Data Leak: ನೀವೂ ಮೊಬೈಲ್ ಮೂಲಕ ಹಣ ಪಾವತಿಸುತೀರಾ! ಈ ಆಪ್ ನಿಂದ 35 ಲಕ್ಷ ಜನರ ದತಾಂಶ ಸೋರಿಕೆ

Data Leak - ಸುಮಾರು 11 ಕೋಟಿ ಭಾರತೀಯರ ಕ್ರೆಡಿಟ್ / ಡೆಬಿಟ್ ಕಾರ್ಡ್ ವಿವರಗಳು ಸೋರಿಕೆಯಾಗಿವೆ ಎಂದು ಸೈಬರ್ ಸೆಕ್ಯುರಿಟಿ ತಜ್ಞ ರಾಜಹರಿಯಾ ಹೇಳಿದ್ದಾರೆ. ಇದು ಗ್ರಾಹಕರ KYC ಸಾಫ್ಟ್ ಕಾಪಿ ಮತ್ತು PAN Card ಮತ್ತು Aadhaar Card  ಮಾಹಿತಿಯನ್ನು ಸಹ ಒಳಗೊಂಡಿದೆ. ಡಾರ್ಕ್ ವೆಬ್‌ನಲ್ಲಿ 1.5 ಬಿಟ್‌ಕಾಯಿನ್‌ ಪಾವತಿಸುವ ಮೂಲಕ ಬಳಕೆದಾರರ ಡೇಟಾವನ್ನು ಸುಲಭವಾಗಿ ಖರೀದಿಸಬಹುದು ಎಂದು ರಾಜಹರಿಯಾ ಹೇಳಿದ್ದಾರೆ. 

Written by - Nitin Tabib | Last Updated : Mar 31, 2021, 04:58 PM IST
  • ಮತ್ತೊಮ್ಮೆ ಬಹಿರಂಗಗೊಂಡ ಡೇಟಾ ಲೀಕ್ ಪ್ರಕರಣ
  • ಈ ಬಾರಿ ಪೇಮೆಂಟ್ ಆಪ್ ಅನ್ನು ಗುರಿಯಾಗಿಸಿದ ಕಳ್ಳರು.
  • ಈ ಸೈಬರ್ ದಾಳಿ ಎಲ್ಲಿ ನಡೆದಿದೆ ತಿಳಿಯೋಣ ಬನ್ನಿ.
Data Leak: ನೀವೂ ಮೊಬೈಲ್ ಮೂಲಕ ಹಣ ಪಾವತಿಸುತೀರಾ! ಈ ಆಪ್ ನಿಂದ 35 ಲಕ್ಷ ಜನರ ದತಾಂಶ ಸೋರಿಕೆ title=
Data Leak (Representational Image)

ನವದೆಹಲಿ: Data Leak - ಮೊಬೈಲ್ ಮೂಲಕ ಹಣ ಪಾವತಿ ಮಾಡುವವರ ಪಾಲಿಗೆ ಕಹಿ ಸುದ್ದಿಯೊಂದು ಪ್ರಕಟವಾಗಿದೆ. ಏಕೆಂದರೆ ಸೈಬರ್ ಕಳ್ಳರು ಮತ್ತೊಮ್ಮೆ ಬಳಕೆದಾರರ ಮಾಹಿತಿಗೆ ಕನ್ನಹಾಕಿರುವ ಸುದ್ದಿಯೊಂದು ಪ್ರಕಟಗೊಂಡಿದೆ. ದೇಶದ ಪ್ರಮುಖ ಮೊಬೈಲ್ ಪೇಮೆಂಟ್ ಆಪ್ ನ ಸರ್ವರ್ ನಿಂದ 35 ಲಕ್ಷ ಜನರ ದತಾಂಶ ಸೋರಿಕೆಯಾಗಿದೆ. 

Mobikwik ನಿಂದ ದತ್ತಾಂಶ ಸೋರಿಕೆ
ನಮ್ಮ ಅಂಗ ಸಂಸ್ಥೆಯಾಗಿರುವ  zeebiz.com ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಆನ್ಲೈನ್ ಪೇಮೆಂಟ್ ಆಪ್ ಆಗಿರುವ ಮೊಬಿಕ್ವಿಕ್ (Mobikwik) ಸರ್ವರ್ ನಿಂದ ಸುಮಾರು 35 ಲಕ್ಷ ಜನರ ವೈಯಕ್ತಿಕ ಮಾಹಿತಿ ಸೋರಿಎಯಾಗಿದೆ. ಸ್ವತಂತ್ರ ಸೈಬರ್ ಸಿಕ್ಯೋರಿಟಿ ತಜ್ಞರೊಬ್ಬರು ಕ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.

ದೊರೆತ ಮಾಹಿತಿಗಳ ಪ್ರಕಾರ ಮೊಬಿಕ್ವಿಕ್ ಬಳಕೆ ಮಾಡುವ ಸುಮಾರು 35 ಲಕ್ಷ ಗ್ರಾಹಕರ ಇ-ಮೇಲ್ ಅಡ್ರೆಸ್ಸ್, ಫೋನ್ ನಂಬರ್, ಬ್ಯಾಂಕ್ ಖಾತೆ ಡಿಟೇಲ್, ಕಾರ್ಡ್ ಡಿಟೇಲ್ ಹಾಗೂ ಪಾಸ್ವರ್ಡ್ ಗಳು ಕಳ್ಳತನವಾಗಿವೆ. ಆದರೆ, ಹ್ಯಾಕಿಂಗ್ (Cyber Attack)ಕುರಿತು ಪ್ರಕಟಗೊಂಡ ಈ ವರದಿಯ ಬಗ್ಗೆ ಸ್ಪಷ್ಟನೆ ನೀಡಿರುವ  Modikwik, ಈ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂದಿದೆ.

ಇದನ್ನೂ ಓದಿ- Data Leak: 10 ಕೋಟಿ ಭಾರತೀಯರ Debit/Credit ಕಾರ್ಡ್ ಮಾಹಿತಿ ಸೋರಿಕೆ

ಇನೊಂದೆದೆ ಸುಮಾರು 11 ಕೋಟಿ ಭಾರತೀಯರ ಕ್ರೆಡಿಟ್ / ಡೆಬಿಟ್ ಕಾರ್ಡ್ ವಿವರಗಳು ಸೋರಿಕೆಯಾಗಿವೆ (Cyber Fraud) ಎಂದು ಸೈಬರ್ ಸೆಕ್ಯುರಿಟಿ ತಜ್ಞ ರಾಜಹರಿಯಾ ಹೇಳಿದ್ದಾರೆ. ಇದು ಗ್ರಾಹಕರ KYC ಸಾಫ್ಟ್ ಕಾಪಿ ಮತ್ತು PAN Card ಮತ್ತು Aadhaar Card  ಮಾಹಿತಿಯನ್ನು ಸಹ ಒಳಗೊಂಡಿದೆ. ಡಾರ್ಕ್ ವೆಬ್‌ನಲ್ಲಿ 1.5 ಬಿಟ್‌ಕಾಯಿನ್‌ ಪಾವತಿಸುವ ಮೂಲಕ ಬಳಕೆದಾರರ ಡೇಟಾವನ್ನು ಸುಲಭವಾಗಿ ಖರೀದಿಸಬಹುದು ಎಂದು ರಾಜಹರಿಯಾ ಹೇಳಿದ್ದಾರೆ. 

ಇದನ್ನೂ ಓದಿ- 2.9 ಕೋಟಿ ಭಾರತೀಯರ ವೈಯಕ್ತಿಕ ಡೇಟಾ ಸೋರಿಕೆ

ಕೊರೊನಾ ವೈರಸ್ ಮಹಾಮಾರಿ ಹಾಗೂ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾದ ಬಳಿಕ ಸೈಬರ್ ಕ್ರೈಂ ಪ್ರಕರಣಗಳಲ್ಲಿ (Data Leak In India) ಭಾರಿ ಏರಿಕೆಯಾಗಿರುವುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ- 5 ಲಕ್ಷ ಕ್ಕೂ ಅಧಿಕ Zoom ಬಳಕೆದಾರರ ಅಕೌಂಟ್ ಹ್ಯಾಕ್, 10-15 ಪೈಸೆಗೆ ಪಾಸ್ವರ್ಡ್ ಗಳ ಮಾರಾಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News