Shahrukh Khan : ಫ್ಯಾನ್ಸ್‌ಗೆ ʼಹೆದರ ಬೇಡಿʼ ಎಂದ ಶಾರುಖ್‌ : ಅದಕ್ಕೆ ಅಭಿಮಾನಿ ಹೀಗಾ ಮಾಡೋದು...!

Shahrukh Khan : ಬಾಲಿವುಡ್‌ ಬಾದ್‌ ಶಾ ಶಾರುಖ್‌ ಖಾನ್‌ಗೆ ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಸಿನಿರಂಗದಲ್ಲಿ ಪ್ಯಾನ್ಸ್‌ಗೆ ಅತ್ಯಂತ ಪ್ರೀತಿಪಾತ್ರರಾದ ನಟರಲ್ಲಿ ಕಿಂಗ್‌ ಖಾನ್‌ ಕೂಡ ಒಬ್ಬರು. ಇದೀಗ ಅವರ ಅಭಿಮಾನಿಯೊಬ್ಬರು ಮಾಡಿರುವ ಕೆಲಸ ಇಂಟರ್‌ನೆಟ್‌ನಲ್ಲಿ ಟಾಕ್‌ ಅಪ್‌ ದಿ ಡೇ ಆಗಿದ್ದು, ಈ ಕುರಿತ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

Written by - Krishna N K | Last Updated : Dec 18, 2022, 03:04 PM IST
  • ಬಾಲಿವುಡ್‌ ಬಾದ್‌ ಶಾ ಶಾರುಖ್‌ ಖಾನ್‌ಗೆ ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ.
  • ನೆಚ್ಚಿನ ನಟನ ಜೊತೆ ಒಂದು ಸೆಲ್ಫಿ ತಗೊಂಡ್ರೆ ಸಾಕು, ಅದನ್ನೇ ಫ್ರೇಮ್‌ ಮಾಡಿಸಿ ಮನೆಯ ಗೊಡೆಗೆ ನೆತು ಹಾಕಿ ಖುಷಿ ಪಡ್ತಾರೆ.
  • ಇದೀಗ ಎಸ್‌ಆರ್‌ಕೆ ಫ್ಯಾನ್ ಮಾಡಿರುವ ಕೆಲಸ ಇಂಟರ್‌ನೆಟ್‌ನಲ್ಲಿ ಟಾಕ್‌ ಅಪ್‌ ದಿ ಡೇ ಆಗಿದೆ.
Shahrukh Khan : ಫ್ಯಾನ್ಸ್‌ಗೆ ʼಹೆದರ ಬೇಡಿʼ ಎಂದ ಶಾರುಖ್‌ : ಅದಕ್ಕೆ ಅಭಿಮಾನಿ ಹೀಗಾ ಮಾಡೋದು...! title=

ನವದೆಹಲಿ : ಬಾಲಿವುಡ್‌ ಬಾದ್‌ ಶಾ ಶಾರುಖ್‌ ಖಾನ್‌ಗೆ ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಸಿನಿರಂಗದಲ್ಲಿ ಪ್ಯಾನ್ಸ್‌ಗೆ ಅತ್ಯಂತ ಪ್ರೀತಿಪಾತ್ರರಾದ ನಟರಲ್ಲಿ ಕಿಂಗ್‌ ಖಾನ್‌ ಕೂಡ ಒಬ್ಬರು. ಇದೀಗ ಅವರ ಅಭಿಮಾನಿಯೊಬ್ಬರು ಮಾಡಿರುವ ಕೆಲಸ ಇಂಟರ್‌ನೆಟ್‌ನಲ್ಲಿ ಟಾಕ್‌ ಅಪ್‌ ದಿ ಡೇ ಆಗಿದ್ದು, ಈ ಕುರಿತ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಹೌದು.. ಅಭಿಮಾನಿಗಳಿಗೆ ಅವರ ಹೀರೋಗಳು ಹೇಳಿದ್ದೇ ವೇದ ವಾಕ್ಯ. ತಮ್ಮ ನೆಚ್ಚಿನ ನಟನ ಜೊತೆ ಒಂದು ಸೆಲ್ಫಿ ತಗೊಂಡ್ರೆ ಸಾಕು, ಅದನ್ನೇ ಫ್ರೇಮ್‌ ಮಾಡಿಸಿ ಮನೆಯ ಗೊಡೆಗೆ ನೆತು ಹಾಕಿ ದಿನವೂ ನೋಡಿ ಖುಷಿ ಪಡ್ತಾರೆ. ಇತ್ತೀಚೆಗೆ, ಎಸ್‌ಆರ್‌ಕೆ ತಮ್ಮ ಅಭಿಮಾನಿಗಳ ಜೊತೆ #AskSRK ಸೆಷನ್ ಅನ್ನು ನಡೆಸಿದರು. ಈ ವೇಳೆ ಅವರು ತಮ್ಮ ಅಭಿಮಾನಿಗಳ ಕೆಲವು ಟ್ವೀಟ್‌ಗಳಿಗೆ ಉತ್ತರಿಸಿದರು. ಇದೀಗ, ಅವರ ಅಭಿಮಾನಿಯೊಬ್ಬರು ಬಾದ್‌ ಶಾ ನೀಡಿದ ಉತ್ತರದ ಟ್ಟೀಟ್‌ನ್ನೇ ಫೋಟೋ ಪ್ರೇಮ್‌ ಮಾಡಿಸಿ ಅಭಿಮಾನ ಮೆರೆದಿದ್ದಾರೆ.

ಇದನ್ನೂ ಒದಿ: Yai Re party song : ಹನಿಸಿಂಗ್‌ ಸಾಂಗ್‌ ರಿಲೀಸ್‌.. ಇಯರ್‌ ಎಂಡ್‌ಗೆ ಜೋರ್ ಲಗಾಕೆ ನಾಚೋ ರೇ..!

#AskSRK ಸೇಷನ್‌ ವೇಳೆ, ಅಭಿಮಾನಿಯೊಬ್ಬರು, "ಫ್ಯಾನ್ ಕೋ ಗೌರವ್ ಬನೇನೆ ಕಾ ಚಾನ್ಸ್ ಮತ್ ದೋ ಸರ್, ಪ್ರತ್ಯುತ್ತರ ದೇದೋ ಜಲ್ದಿ ಎಂದು ಟ್ಟೀಟ್‌ ಮಾಡಿದ್ದರು. ಅದಕ್ಕೆ ಶಾರುಖ್‌ "ಡರಾ ಮತ್! ಅಂತ ರೀ ಟ್ಟೀಟ್‌ ಮಾಡುವ ಮೂಲಕ ಅಭಿಮಾನಿ ಪ್ರಶ್ನೆಗೆ ಉತ್ತರಿಸಿದ್ದರು. ಇದರಿಂದ ಖುಷಿಯಾಗಿ ಟ್ಟೀಟ್‌ನ್ನು ಪ್ರೇಮ್‌ ಮಾಡಿಸಿ ಇಟ್ಟುಕೊಂಡಿದ್ದಾರೆ. ಅಲ್ಲದೆ, ಅದನ್ನು ಕೊನೆಯವರೆಗೂ ಕಾಪಾಡಿಕೊಳ್ಳುತ್ತೇನೆ ಅಂತ ಹೇಳಿದ್ದಾರೆ.

ಎಸ್‌ಆರ್‌ಕೆ ನಟನೆಯ ಪಠಾಣ್‌ ಸಿನಿಮಾ ಶೀಘ್ರದಲ್ಲೇ ವಿಶ್ವದಾದ್ಯಂತ ತೆರೆಕಾಣಲಿದೆ. ಖಾನ್‌ ಜೊತೆ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ನಟಿಸಿದ್ದಾರೆ. ಆಕ್ಷನ್-ಥ್ರಿಲ್ಲರ್ ಪಠಾಣ್‌ ಸಿನಿಮಾದ ಮೊದಲ ಹಾಡು ʼಬೇಷರಂ ರಂಗ್ʼ ಈಗಾಗಲೇ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. ಅಲ್ಲದೆ, ದೀಪಿಕಾ ತೊಟ್ಟ ಕೇಸರಿ ಬಿಕಿನಿ ವಿವಾದಕ್ಕೆ ಗುರಿಯಾಗಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್‌ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಜನವರಿ 25, 2023 ರಂದು ಬಿಡುಗಡೆಯಾಗಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News