿ ಜಾಗೃತಿ ಪ್ರಜಾಕೀಯ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ.ಜನರ ಮುಖಕ್ಕೆ ಕನ್ನಡಿ ಹಿಡಿದು ನಿಮಗೆ ನೀವೇ ಮತ ಹಾಕಿಕೊಳ್ಳಿ ಎಂದು ನಗರದ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಲ್ಯಾಮಿಂಗ್ಟನ್ ರಸ್ತೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರ್ಯಾಗರ್ ಹಿಡಿದು ರಸ್ತೆಯಲ್ಲೇ ಬೆದರಿಕೆ ಒಡ್ಡಿದ ಟಾಟಾ ಏಸ್ ಚಾಲಕ
ಅಷ್ಟೇ ಅಲ್ದೆ ಬಸ್‌ನಲ್ಲಿ ಹತ್ತಿಕೊಂಡು ಪ್ರಯಾಣಿಕರಿಗೂ ಕೂಡ ಜಾಗೃತಿ ಕರಪತ್ರ ವಿತರಿಸಿದರು.ಜಾತಿ, ಧರ್ಮ,ಮತ ಯಾವುದು ಇಲ್ಲ. ಜಾತಿ ಆಧಾರದ ಮೇಲೆ ಮತ ನೀಡಬೇಡಿ.ಹಣಕ್ಕೆ ಮತವನ್ನ ಮಾರಿಕೊಳ್ಳಬೇಡಿ.ಮತ ಹಾಕಿದವರೇ ನನಗೆ ಹೈಕಮಾಂಡ.ಮತದಾರರೇ ಹೇಳಿದ್ದನ್ನು ಬಿಟ್ಟು ಬೇರೆನೂ ಮಾಡುವುದಿಲ್ಲ. ಮತದಾರರ ನಿಯಮಾನುಸಾರ ನಡೆದುಕೊಳ್ಳುತ್ತೆನೆಂದು ಹೇಳಿದರು.
ಇದನ್ನೂ ಓದಿ: "ಈ ಬಾರಿ ಪರಮೇಶ್ವರ ಅವರನ್ನು ಸೋಲಿಸುತ್ತೇವೆ"
ಹೆಸರು ಹೇಳಲು ಇಚ್ಛಿಸದ ಪ್ರಜಾಕೀಯದ ಅಭ್ಯರ್ಥಿ ತಮ್ಮ ಅಮೂಲ್ಯವಾದ ಮತವನ್ನು ಯಾರಿಗೂ ಮಾರಬೇಡಿ ಎಂದು ಜನರಲ್ಲಿ ಮನವಿ ಮಾಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.