ಕೊವಿಡ್ ಲಸಿಕೆ ಪಡೆದ ಭಾರತೀಯರ ವೈಯಕ್ತಿಕ ವಿವರಗಳು ಸೋರಿಕೆಯಾಗಿವೆ. ಲಸಿಕೆ ಪಡೆದವರ ಮೊಬೈಲ್ ಸಂಖ್ಯೆಗಳು, ಆಧಾರ್ ಸಂಖ್ಯೆಗಳು, ಪಾಸ್ಪೋರ್ಟ್ ಸಂಖ್ಯೆಗಳು, ವೋಟರ್ ಐಡಿ, ಕುಟುಂಬ ಸದಸ್ಯರ ವಿವರಗಳು ಸೇರಿದಂತೆ ಎಲ್ಲಾ ಮಾಹಿತಿ ಸೋರಿಕೆಯಾಗಿದೆ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆ ಅವರು ಟ್ವೀಟ್ ಮಾಡಿದ್ದಾರೆ.
WhatsApp users Beware: ನೀವೂ ಕೂಡ ವಾಟ್ಸಾಪ್ ಬಳಕೆದಾರರಾಗಿದ್ದರೆ, ಈ ಸುದ್ದಿ ನಿಮಗೆ ಆಘಾತವನ್ನುಂಟು ಮಾಡಬಹುದು. ಸುಮಾರು 500 ಮಿಲಿಯನ್ ವಾಟ್ಸಾಪ್ ಬಳಕೆದಾರರ ಫೋನ್ ನಂಬರ್ ಸೋರಿಕೆಯಾಗಿದೆ ಎಂದು ವರದಿಯೊಂದರಲ್ಲಿ ತಿಳಿಸಲಾಗಿದೆ.
Cowin App Details - ಭಾರತದಲ್ಲಿನ ಸಾವಿರಾರು ಜನರ ಹೆಸರುಗಳು, ಮೊಬೈಲ್ ಸಂಖ್ಯೆಗಳು, ವಿಳಾಸಗಳು ಮತ್ತು ಕೋವಿಡ್ ಪರೀಕ್ಷೆಯ ಫಲಿತಾಂಶಗಳು ಸೇರಿದಂತೆ ಇತರ ವೈಯಕ್ತಿಕ ಮಾಹಿತಿ ಸರ್ಕಾರಿ ಸರ್ವರ್ನಿಂದ ಸೋರಿಕೆಯಾಗಿವೆ.
ಕೆಲವು ಅಪಾಯಕಾರಿ ಅಪ್ಲಿಕೇಶನ್ಗಳಿಂದಾಗಿ ನಿಮ್ಮ ಫೇಸ್ಬುಕ್ ಡೇಟಾ ಅಪಾಯದಲ್ಲಿದೆ. ಡಾಕ್ಟರ್ ವೆಬ್ ಮಾಲ್ವೇರ್ ವಿಶ್ಲೇಷಕರು ಅಂತಹ ಕೆಲವು ಅಪಾಯಕಾರಿ ಅಪ್ಲಿಕೇಶನ್ಗಳನ್ನು ಪಟ್ಟಿ ಮಾಡಿದ್ದು ಅವು ನಿಮ್ಮ ಡೇಟಾವನ್ನು ಹಾನಿಗೊಳಿಸಬಹುದು ಎಂದು ಹೇಳಲಾಗುತ್ತಿದೆ.
Data Leak - ಸುಮಾರು 11 ಕೋಟಿ ಭಾರತೀಯರ ಕ್ರೆಡಿಟ್ / ಡೆಬಿಟ್ ಕಾರ್ಡ್ ವಿವರಗಳು ಸೋರಿಕೆಯಾಗಿವೆ ಎಂದು ಸೈಬರ್ ಸೆಕ್ಯುರಿಟಿ ತಜ್ಞ ರಾಜಹರಿಯಾ ಹೇಳಿದ್ದಾರೆ. ಇದು ಗ್ರಾಹಕರ KYC ಸಾಫ್ಟ್ ಕಾಪಿ ಮತ್ತು PAN Card ಮತ್ತು Aadhaar Card ಮಾಹಿತಿಯನ್ನು ಸಹ ಒಳಗೊಂಡಿದೆ. ಡಾರ್ಕ್ ವೆಬ್ನಲ್ಲಿ 1.5 ಬಿಟ್ಕಾಯಿನ್ ಪಾವತಿಸುವ ಮೂಲಕ ಬಳಕೆದಾರರ ಡೇಟಾವನ್ನು ಸುಲಭವಾಗಿ ಖರೀದಿಸಬಹುದು ಎಂದು ರಾಜಹರಿಯಾ ಹೇಳಿದ್ದಾರೆ.
Data Leak Through Telegram Bot App: ಹ್ಯಾಕರ್ಸ್ (Hackers)ಗಳು ಇಡೀ ವಿಶ್ವದ ಇಂಟರ್ನೆಟ್ ಬಳಕೆದಾರರಿಗೆ ನಿದ್ದೆಗೆಡಿಸಿದ್ದಾರೆ. ವರದಿಗಳ ಪ್ರಕಾರ, Telegram Bot App ಮೂಲಕ ಹ್ಯಾಕರ್ಸ್ 50 ಕೋಟಿಗೂ ಹೆಚ್ಚು ಜನರ ಡೇಟಾವನ್ನು ಕದ್ದಿದ್ದಾರೆ. 2019 ಕ್ಕಿಂತ ಮೊದಲು ರಚಿಸಲಾದ ಆ ಫೇಸ್ಬುಕ್ ಖಾತೆಗಳನ್ನು(Facebook Accounts) ಹ್ಯಾಕರ್ಗಳು ಗುರಿಯಾಗಿಸಿಕೊಂಡಿದ್ದಾರೆ (Target).
Data Leak: ಡಿಜಿಟಲ್ ಪೇಮೆಂಟ್ ಗೆಟ್ ವೇ ಆಗಿರುವ ಜಸ್ ಪೇ (Digital payments gateway Juspay) ಸರ್ವರ್ ನಿಂದ 10 ಕೋಟಿ ಭಾರತೀಯರ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ದತಾಂಶಗಳು ಸೋರಿಕೆಯಾಗಿವೆ ಎಂದು ಹೇಳಲಾಗುತ್ತಿದೆ.
Physical Safety Key: ಹ್ಯಾಕರ್ಗಳ ಕಾಟದಿಂದ ಪಾರಾಗಲು ಪ್ರಸ್ತುತ ಫೇಸ್ಬುಕ್ ಎರಡು-ಹಂತದ ಪರಿಶೀಲನೆ ಮತ್ತು ರಿಯಲ್ ಟೈಮ್ ಮೇಲ್ವಿಚಾರಣೆಯನ್ನು ಬಳಸುತ್ತಿದೆ, ಆದರೆ ಮುಂದಿನ ವರ್ಷದಿಂದ ಇದು 'ಭೌತಿಕ ಸುರಕ್ಷತಾ ಕೀಲಿಯನ್ನು' (Physical Saftey Key) ಸಹ ಬಳಸಲು ಮುಂದಾಗಿದೆ. ಇದು ಡೇಟಾ ಸುರಕ್ಷತೆಯನ್ನು ಹೆಚ್ಚು ಉತ್ತಮಗೊಳಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಇತ್ತೀಚೆಗಷ್ಟೇ ವಾಟ್ಸ್ ಆಪ್ ಬಿಡುಗಡೆಗೊಳಿಸಿರುವ 'ಕ್ಲಿಕ್ ಟು ಚಾಟ್' ವೈಶಿಷ್ಟ್ಯದ ಕುರಿತು ಹಲವು ಪ್ರಶ್ನೆಗಳು ಏಳಲಾರಂಭಿಸಿವೆ. ಏಕೆಂದರೆ ಈ ಕುರಿತು ಬಿಡುಗಡೆಯಾಗಿರುವ ಸಂಶೋಧನಾ ವರದಿ ಇದನ್ನು ಡೇಟಾ ಲೀಕ್ ಜೊತೆಗೆ ಜೋಡಿಸಿದೆ.
ಆನ್ಲೈನ್ ಗುಪ್ತಚರ ಸಂಸ್ಥೆಯೊಂದು ಪ್ರಮುಖ ಸೈಬರ್ ಅಪರಾಧ ಎಸಗಿದೆ ಎಂದು ದೃಢಪಡಿಸಿದೆ ಮತ್ತು 2.9 ಕೋಟಿ ಭಾರತೀಯರ ವೈಯಕ್ತಿಕ ಡೇಟಾವನ್ನು ಡಾರ್ಕ್ ವೆಬ್ನಲ್ಲಿ ಆನ್ಲೈನ್ನಲ್ಲಿ ಉಚಿತವಾಗಿ ಸೋರಿಕೆ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.