ಭಾರತ ದೇಶದಲ್ಲಿ ಶೇ.90 ರಷ್ಟು ಸಂಪತ್ತು ಕೇವಲ ಶೇ.10 ರಷ್ಟು ಜನರಲ್ಲಿ ಕೇಂದ್ರಿಕೃತವಾಗಿದೆ. ಸಮಾಜದಲ್ಲಿ ಅಸಮಾನತೆ ಬೇರೂರಿದೆ. ಇದನ್ನು ತೊಲಗಿಸಲು ಡಾ.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಒತ್ತಿ ಹೇಳಿದ್ದಾರೆ. ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವುದೇ ಸರ್ಕಾರಗಳ ಕರ್ತವ್ಯವಾಗಿದೆ. ನಮ್ಮ ಸರ್ಕಾರವು ಬಸವಣ್ಣನವರ ಕಾಯಕ, ದಾಸೋಹ ಮತ್ತು ಸಾಮಾಜಿಕ ನ್ಯಾಯ ತತ್ವದಲ್ಲಿ ನಂಬಿಕೆ ಇಟ್ಟು ಅದರಂತೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದರು.
ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಅರವಿಂದ ಬೆಲ್ಲದ ಅವರು, ಇಂದು ಸಂಜೆ ವಿಧಾನಸಭೆಯಲ್ಲಿ ಗಮನ ಸೆಳೆಯುವ ಪ್ರಶ್ನೆ ಕೇಳಿ, ಧಾರವಾಡ ಮಹಾನಗರ ಪಾಲಿಕೆ ರಚನೆಗಾಗಿ ಅಗತ್ಯವಿರುವ ಎಲ್ಲಾ ಮಾನದಂಡಗಳು ಪೂರ್ಣವಾಗಿದ್ದು, ಮಹಾನಗರ ಪಾಲಿಕೆ ರಚನೆಗೆ ಕ್ರಮವಹಿಸಿ ಆದೇಶ ಹೊರಡಿಸಬೇಕೆಂದು ನಗರಾಭಿವೃದ್ಧಿ ಸಚಿವರಲ್ಲಿ ಗಮನ ಸೆಳೆದರು.
ಇಡೀ ಜಗತ್ತು ಕೋವಿಡ್ ನಲ್ಲಿ ಸಿಲುಕಿದ್ದಾಗ, ಅದಕ್ಕೆ ಧಾರವಾಡ ಜಿಲ್ಲೆಯೂ ಹೊರತಾಗಿರಲಿಲ್ಲ. ಒಂದೆಡೆ ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳ ಗಡಿಗಳೊಂದಿಗೆ ಹೊಂದಿಕೊಂಡಿರುವ ಧಾರವಾಡ ಸರ್ಕಾರಿ ಆಸ್ಪತ್ರೆಗಳಿಗೆ ಆ ಜಿಲ್ಲೆಗಳವರೂ ಬರುತ್ತಾರೆ.
ಷರತ್ತು ಬದ್ಧ ವಿಧಿಸಿ ಅನುಮತಿ ನೀಡಿದ ಹುಬ್ಬಳ್ಳಿ-ಧಾರವಾಡ ಪಾಲಿಕೆ
ಇಂದು ಬೆಳಗ್ಗೆ 11ರಿಂದ 1ರವರೆಗೆ ಮಾತ್ರ ಜಯಂತಿ ಆಚರಿಸಲು ಅವಕಾಶ
ತಡರಾತ್ರಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಆದೇಶ
ಧಾರವಾಡ ಜಿಲ್ಲಾಸ್ಪತ್ರೆ ಕೇವಲ ಧಾರವಾಡ ಜಿಲ್ಲೆಗೆ ಮಾತ್ರವಲ್ಲದೇ ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಯ ಎರಡ್ಮೂರು ತಾಲೂಕುಗಳ ಬಡವರಿಗೂ ಸಹ ಜೀವ ಸಂಜೀವಿನಿಯಾಗಿದೆ. ಆದರೆ ಈಗ ಈ ಜಿಲ್ಲಾಸ್ಪತ್ರೆಯಿಂದ ಬಡವರು ದೂರ ಆಗುವಂತಹ ಪರಿಸ್ಥಿತಿ ಬಂದಿದೆ.
Hubballi-Dharwad BRTS: ಒಂದೇ ರಸ್ತೆಯ 100 ಮೀಟರ್ ಅಂತರದಲ್ಲಿ ಎರಡು ಬಸ್ ಕೆಟ್ಟು ನಿಂತಿರುವುದು ನಿಜಕ್ಕೂ ಏನಿದು ಅವ್ಯವಸ್ಥೆ ಅಂತಾ ಜನರು ಪ್ರಶ್ನಿಸುವಂತಾಗಿದ್ದು, ಚಿಗರಿಯ ಅವ್ಯವಸ್ಥೆಯಿಂದ ಜನರು ಬೇಸತ್ತು ಹೋಗಿದ್ದಾರೆ.
ಗೃಹಲಕ್ಷ್ಮೀಗೆ ಹಿಡಿದ ಗ್ರಹಣ, ಮಹಿಳೆಯರಿಗಿಲ್ಲ ಲಕ್ಷ್ಮೀ ಕಟಾಕ್ಷ
ಗೃಹಲಕ್ಷ್ಮೀ ಯೋಜನೆ ಹಲವರಿಗೆ ಸಿಹಿ ಇನ್ನೂ ಕೆಲವರಿಗೆ ಕಹಿ
ಧಾರವಾಡದ 38,000 ಮಹಿಳೆಯರಿಗೆ ಇಲ್ಲ ಲಕ್ಷ್ಮೀ ಭಾಗ್ಯ..!
ಧಾರವಾಡ ಜಿಲ್ಲಾ ಟೆನ್ನಿಸ್ ಸಂಸ್ಥೆ (ಡಿಡಿಎಲ್ಟಿಎ) ಆಶ್ರಯದಲ್ಲಿ ರಾಜ್ಯಾಧ್ಯಕ್ಷ ಪೆವಿಲಿಯನ್ ಆವರಣದಲ್ಲಿ ಆರಂಭಗೊಂಡಿರುವ ಅಂತರಾಷ್ಟ್ರೀಯ ಪುರುಷರ ಟೆನ್ನಿಸ್ ಪಂದ್ಯಾವಳಿಯನ್ನು ಬಲೂನ್ ಹಾರಿ ಬಿಡುವ ಮೂಲಕ ಹಾಗೂ ಸಾಂಕೇತಿಕವಾಗಿ ಟೆನ್ನಿಸ್ ಆಡುವ ಮೂಲಕ ಮಾಜಿ ಸಂಸದ ಹಾಗೂ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮೊಹಮ್ಮದ್ ಅಜರುದ್ದೀನ್ ಹಾಗೂ ಕಾರ್ಮಿಕ ಸಚಿವರಾದ ಸಂತೋμï ಲಾಡ್ ಅವರು ಪಂದ್ಯಾವಳಿಯನ್ನು ಉದ್ಘಾಟಿಸಿದರು.
ಉಗ್ರರ ಅಡಗುತಾಣವಾಗುತ್ತಿದೆಯಾ ಹುಬ್ಬಳ್ಳಿ, ಧಾರವಾಡ? ಈ ವಿಷಯವನ್ನು ತುಂಬಾ ಗಂಭೀರವಾಗಿ ಪರಿಗಣಿಸಿರುವ ದೆಹಲಿ ಎನ್ಐಎ ತಂಡ ಹುಬ್ಬಳ್ಳಿ-ಧಾರವಾಡ ಕಮೀಷನರೇಟ್ ವ್ಯಾಪ್ತಿಯ ಪೊಲೀಸರು ಹಾಗೂ ಜಿಲ್ಲಾ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಹುಬ್ಬಳ್ಳಿ, ಧಾರವಾಡದ ಯಾವ ಅರಣ್ಯ ಪ್ರದೇಶದಲ್ಲಿ ಉಗ್ರರ ಅಡಗುತಾಣವಿದೆ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು ತನಿಖೆ ಮುಂದುವರೆಸಿದ್ದಾರೆ.
ವಾಣಿಜ್ಯನಗರಿ ಹುಬ್ಬಳ್ಳಿಯ ರಾಣಿ ಚೆನ್ನಮ್ಮ (ಈದ್ಗಾ) ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದ ಬೆನ್ನಲ್ಲೇ ಸೋಮವಾರ ಭಾರೀ ಪೊಲೀಸ್ ಭದ್ರತೆ ನಡುವೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಅಂತರಾಷ್ಟ್ರೀಯ ಟೆನ್ನಿಸ್ ಫೆಡರೇಷನ್ ಮತ್ತು ಕರ್ನಾಟಕ ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಷನ್ ಜಂಟಿಯಾಗಿ ಧಾರವಾಡ ಜಿಲ್ಲಾ ಲಾನ್ ಟೆನ್ನಿಸ್ ಅಸೋಸಿಯೇಷನ್ ಸಹಯೋಗದಲ್ಲಿ ಬರುವ ಅಕ್ಟೋಬರ್ ತಿಂಗಳಿನಲ್ಲಿ ಧಾರವಾಡದಲ್ಲಿ ಅಂತರಾಷ್ಟ್ರೀಯ ಟೆನ್ನಿಸ್ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ವಿಶ್ವದ ನಾನಾ ದೇಶಗಳ ಶ್ರೇಯಾಂಕಿತ ಟೆನ್ನಿಸ್ ಆಟಗಾರರು ಭಾಗವಹಿಸಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.