ಅಕ್ಟೋಬರ್ ನಲ್ಲಿ ಧಾರವಾಡದಲ್ಲಿ ಅಂತರಾಷ್ಟ್ರೀಯ ಟೆನ್ನಿಸ್ ಟೂರ್ನಿ,  ವಿಶ್ವದ ದಿಗ್ಗಜ ಆಟಗಾರರ ಆಟಕ್ಕೆ ಸಾಕ್ಷಿಯಾಗಲಿದೆ ವಿದ್ಯಾ ಕಾಶಿ..!

ಅಂತರಾಷ್ಟ್ರೀಯ ಟೆನ್ನಿಸ್ ಫೆಡರೇಷನ್ ಮತ್ತು ಕರ್ನಾಟಕ ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಷನ್ ಜಂಟಿಯಾಗಿ ಧಾರವಾಡ ಜಿಲ್ಲಾ ಲಾನ್ ಟೆನ್ನಿಸ್ ಅಸೋಸಿಯೇಷನ್ ಸಹಯೋಗದಲ್ಲಿ ಬರುವ ಅಕ್ಟೋಬರ್ ತಿಂಗಳಿನಲ್ಲಿ ಧಾರವಾಡದಲ್ಲಿ ಅಂತರಾಷ್ಟ್ರೀಯ ಟೆನ್ನಿಸ್ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ವಿಶ್ವದ ನಾನಾ ದೇಶಗಳ ಶ್ರೇಯಾಂಕಿತ ಟೆನ್ನಿಸ್ ಆಟಗಾರರು ಭಾಗವಹಿಸಲಿದ್ದಾರೆ.

Written by - Manjunath N | Last Updated : Sep 13, 2023, 07:30 PM IST
  • ಇದರ ಅಂಗವಾಗಿ ಟೆನ್ನಿಸ್ ಕ್ರೀಡಾ ಆಸಕ್ತರಿಗೆ ಧಾರವಾಡ ಜಿಲ್ಲಾ ಲಾನ್ ಟೆನ್ನಿಸ್ ಅಸೋಸಿಯೇಷನ್‍ದ ಆಜೀವ ಸದಸ್ಯತ್ವಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
  • ಧಾರವಾಡ ಟೆನ್ನಿಸ್ ಕೋರ್ಟ್ ಸುಮಾರು 96 ವರ್ಷಗಳ ಐತಿಹಾಸಕತೆಯನ್ನು ಹೊಂದಿದೆ. ಐದು ಸಿಂಥೆಟಿಕ್ ಯುಎಸ್‍ಟಿಎ ಶ್ರೇಣಿಯ ಟೆನ್ನಿಸ್ ಕೋರ್ಟ್ ಹೊಂದಿದೆ.
  • ಮತ್ತು ಅತ್ಯಾಧುನಿಕ ಸೌಲಭ್ಯವುಳ್ಳ ಸುಸಜ್ಜಿತ ಜಿಮ್ ಹಾಗೂ ಟೆನ್ನಿಸ್ ಉತ್ತಮ ತರಬೇತಿದಾರರನ್ನು ಹೊಂದಿದೆ. ಇಲ್ಲಿನ ಟೆನ್ನಿಸ್ ಕೋರ್ಟ್ ಅಂತರಾಷ್ಟ್ರೀಯ ಗುಣಮಟ್ಟದ್ದಾಗಿದೆ.
ಅಕ್ಟೋಬರ್ ನಲ್ಲಿ ಧಾರವಾಡದಲ್ಲಿ ಅಂತರಾಷ್ಟ್ರೀಯ ಟೆನ್ನಿಸ್ ಟೂರ್ನಿ,  ವಿಶ್ವದ ದಿಗ್ಗಜ ಆಟಗಾರರ ಆಟಕ್ಕೆ ಸಾಕ್ಷಿಯಾಗಲಿದೆ ವಿದ್ಯಾ ಕಾಶಿ..! title=

ಧಾರವಾಡ: ಅಂತರಾಷ್ಟ್ರೀಯ ಟೆನ್ನಿಸ್ ಫೆಡರೇಷನ್ ಮತ್ತು ಕರ್ನಾಟಕ ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಷನ್ ಜಂಟಿಯಾಗಿ ಧಾರವಾಡ ಜಿಲ್ಲಾ ಲಾನ್ ಟೆನ್ನಿಸ್ ಅಸೋಸಿಯೇಷನ್ ಸಹಯೋಗದಲ್ಲಿ ಬರುವ ಅಕ್ಟೋಬರ್ ತಿಂಗಳಿನಲ್ಲಿ ಧಾರವಾಡದಲ್ಲಿ ಅಂತರಾಷ್ಟ್ರೀಯ ಟೆನ್ನಿಸ್ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ವಿಶ್ವದ ನಾನಾ ದೇಶಗಳ ಶ್ರೇಯಾಂಕಿತ ಟೆನ್ನಿಸ್ ಆಟಗಾರರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡುವ ಆದೇಶ ಹಿನ್ನೆಲೆ: ಸಿಎಂ ಅಧ್ಯಕ್ಷತೆಯಲ್ಲಿ ತುರ್ತು ಸಭೆ

ಇದರ ಅಂಗವಾಗಿ ಟೆನ್ನಿಸ್ ಕ್ರೀಡಾ ಆಸಕ್ತರಿಗೆ ಧಾರವಾಡ ಜಿಲ್ಲಾ ಲಾನ್ ಟೆನ್ನಿಸ್ ಅಸೋಸಿಯೇಷನ್‍ದ ಆಜೀವ ಸದಸ್ಯತ್ವಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಧಾರವಾಡ ಟೆನ್ನಿಸ್ ಕೋರ್ಟ್ ಸುಮಾರು 96 ವರ್ಷಗಳ ಐತಿಹಾಸಕತೆಯನ್ನು ಹೊಂದಿದೆ. ಐದು ಸಿಂಥೆಟಿಕ್ ಯುಎಸ್‍ಟಿಎ ಶ್ರೇಣಿಯ ಟೆನ್ನಿಸ್ ಕೋರ್ಟ್ ಹೊಂದಿದೆ. ಮತ್ತು ಅತ್ಯಾಧುನಿಕ ಸೌಲಭ್ಯವುಳ್ಳ ಸುಸಜ್ಜಿತ ಜಿಮ್ ಹಾಗೂ ಟೆನ್ನಿಸ್ ಉತ್ತಮ ತರಬೇತಿದಾರರನ್ನು ಹೊಂದಿದೆ. ಇಲ್ಲಿನ ಟೆನ್ನಿಸ್ ಕೋರ್ಟ್ ಅಂತರಾಷ್ಟ್ರೀಯ ಗುಣಮಟ್ಟದ್ದಾಗಿದೆ.

ಇದನ್ನೂ ಓದಿ: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಸೌಲಭ್ಯಕ್ಕಾಗಿ ಅರ್ಜಿ ಅಹ್ವಾನ

ಧಾರವಾಡ ಜಿಲ್ಲಾ ಲಾನ್ ಟೆನ್ನಿಸ್ ಅಸೋಸಿಯೇಷನ್‍ದ ಆಜೀವ ಸದಸ್ಯತ್ವ ಪಡೆಯಲು ಸೆಪ್ಟೆಂಬರ್ 15 ರಿಂದ 22 ರ ವರೆಗೆ ಸೀಮಿತ ಕಾಲಾವಕಾಶವನ್ನು ನೀಡಲಾಗಿದೆ. ನಿಗದಿತ ಅರ್ಜಿ ನಮೂನೆ ಹಾಗೂ ಸದಸ್ಯತ್ವ ಶುಲ್ಕದೊಂದಿಗೆ ಆಸಕ್ತರು ಸದಸ್ಯತ್ವ ಪಡೆಯಬಹುದು.

ಸಂಪರ್ಕಕ್ಕಾಗಿ ಸಂದೀಪ ಬಣವಿ, ಕಾರ್ಯದರ್ಶಿಗಳು, ಧಾರವಾಡ ಜಿಲ್ಲಾ ಲಾನ್ ಟೆನ್ನಿಸ್ ಅಸೋಸಿಯೇಷನ್, ಡಿ.ಸಿ. ಕಂಪೌಂಡ, ಧಾರವಾಡ ಮೊ.ಸಂ: 9448460955, 6361398510 ಗೆ ಸಂಪರ್ಕಿಸಬಹುದು. ಟೆನ್ನಿಸ್ ಕಚೇರಿಗೆ ಬೆಳಿಗ್ಗೆ 9 ರಿಂದ ರಾತ್ರಿ 8 ಗಂಟೆಯವರೆಗೆ ಭೇಟ್ಟಿ ನೀಡಿ ಅರ್ಜಿ ಸಲ್ಲಿಸಬಹುದೆಂದು ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News