Deepika - Ranveer : ಅಂಬಾನಿ ಪುತ್ರನ ನಿಶ್ಚಿತಾರ್ಥದಲ್ಲಿ ಗಮನ ಸೆಳೆದ ದೀಪಿಕಾ - ರಣವೀರ್‌ ಔಟ್‌ಫಿಟ್‌

Anant Ambani - Radhika Merchant Engagement : ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥದಲ್ಲಿ ಬಾಲಿವುಡ್‌ ತಾರೆಯರ ದಂಡೇ ನೆರೆದಿತ್ತು.

Anant Ambani - Radhika Merchant Engagement : ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥದಲ್ಲಿ ಬಾಲಿವುಡ್‌ ತಾರೆಯರ ದಂಡೇ ನೆರೆದಿತ್ತು. ಅಂಬಾನಿ ಕುಟುಂಬ ಈ ನಿಶ್ಚಿತಾರ್ಥವನ್ನು ತಮ್ಮ ಮನೆಯಾದ ಆಂಟಿಲಿಯಾದಲ್ಲಿ ಬಹಳ ಅದ್ಧೂರಿಯಾಗಿ ಮಾಡಿದ್ದಾರೆ. ಸದ್ಯಕ್ಕೆ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ನಿಶ್ಚಿತಾರ್ಥಕ್ಕೆ ಬಂದ ಕೆಲ ಬಾಲಿವುಡ್‌ ಸ್ಟಾರ್‌ಗಳ ಫೋಟೋಗಳು ಇಲ್ಲಿವೆ ನೋಡಿ.
 

1 /5

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇಬ್ಬರೂ ಅಂಬಾನಿ ಪುತ್ರನ ನಿಶ್ಚಿತಾರ್ಥದಲ್ಲಿ ರಾಜ - ರಾಣಿಯಂತೆ ಕಾಣುತ್ತಿದ್ದರು. ಕಪ್ಪು ಶೆರ್ವಾನಿಯಲ್ಲಿ ರಣವೀರ್, ಕೆಂಪು ಸೀರೆಯಲ್ಲಿ ದೀಪಿಕಾ ಎಲ್ಲರ ಗಮನಸೆಳೆದರು. 

2 /5

ದೀಪಿಕಾ ತುಂಬಾ ಸುಂದರವಾದ ಕೆಂಪು ಬಣ್ಣದ ಗೋಲ್ಡನ್‌ ವರ್ಕ್‌ ಇರುವ  ಸೀರೆಯನ್ನು ಧರಿಸಿದ್ದರು, ಅದರೊಂದಿಗೆ ಅವಳು ನೆಕ್‌ಲೆಸ್‌ ಧರಿಸಿದ್ದರು. ಅದು ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತಿತ್ತು. 

3 /5

ರಣವೀರ್-ದೀಪಿಕಾ ಪರಸ್ಪರ ಕೈಹಿಡಿದುಕೊಂಡು ಪಾಪರಾಜಿಗಳಿಗೆ ಪೋಸ್‌ ನೀಡಿದರು. 

4 /5

ದೀಪಿಕಾ ರಣವೀರ್‌ಗಿಂತ ಸ್ವಲ್ಪ ಹೊತ್ತ ಮೊದಲು, ಶಾರುಖ್ ಖಾನ್ ಕುಟುಂಬ ಆಗಮಿಸಿತ್ತು. ಶಾರುಖ್‌ ಕ್ಯಾಮೆರಾ ಕಣ್ಣುಗಳಿಂದ ತಪ್ಪಿಸಿಕೊಂಡರು. ಆದರೆ ಅವರ ಪತ್ನಿ ಗೌರಿ ಖಾನ್ ಮಗ ಆರ್ಯನ್ ಖಾನ್ ಫೋಟೋಗೆ ಪೋಸ್‌ ಕೊಟ್ಟರು.

5 /5

ಅದೇ ಸಮಯದಲ್ಲಿ ಅರ್ಜುನ್ ಕಪೂರ್ ಕೂಡ ತಂದೆ ಬೋನಿ ಕಪೂರ್ ಅವರೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ, ಅರ್ಜುನ್ ಕಪೂರ್ ನೀಲಿ ಪಠಾನಿ ಕುರ್ತಾ ಮತ್ತು ಪೈಜಾಮಾ ಧರಿಸಿದ್ದರು.