Pathaan : ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಮುಂಬರುವ ʼಪಠಾಣ್ʼ ಚಿತ್ರದ ಹಾಡುಗಳು ಸೇರಿದಂತೆ ಸಿನಿಮಾದಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಲು ಮತ್ತು ಪರಿಷ್ಕೃತ ಆವೃತ್ತಿಯನ್ನು ಸಲ್ಲಿಸುವಂತೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ನಿರ್ಮಾಪಕರಿಗೆ ಸಲಹೆ ನೀಡಿದೆ ಎಂದು ಸಿಬಿಎಫ್‌ಸಿ ಅಧ್ಯಕ್ಷ ಪ್ರಸೂನ್ ಜೋಶಿ ಹೇಳಿದ್ದಾರೆ.
ಇತ್ತೀಚೆಗೆ ಪಠಾಣ್ ಸಿನಿಮಾ ಪ್ರಮಾಣೀಕರಣಕ್ಕಾಗಿ CBFC ಪರೀಕ್ಷಾ ಸಮಿತಿಯನ್ನು ತಲುಪಿತು ಮತ್ತು ಮಂಡಳಿಯ ಮಾರ್ಗಸೂಚಿಗಳ ಪ್ರಕಾರ ಸರಿಯಾದ ಹಾಗೂ ಸಂಪೂರ್ಣ ಪರೀಕ್ಷಾ ಪ್ರಕ್ರಿಯೆಯ ಮೂಲಕ ಹೋಯಿತು. ಜಾನ್ ಅಬ್ರಹಾಂ ಸಹ ನಟಿಸಿರುವ ಸಿದ್ಧಾರ್ಥ್ ಆನಂದ್ ಅವರ ನಿರ್ದೇಶನದ ʼಪಠಾಣ್ʼ 2023 ರ ಜನವರಿಯಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಆದ್ರೆ ʼಬೇಷರಂ ರಂಗ್ʼ ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಣ್ಣದ ಬಿಕಿನಿ ವಿವಾದವನ್ನು ಉಂಟುಮಾಡಿತು.
ಇದನ್ನೂ ಓದಿ: ಬರ್ತ್‌ಡೇ ಪಾರ್ಟಿಗೆ ಕಂಗನಾ ಕರೆಯಲು ಮರೆತ ಸಲ್ಲು..! ಓ.. ಮ್ಯಾಟರ್ ಇದಾ
ಇದೀಗ ಹಾಡುಗಳನ್ನು ಒಳಗೊಂಡಂತೆ ಚಿತ್ರದಲ್ಲಿ ಬದಲಾವಣೆಗಳನ್ನು ತರಲು ಹಾಗೂ ಟ್ರೇಲರ್ ಬಿಡುಗಡೆಗೆ ಮೊದಲು ತಿದ್ದುಪಡಿ ಮಾಡಿದ ಆವೃತ್ತಿಯನ್ನು ತೋರಿಸುವಂತೆ ಸಮಿತಿ ಚಿತ್ರದ ನಿರ್ಮಾಪಕರಿಗೆ ತಿಳಿಸಿದೆ. ಅಲ್ಲದೆ, ಯಾವುದೇ ವರ್ಗಕ್ಕೆ ಮತ್ತು ಪ್ರೇಕ್ಷಕರ ನೋವಾಗಂತೆ ಸಮತೋಲನ ಕಾಪಾಡುವಂತೆ ಹೇಳಲಾಗಿದೆ ಎಂದು ಜೋಶಿ ಅವರು ತಿಳಿದ್ದಾರೆ.
ʼಬೇಷರಂ ರಂಗ್ʼ ಹಾಡು ಡಿಸೆಂಬರ್ 12 ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿತ್ತು. ಹಲವರು ಸಾಂಗ್ ಅನ್ನು ಇಷ್ಟಪಟ್ಟರೆ, ಕೆಲವರು ಕೇಸರಿ ಮತ್ತು ಹಸಿರು ವೇಷಭೂಷಣಗಳ ಬಳಕೆಯ ಬಗ್ಗೆ ಆಕ್ಷೇಪ ಮಾಡಿದ್ದರು. ಹಲವಾರು ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ದೀಪಿಕಾ ಮತ್ತು ಶಾರುಖ್ ಅವರ ಪ್ರತಿಕೃತಿಗೆ ಬೆಂಕಿಯನ್ನೂ ಸಹ ಹಚ್ಚಿದ್ದರು. ಬೇಷರಂ ರಂಗ್ ಹಾಡು ಆಶ್ಲೀಲವಾಗಿದೆ ಎಂದು ದೂರಿದ್ದರು. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಎರಡನೇ ಸಾಂಗ್ ʼಜೂಮೇ ಜೋ ಪಠಾನ್ʼ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.