ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರದ ಮೊದಲ ಹಾಡು 'ಬೇಷರಂ ರಂಗ್' ಬಿಡುಗಡೆಯಾದಾಗ ವಿವಾದಕ್ಕೆ ಒಳಗಾಗಿತ್ತು. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿಯಲ್ಲಿ ಕಾಣಿಸಿಕೊಂಡು ವಿವಾದಕ್ಕೆ ಗುರಿಯಾಗಿದ್ದರು. ಅಲ್ಲದೆ, ಹಲವಾರು ರಾಜಕಾರಣಿಗಳು ಮತ್ತು ಟ್ರೋಲ್ಗಳು ಈ ಹಾಡನ್ನು ಅಶ್ಲೀಲವಾಗಿದೆ ಎಂದು ದೂರಿದ್ದರು. ಅಲ್ಲದೆ, ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆ ಸಿನಿಮಾದಲ್ಲಿ ಕೆಲ ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು.
ಬಹು ದಿನಗಳ ನಂತರ ಬಾಲಿವುಡ್ ಕಿಂಗ್ ಖಾನ್ ಶಾರುಖ್ ʼಪಠಾಣ್ʼ ಮೂಲಕ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಈಗಾಗಲೇ ಬಾದ್ ಶಾ ಸಿನಿಮಾದ ಆನ್ಲೈನ್ ಟಿಕೆಟ್ಗಳ ಖರೀದಿ ಜೋರಾಗಿದೆ. ಕರ್ನಾಟಕದಲ್ಲಿಯೂ ಶಾರುಖ್ ಖಾನ್ಗೆ ಪ್ಯಾನ್ಸ್ ಪಾಲೋಯಿಂಗ್ ಇದೆ. ಇದರ ಬೆನ್ನಲ್ಲೆ ಬಾಕ್ಸ್ ಆಫೀಸ್ ಸುಲ್ತಾನ ನಟ ದರ್ಶನ್ ಅವರ ಕ್ರಾಂತಿ ಸಿನಿಮಾ 26 ರಂದು ಬಿಡುಗಡೆಯಾಗಲಿದ್ದು, ಒಂದು ದಿನದ ಮುಂಚೆ ಅಂದ್ರೆ 25 ರಂದು ಬಿಡುಗಡೆಯಾಗುವ ಪಠಾಣ್ ಸಿನಿಮಾಗೆ ನೇರ ಪೈಪೋಟಿ ನೀಡುತ್ತಾ ಎನ್ನುವ ಕುತೂಹಲ ಮೂಡಿಸಿದೆ.
ಇತ್ತೀಚಿಗೆ ಪಾಕಿಸ್ತಾನಿ ಯುವತಿ ಆಯೇಶಾ ಒಮರ್ ಮದುವೆ ಕಾರ್ಯಕ್ರಮದಲ್ಲಿ ಮಾಡಿದ ಡಾನ್ಸ್ ವಿಡಿಯೋ ಇಂಟರ್ನೆಟ್ನಲ್ಲಿ ಟ್ರಿಂಡಿಂಗ್ ಆಗಿತ್ತು. ಅಲ್ಲದೆ, ಆ ವಿಡಿಯೋವನ್ನು 2 ಲಕ್ಷಕ್ಕೂ ಅಧಿಕ ಮಂದಿ ನೋಡಿ ಮೆಚ್ಚಿಕೊಂಡಿದ್ದರು. ಇದೀಗ ಅಂತಹುದೇ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹೈಪ್ ಕ್ರಿಯೆಟ್ ಮಾಡುತ್ತಿದೆ.
ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರು ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅವರ ಮುಂಬರುವ ಚಿತ್ರ ಪಠಾನ್ನೊಂದಿಗೆ ಮತ್ತೊಮ್ಮೆ ಆನ್-ಸ್ಕ್ರೀನ್ ಮ್ಯಾಜಿಕ್ ಮಾಡಲು ಸಿದ್ಧರಾಗಿದ್ದಾರೆ. ಶಾರುಖ್ ಖಾನ್ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಫ್ಯಾನ್ಗಳಿಂದ ಕಿಂಗ್ ಖಾನ್ ಅಂತ ಶಾರುಖ್ ಕರೆಸಿಕೊಳ್ಳುತ್ತಾರೆ. ಇದೀಗ ಬಾದ್ ಶಾಗೆ ಪ್ಯಾನ್ ಒಬ್ಬ ಕಿಸ್ ಮಾಡಿರುವ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Saffron Bikini Not Seen In Pathan Trailer: ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಅಭಿನಯದ ‘ಪಠಾಣ್’ ಸಿನಿಮಾದ ಬಗ್ಗೆ ಬಹಳ ದಿನಗಳಿಂದ ವಿವಾದಗಳು ನಡೆಯುತ್ತಲೇ ಇವೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅದರಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿಯಲ್ಲಿ ಕಾಣಿಸಿಕೊಂಡಿಲ್ಲ.
ಬಹುನಿರೀಕ್ಷಿತ ಪಠಾಣ್ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ವಿವಾದಗಳೆಲ್ಲವನ್ನೂ ಮೆಟ್ಟಿನಿಂತು ಚಿತ್ರಗಳಲ್ಲಿ ಜೈ ಹಿಂದ್ ಘೋಷಣೆ ಮೊಳಗಿದೆ. ಸಖತ್ ಆಕ್ಷನ್, ಥ್ರಿಲ್ಲರ್ ಕಥೆ, ಕೆಚ್ಚೆದೆಯ ಸೈನಿಕನ ಹೋರಾಟ ಅದ್ಭುತವಾಗಿದೆ. ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜಾನ್ ಅಬ್ರಹಾಂ ಜೊತೆ ಕಿಂಗ್ ಖಾನ್ ಅಬ್ಬರಿಸಿದ್ದಾರೆ. ಎಜೆಂಟ್ ಪಾತ್ರದಲ್ಲಿ ಬಾದ್ ಶಾ ಕಾಣಿಸಿಕೊಂಡಿದ್ದು, ವೈರಿಗಳಿಂದ ಭಾರತದೇಶವನ್ನು ಕಾಪಾಡುವ ಏಕದೃಷ್ಟಿಯ ಸಿನಿಮಾದ ಟ್ರೈಲರ್ ಸಖತ್ತಾಗಿದೆ.
ಸಾಕಷ್ಟು ಸಮಯದ ನಂತರ ಭರ್ಜರಿಯಾಗಿ ತೆರೆ ಮೇಲೆ ಮಿಂಚಲು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಸಿದ್ಧರಾಗಿದ್ದಾರೆ. ಈಗಾಗಲೇ ʼಪಠಾಣ್ʼ ಚಿತ್ರದ ಎರಡು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಇದೀಗ ಬಹುನಿರೀಕ್ಷಿತ ಟ್ರೇಲರ್ ಬಿಡುಗಡೆಗೆ ದಿನಾಂಕ್ ಫಿಕ್ಸ್ ಆಗಿದ್ದು, ನಾಳೆ ಅಂದ್ರೆ ಜ.10 ರಂದು ಪಠಾಣ್ ಟ್ರೇಲರ್ ರಿಲೀಸ್ ಆಗಲಿದೆ. ಇದರ ಬೆನ್ನಲ್ಲೆ, ಎಸ್ಆರ್ಕೆ ಸಿನಿಮಾಗೆ ಬಾಯ್ಕಾಟ್, ಬ್ಯಾನ್ ಬಿಸಿ ಶುರುವಾಗಿದೆ.
ಬಹುನಿರೀಕ್ಷಿತ ಸಿನಿಮಾ ಪಠಾಣ್ ಚಿತ್ರಕ್ಕಾಗಿ ಶಾರುಖ್ ಖಾನ್ ಅಭಿಮಾನಿಗಳು ಕಾಯುತ್ತಿದ್ದಾರೆ. ಸರಣಿ ಫ್ಲಾಪ್ ಗಳಿಂದ ಬಳಲುತ್ತಿರುವ ಬಾಲಿವುಡ್ಗೆ ಈ ಸಿನಿಮಾ ವರದಾನವಾಗಲಿದೆಯಾ ಎನ್ನುವ ಪ್ರಶ್ನೆ ಮೂಡಿದೆ. ಅಲ್ಲದೆ, ಶಾರುಖ್ ಫಾರ್ಮ್ ಕಳೆದುಕೊಂಡು ಹಲವು ವರ್ಷಗಳೇ ಕಳೆದಿವೆ. ಝೀರೋ ಚಿತ್ರದ ಮೂಲಕ ಶಾರುಖ್ ನಿಜವಾಗಿಯೂ ಜೀರೋ ಆದ್ರು. ಆದರೆ ಇಷ್ಟು ವರ್ಷಗಳ ನಂತರ ಮತ್ತೆ ಪಠಾಣ್ ಆಗಿ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ.
Ranveer-Deepika Divorce: ವಿವಾಹ ವಾರ್ಷಿಕೋತ್ಸವ, ದೀಪಾವಳಿ, ಹೊಸ ವರ್ಷದಂದೂ ಈ ಜೋಡಿ ಒಟ್ಟಿಗೆ ಇರುವ ಒಂದೂ ಫೋಟೋವನ್ನು ಹಂಚಿಕೊಂಡಿಲ್ಲ. ಇದಲ್ಲದೆ ದೀಪಿಕಾರ ಹುಟ್ಟುಹಬ್ಬದಂದು ರಣವೀರ್ ಯಾವುದೇ ಪೋಸ್ಟ್ ಹಂಚಿಕೊಳ್ಳಲಿಲ್ಲ. ಹೀಗಾಗಿ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಅನ್ನೋ ಗುಲ್ಲು ಕೇಳಿಬರುತ್ತಿದೆ.
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಮುಂಬರುವ ʼಪಠಾಣ್ʼ ಚಿತ್ರದ ಹಾಡುಗಳು ಸೇರಿದಂತೆ ಸಿನಿಮಾದಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಲು ಮತ್ತು ಪರಿಷ್ಕೃತ ಆವೃತ್ತಿಯನ್ನು ಸಲ್ಲಿಸುವಂತೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್ಸಿ) ನಿರ್ಮಾಪಕರಿಗೆ ಸಲಹೆ ನೀಡಿದೆ ಎಂದು ಸಿಬಿಎಫ್ಸಿ ಅಧ್ಯಕ್ಷ ಪ್ರಸೂನ್ ಜೋಶಿ ಹೇಳಿದ್ದಾರೆ.
ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ಪಠಾಣ್ ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಹಲವು ವರ್ಷಗಳ ನಂತರ ಕಿಂಗ್ಖಾನ್ನನ್ನು ತೆರೆಮೇಲೆ ನೋಡಲು ಅವರ ಅಭಿಮಾನಿಗಳು ಕಾತುರರಾಗಿದ್ದಾರೆ. ಈ ನಡುವೆ ಚಿತ್ರದ ʼಬೇಷರಂ ರಂಗ್ʼ ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಬಟ್ಟೆಗೆ ಆಕ್ಷೇಪ ವ್ಯಕ್ತವಾಗಿತ್ತು. ಇದರಿಂದ ಚಿತ್ರ ದೊಡ್ಡ ವಿವಾದಕ್ಕೆ ಗುರಿಯಾಗಿತ್ತು. ಇದೀಗ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಪಠಾಣ್ ಸಾಂಗ್ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ.
Actress got Cheated in Love: ಪ್ರೀತಿಯ ಮುಂದೆ ಎಲ್ಲವೂ ಶೂನ್ಯ ಎನ್ನುತ್ತಾರೆ ಪ್ರೇಮಿಗಳು. ಆದರೆ ಒಂದುಕ್ಷಣ ಆ ಪ್ರೀತಿ ಒಡೆದರೆ ಮರುಕ್ಷಣ ಎಲ್ಲವೂ ವಿಚಿತ್ರ ಎಂಬಂತೆ ಭಾಸವಾಗುತ್ತದೆ. ಇಂತಹದ್ದೇ ನೋವಿಗೆ ಜಾಲಕ್ಕೆ ಸಿಲುಕಿದ್ದರು ಬಾಲಿವುಡ್ ನಟಿಯರು. ಇದರಲ್ಲಿ ಕೆಲವರು ಮಾನಸಿಕವಾಗಿ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ನಿರ್ಧಾರಕ್ಕೆ ಕೂಡ ಬಂದಿದ್ದರು ಎನ್ನಲಾಗಿದೆ.
ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ʼಪಠಾಣ್ʼ ಸಿನಿಮಾ ವಿವಾದ ಮುಗಿಯುವಂತೆ ಕಾಣುತ್ತಿಲ್ಲ. ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿಕೆಯ ನಂತರ ಮಧ್ಯ ಪ್ರದೇಶ ರಾಜ್ಯ ವಿಧಾನಸಭೆಯ ಸ್ಪೀಕರ್ ಗಿರೀಶ್ ಗೌತಮ್ ಅವರು ʼಪಠಾನ್ʼ ವಿರುದ್ಧ ಧ್ವನಿ ಎತ್ತಿದ್ದಾರೆ. ಅಲ್ಲದೆ, ಶಾರುಖ್ ಖಾನ್ ತನ್ನ ಮಗಳಾದ ಸುಹಾನಾ ಖಾನ್ ಜೊತೆ ಕುಳಿತು ಪಠಾಣ್ ಸಿನಿಮಾ ನೋಡಲಿ ಅಂತ ಛಾಲೆಂಜ್ ಹಾಕಿದ್ದಾರೆ.
Besharam Rang Controversy: 'ಪಠಾಣ್' ಚಿತ್ರದ 'ಬೇಷರಂ ರಂಗ್' ಹಾಡಿಗೆ ಸಂಬಂಧಿಸಿದಂತೆ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ, ಇದೆಲ್ಲದರ ನಡುವೆ, ದೀಪಿಕಾ ಪಡುಕೋಣೆಯ ಹಳೆಯ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅದರಲ್ಲಿ ಆಕೆ ಬಣ್ಣ ಮತ್ತು ಧರ್ಮದ ಬಗ್ಗೆ ಮಾತನಾಡುತ್ತಿದ್ದಾಳೆ.
Deepika Padukone creates history: ಭಾರತ ದೇಶಕ್ಕೆ ಇದೊಂದು ಹೆಮ್ಮೆಯ ಸಂಗತಿ. ಫಿಫಾ 2022ರ ವಿಶ್ವಕಪ್ ಟ್ರೋಫಿಯನ್ನು ಅನಾವರಣ ಮಾಡಿದ್ದು ಕರ್ನಾಟಕ ಮೂಲದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ. ಈ ಮೂಲಕ ಮತ್ತೊಮ್ಮೆ ದೇಶಕ್ಕೆ ಗೌರವ ತಂದಿದ್ದಾರೆ. ಇನ್ನು ಫಿಫಾ ಟ್ರೋಫಿಯನ್ನು ಅನಾವರಣಗೊಳಿಸಿದ ಮೊದಲ ಭಾರತೀಯರು ಎಂಬ ಹೆಗ್ಗಳಿಕೆಗೆ ದೀಪಿಕಾ ಪಾತ್ರರಾಗಿದ್ದಾರೆ.
Deepika Padukone : ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಮುಂಬರುವ ಸಿನಿಮಾ ʼಪಠಾನ್ʼ ವಿವಾದದ ಕೇಂದ್ರ ಬಿಂದುವಾಗಿದೆ. ಮಧ್ಯಪ್ರದೇಶದಲ್ಲಿ ದೀಪಿಕಾ ಕೇಸರಿ ಬಿಕನಿ ವಿವಾದ ತಾರಕ್ಕೇರಿದೆ. ಥಿಯೇಟರ್ಗಳಲ್ಲಿ ಚಲನಚಿತ್ರವನ್ನು ನಿಷೇಧಿಸಲು ಒತ್ತಾಯಗಳು ಹೆಚ್ಚುತ್ತಿವೆ. ಈ ನಡುವೆ ಸೋಮವಾರದಿಂದ ಪ್ರಾರಂಭವಾಗಲಿರುವ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯವನ್ನು ಚರ್ಚಿಸುವ ಸಾಧ್ಯತೆಯಿದೆ.
Shahrukh Khan : ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ಗೆ ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಸಿನಿರಂಗದಲ್ಲಿ ಪ್ಯಾನ್ಸ್ಗೆ ಅತ್ಯಂತ ಪ್ರೀತಿಪಾತ್ರರಾದ ನಟರಲ್ಲಿ ಕಿಂಗ್ ಖಾನ್ ಕೂಡ ಒಬ್ಬರು. ಇದೀಗ ಅವರ ಅಭಿಮಾನಿಯೊಬ್ಬರು ಮಾಡಿರುವ ಕೆಲಸ ಇಂಟರ್ನೆಟ್ನಲ್ಲಿ ಟಾಕ್ ಅಪ್ ದಿ ಡೇ ಆಗಿದ್ದು, ಈ ಕುರಿತ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ದಿನದಿಂದ ದಿನಕ್ಕೆ ಪಠಾಣ್ ಕಾಂಟ್ರುವರ್ಸಿ ಲಿಸ್ಟ್ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮೊನ್ನೆಯವರೆಗೂ ದೀಪಿಕಾ ಪಡುಕೋಣೆ ಬಿಕಿನಿ ಸದ್ದು ಮಾಡಿತ್ತು. ಅಲ್ಲದೆ, ಹಿಂದೂ ಸಂಘಟನೆಗಳು ಕೇಸರಿ ಕಲರ್ ಬಿಕಿನಿ ತೊಟ್ಟಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ಪಠಾಣ್ ಬಾಯ್ಕಾಟ್ ಮಾಡೋಕೆ ಮುಂದಾಗಿದ್ರು. ಇದೀಗ, ಮುಸ್ಲಿಂ ಸಂಘಟನೆಗಳೂ ಸಹ ಪಠಾಣ್ ಸಿನಿಮಾ ವಿರುದ್ಧ ಧ್ವನಿ ಎತ್ತಿದ್ದು, ಬ್ಯಾನ್ ಮಾಡುವಂತೆ ಒತ್ತಾಯ ಮಾಡುತ್ತಿವೆ.
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನಟನೆಯ, ನಿರ್ದೇಶಕ ಸಿದ್ಧಾರ್ಥ್ ಆನಂದ್ ನಿರ್ದೇಶಿಸಿರುವ ʼಪಠಾಣ್ʼ ಚಿತ್ರ ವಿವಾದಕ್ಕೆ ಕಾರಣವಾಗಿದೆ. ಸಿನಿಮಾದ ಹಾಡಿನ ದೃಶ್ಯ ಒಂದರಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಿಕಿನಿ ಧರಿಸಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೆ, ಹಿಂದೂ ಸಂಘಟನೆಗಳು ಸಿನಿಮಾ ಬಿಡುಗಡೆ ಮಾಡದಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಕುರಿತು, ನಟ, ರಾಜಕಾರಣಿ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.