ಇನ್ನು Whatsapp ಡಾಟಾ ಲೀಕ್ ಆದರೂ ಯಾರಿಗೂ ಅದನ್ನು ಓದಲು ಆಗಲ್ಲ.!

ಇನ್ನು ವಾಟ್ಸಾಪ್ ಚಾಟಿಂಗ್ ಹಿಸ್ಟರಿ ಕೂಡಾ  encrypted ಆಗಲಿದೆ. ಅಂದರೆ ನಿಮ್ಮ ಚಾಟ್, ನಿಮ್ಮನ್ನು ಬಿಟ್ಟು ಬೇರೆ ಯಾರಿಗೂ ಓದಲು ಸಾಧ್ಯವಿಲ್ಲ.

ನವದೆಹಲಿ : ಪ್ರೈವೆಸಿ ಪಾಲಿಸಿ ವಿಚಾರದಲ್ಲಿ ವಾಟ್ಸಾಪ್ (WhatsApp) ಇತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದೆ. ಆದರೂ, ವಾಟ್ಸಾಪ್ ತನ್ನ ಆ ಪ್ ಅನ್ನು ಸತತವಾಗಿ ಅಪ್ ಡೆಟ್ (update) ಮಾಡುತ್ಲೇ ಇದೆ. ಇದರಲ್ಲೀಗ ಮತ್ತೊಂದು ಜಬರ್ದಪಸ್ತ್ ಫೀಚರ್ ಬಂದಿದೆ. ಇನ್ನು ನಿಮ್ಮ ವಾಟ್ಸಾಪ್ ಚಾಟ್ ಸಂಪೂರ್ಣ ಸೇಫ್.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಹೊಸ ಅಪ್ ಡೇಟ್ ಏನಿದೆ.!? ಲಭ್ಯ ಮಾಹಿತಿ ಪ್ರಕಾರ ಇನ್ನು ವಾಟ್ಸಾಪ್ ಚಾಟಿಂಗ್ ಹಿಸ್ಟರಿ ಕೂಡಾ  encrypted ಆಗಲಿದೆ. ಅಂದರೆ ನಿಮ್ಮ ಚಾಟ್, ನಿಮ್ಮನ್ನು ಬಿಟ್ಟು ಬೇರೆ ಯಾರಿಗೂ ಓದಲು ಸಾಧ್ಯವಿಲ್ಲ. ಅಂದರೆ ನಿಮ್ಮ ಚಾಟ್ ಸಂಪೂರ್ಣ ಸುರಕ್ಷಿತ.

2 /5

ಚಾಟ್ ಹಿಸ್ಟರಿಗೆ  ಇನ್ನು ಮುಂದೆ ಇರಲಿದೆ ಪಾಸ್ ವರ್ಡ್ .! ವಾಟ್ಸಾಪ್ ಅಪ್ ಡೇಟ್  ಬಗ್ಗೆ ನಿಗಾ ಇಡುವ ವೆಬ್ ಸೈಟ್ WaBetaInfo ಪ್ರಕಾರ, ವಾಟ್ಸಾಪ್ ಚಾಟ್ ಹಿಸ್ಟರಿಗೆ ಇನ್ನು ಪಾಸ್ ವರ್ಡ್ ಇರಲಿದೆ. ಅದನ್ನು ಯಾವುದೇ ಮೇಲ್ ಅಥವಾ ಹಾರ್ಡ್ ಡ್ರೈವ್ ನಲ್ಲಿ ಇಡಬಹುದಾಗಿದೆ. ಆದರೆ, ಅದನ್ನು ಓಪನ್ ಮಾಡಬೇಕಾದರೆ ಪಾಸ್ ವರ್ಡ್ ಅಗತ್ಯವಿರುತ್ತದೆ.

3 /5

ಪ್ರೈವೆಸಿ ವಿಚಾರದಲ್ಲಿ ಇದು ತೀರಾ ಮುಖ್ಯ : ವಾಟ್ಸಾಪ್ ಪ್ರೈವೆಸಿ ವಿಚಾರದಲ್ಲಿ ಏನೇ ಹೇಳಿದರೂ, ಒಂದು ವೇಳೆ ವಾಟ್ಸಾಪ್ ಚಾಟ್ ಲೀಕ್ ಆದರೆ, ಅದರಲ್ಲಿರುವ ವಿಚಾರ ಬಟಾಬಯಲಾಗಿ ಬಿಡುತ್ತದೆ. ಈಗ ಬರಲಿರುವ ಹೊಸ ಫೀಚರ್ ಪ್ರಕಾರ ಒಂದು ವೇಳೆ ನಿಮ್ಮ ಚಾಟ್ ಲೀಕ್ ಆದರೂ ಕೂಡಾ ಯಾರಿಗೂ ಅದನ್ನು ಓದಲು ಸಾಧ್ಯವಿಲ್ಲ. ಯಾಕೆಂದರೆ ಅದನ್ನು ಓಪನ್ ಮಾಡಬೇಕಾದರೆ ಪಾಸ್ ವರ್ಡ್ ಅಗತ್ಯವಿರುತ್ತದೆ. ಆ ಪಾಸ್ ವರ್ಡ್ ನಿಮ್ಮಲ್ಲಿ ಮಾತ್ರ ಇರುತ್ತದೆ. 

4 /5

ಅಂಡ್ರಾಯಿಡ್ ಮತ್ತು ಐಒಎಸ್‍ ಗಳಲ್ಲಿ ಈ ಅಪ್ಡೇಟ್ ಲಭ್ಯ: ಅಂಡ್ರಾಯಿಡ್ ಮತ್ತು ಐಒಎಸ್‍ ಗಳಲ್ಲಿ ಈ ಅಪ್ಡೇ ಟ್ ಲಭ್ಯವಿದೆ. ಈ ಪೀಚರ್ಸ್ ಅಪ್ಡೇಟ್ ಮಾಡಿಕೊಳ್ಳುವಂತೆ ಬಳಕೆದಾರರಿಗೆ ನೊಟಿಫಿಕೇಶನ್ ಬರಲಾರಂಭಿಸಿದೆ.  

5 /5

ವಾಟ್ಸಾಪ್ ಚಾಟ್ ಲೀಕ್ ಆಗುವುದು ಬ್ಯಾಕ್‍ ಅಪ್ ಚಾಟ್ನಿಂದ : ವಾಟ್ಸಾಪ್ ಚಾಟ್ ಲೀಕ್ ಆಗಿರುವ ವರದಿಗಳನ್ನು ನೀವು ಮಾಧ್ಯಮಗಳಲ್ಲಿ ಕೇಳಿರುತ್ತೀರಿ. ಸಾಮಾನ್ಯವಾಗಿ ಬ್ಯಾಕ್‍ ಅಪ್ ಚಾಟ್‍ ಗಳಿಂದಾಗಿ ವಾಟ್ಸಾಪ್ ಚಾಟ್ ಲೀಕ್ ಆಗುತ್ತದೆ. ಇನ್ನು ಈ ಚಾಟ್ ಕೂಡಾ end-to-end encrypted ಆಗಿರುತ್ತದೆ. ಹಾಗಾಗಿ, ಡಾಟಾ ಲೀಕ್ ಆದರೂ, ಡಾಟಾ ಓದಲು ನಿಮ್ಮನ್ನು ಬಿಟ್ಟು ಯಾರಿಂದಲೂ ಸಾಧ್ಯವಿಲ್ಲ.!