Android ಬಳಕೆದಾರರೇ ಗಮನಿಸಿ! ಫೇಸ್‌ಬುಕ್‌ನ ಲಾಗಿನ್ ಪಾಸ್‌ವರ್ಡ್ ಕದಿಯುತ್ತಿರುವ ಅಪ್ಲಿಕೇಶನ್‌ಗಳ ಬಗ್ಗೆ ಇರಲಿ ಎಚ್ಚರ

ಕೆಲವು ಅಪಾಯಕಾರಿ ಅಪ್ಲಿಕೇಶನ್‌ಗಳಿಂದಾಗಿ ನಿಮ್ಮ ಫೇಸ್‌ಬುಕ್ ಡೇಟಾ ಅಪಾಯದಲ್ಲಿದೆ. ಡಾಕ್ಟರ್ ವೆಬ್ ಮಾಲ್ವೇರ್ ವಿಶ್ಲೇಷಕರು ಅಂತಹ ಕೆಲವು ಅಪಾಯಕಾರಿ ಅಪ್ಲಿಕೇಶನ್‌ಗಳನ್ನು ಪಟ್ಟಿ ಮಾಡಿದ್ದು ಅವು ನಿಮ್ಮ ಡೇಟಾವನ್ನು ಹಾನಿಗೊಳಿಸಬಹುದು ಎಂದು ಹೇಳಲಾಗುತ್ತಿದೆ.  

Written by - Yashaswini V | Last Updated : Jul 5, 2021, 01:50 PM IST
  • ಫೇಸ್‌ಬುಕ್ ಬಳಕೆದಾರರ ಲಾಗಿನ್ ಮತ್ತು ಪಾಸ್‌ವರ್ಡ್ ಮಾಹಿತಿಯನ್ನು ಕದಿಯುತ್ತಿರುವ ಅಪಾಯಕಾರಿ ಅಪ್ಲಿಕೇಶನ್‌ಗಳು
  • ಈ ಪೈಕಿ 9 ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (Google Play Store) ಲಭ್ಯ
  • ಗೂಗಲ್ ಈ 9 ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ
Android ಬಳಕೆದಾರರೇ ಗಮನಿಸಿ! ಫೇಸ್‌ಬುಕ್‌ನ ಲಾಗಿನ್ ಪಾಸ್‌ವರ್ಡ್ ಕದಿಯುತ್ತಿರುವ ಅಪ್ಲಿಕೇಶನ್‌ಗಳ ಬಗ್ಗೆ ಇರಲಿ ಎಚ್ಚರ title=
ಫೇಸ್‌ಬುಕ್‌ನ ಲಾಗಿನ್ ಪಾಸ್‌ವರ್ಡ್ ಕದಿಯುತ್ತಿವೆಯಂತೆ ಈ ಅಪಾಯಕಾರಿ ಅಪ್ಲಿಕೇಶನ್‌ಗಳು

ನವದೆಹಲಿ: ಫೇಸ್‌ಬುಕ್ ಬಳಕೆದಾರರ ಲಾಗಿನ್ ಮತ್ತು ಪಾಸ್‌ವರ್ಡ್ ಮಾಹಿತಿಯನ್ನು ಕದಿಯುತ್ತಿರುವ  ಅಪಾಯಕಾರಿ ಅಪ್ಲಿಕೇಶನ್‌ಗಳನ್ನು ಡಾಕ್ಟರ್ ವೆಬ್ ಮಾಲ್‌ವೇರ್ ವಿಶ್ಲೇಷಕರು ಕಂಡುಹಿಡಿದಿದ್ದಾರೆ. ಈ ಪೈಕಿ 9 ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (Google Play Store) ಲಭ್ಯವಿದ್ದು ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆದಾರರು ತಮ್ಮ ಮೊಬೈಲ್ಗಳಲ್ಲಿ ಡೌನ್‌ಲೋಡ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಗೂಗಲ್ (Google) ಈ 9 ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ. ಅಂತಹ ಅಪಾಯಕಾರಿ ಅಪ್ಲಿಕೇಶನ್‌ಗಳು ಯಾವುವು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ...

ಪಿಐಪಿ ಫೋಟೋ  (PIP Photo) :
ಇದು ಇಮೇಜ್ ಎಡಿಟಿಂಗ್ ಅಪ್ಲಿಕೇಶನ್ ಆಗಿದೆ. ಇದನ್ನು ಲಿಲಿಯನ್ನರು ತಯಾರಿಸಿದ್ದಾರೆ. ಇದನ್ನು ಆಂಡ್ರಾಯ್ಡ್ (Android) ಸಾಧನದಿಂದ ಹಲವು ಬಾರಿ ಡೌನ್‌ಲೋಡ್ ಮಾಡಲಾಗಿದೆ.

ಪ್ರೊಸೆಸಿಂಗ್ ಫೋಟೋ (Processing Photo​) :
ಈ ಅಪ್ಲಿಕೇಶನ್ ಅನ್ನು ಲಕ್ಷಾಂತರ ಜನರು ಡೌನ್‌ಲೋಡ್ ಮಾಡಿದ್ದಾರೆ. ಈ ಅಪ್ಲಿಕೇಶನ್ ಅನ್ನು ಚಿಕುಂಬುರಾಹಮಿಲ್ಟನ್ (chikumburahamilton) ತಯಾರಿಸಿದ್ದಾರೆ.

ಇದನ್ನೂ ಓದಿ-  Data Leak: ನೀವೂ ಮೊಬೈಲ್ ಮೂಲಕ ಹಣ ಪಾವತಿಸುತೀರಾ! ಈ ಆಪ್ ನಿಂದ 35 ಲಕ್ಷ ಜನರ ದತಾಂಶ ಸೋರಿಕೆ

ಕಸದ ಕ್ಲೀನರ್ (Rubbish Cleaner) :
ಅಪ್ಲಿಕೇಶನ್ ಆಂಡ್ರಾಯ್ಡ್ ಸಾಧನದ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ. ಇದನ್ನು ಲಕ್ಷಾಂತರ ಜನರು ಡೌನ್‌ಲೋಡ್ ಮಾಡಿದ್ದಾರೆ. ಇದನ್ನು SNT.rbcl ಅಭಿವೃದ್ಧಿಪಡಿಸಿದೆ.

ದಿನ ಭವಿಷ್ಯ (Horoscope Daily):
ಈ ಅಪ್ಲಿಕೇಶನ್ ಅನ್ನು ಕೂಡ ಲಕ್ಷಾಂತರ ಬಾರಿ ಡೌನ್‌ಲೋಡ್ ಮಾಡಲಾಗಿದೆ. ಇದನ್ನು HscopeDaily momo ಅಭಿವೃದ್ಧಿಪಡಿಸಿದೆ. ಇದು ಜಾತಕ ತಿಳಿಸುವ ಅಪ್ಲಿಕೇಶನ್.

ಇನ್ವೆಲ್ ಫಿಟ್ನೆಸ್  (Inwell Fitness) :
ಇದು ಫಿಟ್‌ನೆಸ್ (Fitness) ಅಪ್ಲಿಕೇಶನ್ ಆಗಿದೆ. ಇದನ್ನು ಲಕ್ಷಾಂತರ ಆಂಡ್ರಾಯ್ಡ್ ಸಾಧನಗಳು ಡೌನ್‌ಲೋಡ್ ಮಾಡಿವೆ.

ಇದನ್ನೂ ಓದಿ-  Alert! ನೀವೂ ನಿಮ್ಮ ಸ್ಮಾರ್ಟ್ ಫೋನ್ ಗೆ Screen Guard ಬಳಸುತ್ತೀರಾ? ಈ ಸುದ್ದಿ ಓದಲು ಮರೆಯಬೇಡಿ

ಅಪ್ಲಿಕೇಶನ್ ಕೀಪ್ ಲಾಕ್ (App Keep Lock):
ಇದು ಇತರ ಸಾಧನದ ಹಕ್ಕುಗಳನ್ನು ಮಿತಿಗೊಳಿಸುತ್ತದೆ. ಇದನ್ನು ಶೆರಿಲಾವ್ ರೈನ್ಸ್ ನಿರ್ಮಿಸಿದ್ದಾರೆ.

ಲಾಕಿಟ್ ಮಾಸ್ಟರ್ (Lockit Master) :
ಈ ಅಪ್ಲಿಕೇಶನ್ ಅನ್ನು ಆಂಡ್ರಾಯ್ಡ್ ಸಾಧನಗಳು ಲಕ್ಷಾಂತರ ಬಾರಿ ಡೌನ್‌ಲೋಡ್ ಮಾಡಿವೆ. ಇದನ್ನು ಅನ್ನಾಲಿ ಮೈಕೊಲೊ ಅಭಿವೃದ್ಧಿಪಡಿಸಿದ್ದಾರೆ.

ಜಾತಕ ಪೈ  (Horoscope Pi) :
ಇತರ ಅಪ್ಲಿಕೇಶನ್‌ಗಳಿಗೆ ಹೋಲಿಸಿದರೆ ಈ ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್ ಮಾಡಿರುವವರ ಸಂಖ್ಯೆ ಕಡಿಮೆ. ಇದನ್ನು ಟ್ಯಾಲಿಯರ್ ಶೌನಾ ಅಭಿವೃದ್ಧಿಪಡಿಸಿದ್ದಾರೆ.

ಅಪ್ಲಿಕೇಶನ್ ಲಾಕ್ ಮ್ಯಾನೇಜರ್ (App Lock Manager)
ಈ ಅಪ್ಲಿಕೇಶನ್ ತುಂಬಾ ಕಡಿಮೆ ಜನಪ್ರಿಯವಾಗಿದೆ. ಇದನ್ನು ಇಂಪ್ಲುಮೆಟ್ ಕೋಲ್ ಅಭಿವೃದ್ಧಿಪಡಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News