COWIN ಡೇಟಾ ಸೋರಿಕೆ! ಕೋವಿಡ್-19 ಲಸಿಕೆ ಪಡೆದ ವ್ಯಕ್ತಿಗಳ ಆಧಾರ್, ವೋಟರ್ ಐಡಿ, ಪ್ಯಾನ್ ವಿವರಗಳು ಆನ್‌ಲೈನ್‌ನಲ್ಲಿ ಸೋರಿಕೆ

ಕೊವಿಡ್ ಲಸಿಕೆ ಪಡೆದ ಭಾರತೀಯರ ವೈಯಕ್ತಿಕ ವಿವರಗಳು ಸೋರಿಕೆಯಾಗಿವೆ. ಲಸಿಕೆ ಪಡೆದವರ ಮೊಬೈಲ್ ಸಂಖ್ಯೆಗಳು, ಆಧಾರ್ ಸಂಖ್ಯೆಗಳು, ಪಾಸ್‌ಪೋರ್ಟ್ ಸಂಖ್ಯೆಗಳು, ವೋಟರ್ ಐಡಿ, ಕುಟುಂಬ ಸದಸ್ಯರ ವಿವರಗಳು ಸೇರಿದಂತೆ ಎಲ್ಲಾ ಮಾಹಿತಿ ಸೋರಿಕೆಯಾಗಿದೆ ಎಂದು  ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆ ಅವರು ಟ್ವೀಟ್ ಮಾಡಿದ್ದಾರೆ. 

Written by - Ranjitha R K | Last Updated : Jun 12, 2023, 01:53 PM IST
  • ವೈಯಕ್ತಿಕ ಮಾಹಿತಿಯು ಆನ್‌ಲೈನ್‌ನಲ್ಲಿ ಸೋರಿಕೆ
  • ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆ ಆರೋಪ
  • ವೈಯಕ್ತಿಕ ವಿವರಗಳು ಆನ್‌ಲೈನ್‌ನಲ್ಲಿ ಲಭ್ಯ
COWIN ಡೇಟಾ ಸೋರಿಕೆ! ಕೋವಿಡ್-19 ಲಸಿಕೆ ಪಡೆದ ವ್ಯಕ್ತಿಗಳ ಆಧಾರ್, ವೋಟರ್ ಐಡಿ, ಪ್ಯಾನ್ ವಿವರಗಳು ಆನ್‌ಲೈನ್‌ನಲ್ಲಿ ಸೋರಿಕೆ title=

ನವದೆಹಲಿ : ಪ್ರಮುಖ ನಾಯಕರು ಮತ್ತು ಪತ್ರಕರ್ತರು ಸೇರಿದಂತೆ ಎಲ್ಲರ ವೈಯಕ್ತಿಕ ಮಾಹಿತಿಯು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆ ಆರೋಪಿಸಿದ್ದಾರೆ. ಮೊಬೈಲ್ ಸಂಖ್ಯೆಗಳು, ಆಧಾರ್ ಸಂಖ್ಯೆಗಳು, ಪಾಸ್‌ಪೋರ್ಟ್, ವೋಟರ್ ಐಡಿಗಳು ಮತ್ತು ಕುಟುಂಬದ ಸದಸ್ಯರ ವಿವರಗಳಂತಹ ವೈಯಕ್ತಿಕ ವಿವರಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ತನ್ನ ಹೇಳಿಕೆಯನ್ನು ಪುಷ್ಟೀಕರಿಸಲು ಅವರು ಟ್ವಿಟರ್‌ನಲ್ಲಿ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಸಹ ಹಂಚಿಕೊಂಡಿದ್ದಾರೆ. 

ಕೊವಿಡ್ ಲಸಿಕೆ ಪಡೆದ ಭಾರತೀಯರ ವೈಯಕ್ತಿಕ ವಿವರಗಳು ಸೋರಿಕೆಯಾಗಿವೆ. ಲಸಿಕೆ ಪಡೆದವರ ಮೊಬೈಲ್ ಸಂಖ್ಯೆಗಳು, ಆಧಾರ್ ಸಂಖ್ಯೆಗಳು, ಪಾಸ್‌ಪೋರ್ಟ್ ಸಂಖ್ಯೆಗಳು, ವೋಟರ್ ಐಡಿ, ಕುಟುಂಬ ಸದಸ್ಯರ ವಿವರಗಳು ಸೇರಿದಂತೆ ಎಲ್ಲಾ ಮಾಹಿತಿ ಸೋರಿಕೆಯಾಗಿದೆ ಎಂದು  ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆ ಅವರು ಟ್ವೀಟ್ ಮಾಡಿದ್ದಾರೆ. 

ಇದನ್ನೂ ಓದಿ : ಇದು ವಿಶ್ವದ ಅತಿ ದುಬಾರಿ ಮಾವು: ಕೆಜಿ ಬೆಲೆ ಬರೋಬ್ಬರಿ 2.70 ಲಕ್ಷ ರೂ! ಈ ಹಣ್ಣಿನ ವಿಶೇಷತೆ ಕೇಳಿದ್ರೆ ಹುಬ್ಬೇರುತ್ತೆ…

ಕೋವಿಡ್ -19 ಲಸಿಕೆ ಹಾಕಿಸಿಕೊಂಡ ಪ್ರತಿಯೊಬ್ಬ ಭಾರತೀಯನ ವೈಯಕ್ತಿಕ ವಿವರಗಳು ಇದೀಗ ಲೀಕ್ ಆಗಿದ್ದು, ಎಲ್ಲರಿಗೂ ಉಚಿತವಾಗಿ ಲಭ್ಯವಿದೆ ಎಂದು  ಗೋಖಲೆ ಪ್ರತಿಪಾದಿಸಿದ್ದಾರೆ. ಇದು  ರಾಷ್ಟ್ರೀಯ ಕಾಳಜಿಯ ವಿಷಯವಾಗಿದೆ ಎಂದುಅವರು ಹೇಳಿದ್ದಾರೆ.  

ವರದಿಗಳ ಪ್ರಕಾರ, CoWIN ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿದರೆ, ವ್ಯಾಕ್ಸಿನೇಷನ್ ಸಮಯದಲ್ಲಿ ಒದಗಿಸಲಾದ ಎಲ್ಲಾ ವಿವರಗಳನ್ನು ಟೆಲಿಗ್ರಾಮ್ ಬೋಟ್  ತೋರಿಸುತ್ತದೆ. ಲಿಂಗ, ಹುಟ್ಟಿದ ವರ್ಷ, ಲಸಿಕೆ ಕೇಂದ್ರದ ಹೆಸರು ಮತ್ತು ಡೋಸ್‌ಗಳ ಸಮೇತ ಮಾಹಿತಿ ನೀಡುತ್ತದೆ.  ಅಲ್ಲದೆ ಈಗ ಯಾರು ಬೇಕಾದರೂ ಭಾರತೀಯ ನಾಗರಿಕರ ಆಧಾರ್ ಕಾರ್ಡ್, ವೋಟರ್ ಐಡಿ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಗಳಿಗೆ ಟೆಲಿಗ್ರಾಮ್‌ನಲ್ಲಿ  ಅಕ್ಸೆಸ್ ಪಡೆಯಬಹುದು ಎಂದು ಆಪಾದಿಸಿದ್ದಾರೆ. 

ಇದನ್ನೂ ಓದಿ : Rain Alert: ಮಿತಿ ದಾಟಿದ ಸೈಕ್ಲೋನ್ ತೀವ್ರತೆ! ಈ ಭಾಗಗಳಲ್ಲಿ ಬಿರುಗಾಳಿ ಸಹಿತ ಮಳೆಯ ಎಚ್ಚರಿಕೆ-ಹೈ ಅಲರ್ಟ್ ಘೋಷಣೆ

ಗೋಖಲೆ ಅವರು ಹಂಚಿಕೊಂಡ ಸ್ಕ್ರೀನ್‌ಶಾಟ್‌ಗಳ ಪ್ರಕಾರ, ಹಿರಿಯ ನಾಯಕರಾದ ರಾಜ್ಯಸಭಾ ಸಂಸದ ಮತ್ತು ಟಿಎಂಸಿ ನಾಯಕ ಡೆರೆಕ್ ಒ'ಬ್ರೇನ್, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ, ಕಾಂಗ್ರೆಸ್ ಮುಖಂಡರಾದ ಜೈರಾಮ್ ರಮೇಶ್ ಮತ್ತು ಕೆಸಿ ವೇಣುಗೋಪಾಲ್ ಅವರ ಮಾಹಿತಿ ಸೋರಿಕೆಯಾಗಿದೆ. ಸೋರಿಕೆಯಾದ ಡೇಟಾವು ಆಧಾರ್ ಕಾರ್ಡ್ ಸಂಖ್ಯೆಗಳು, ಲಿಂಗ, ಜನ್ಮ ದಿನಾಂಕ ಮತ್ತು ಲಸಿಕೆ ಕೇಂದ್ರ ಮತ್ತು ಇತರ ವಿವರಗಳನ್ನು ಒಳಗೊಂಡಿದೆ. 

 

ಇದನ್ನೂ ಓದಿ : Karnataka ಕಾಂಗ್ರೆಸ್ ನ 5 'ಗ್ಯಾರಂಟಿ'ಗಳು ಇತರ ರಾಜ್ಯಗಳಿಗೂ ಅನ್ವಯಿಸಬಹುದೇ? ಸಾಧ್ಯತೆ ಕುರಿತು ಡಿಕೆಶಿ ಹೇಳಿದ್ದೇನು?

ಕೋವಿನ್ ಪೋರ್ಟಲ್ ಅನ್ನು ಹ್ಯಾಕ್ ಮಾಡಲಾಗಿದೆ ಎಂಬ ವರದಿಗಳು ಈ ಹಿಂದೆ ಕೂಡಾ ಕೇಳಿ ಬಂದಿತ್ತು. 15 ಕೋಟಿ ಜನರ ಡೇಟಾಬೇಸ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ವರದಿಗಳು ಹೇಳಿತ್ತು. ಆದರೆ  ಸೈಬರ್ ಭದ್ರತಾ ಸಂಶೋಧಕರು ಈ ವರದಿಯನ್ನು ನಿರಾಕರಿಸಿದ್ದಾರೆ.

ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಮತ್ತು ಜಾಗೃತಿ ಮೂಡಿಸುವ ಮತ್ತು ಅದರ ಲಸಿಕೆ ಕಾರ್ಯಕ್ರಮದ ವಿಷಯದಲ್ಲಿ ಸರ್ಕಾರವು ಡಿಜಿಟಲ್ ತಂತ್ರಜ್ಞಾನಗಳ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಕೋವಿಡ್-19 ಸಂಬಂಧಿತ ಸೇವೆಗಳು ಮತ್ತು ಮಾಹಿತಿಗಾಗಿ ಆರೋಗ್ಯ ಸೇತು ಅಪ್ಲಿಕೇಶನ್  ಬಳಕೆಯನ್ನು ಹಲವಾರು ಸರ್ಕಾರಿ ಇಲಾಖೆಗಳು ಕೂಡಾ  ಕಡ್ಡಾಯಗೊಳಿಸಿತ್ತು. 

ಇದನ್ನೂ ಓದಿ : ನಾಳೆಯಿಂದ ಅರ್ಧ ದಿನವಷ್ಟೇ ಶಾಲೆ..! ಸಮಯ ಮತ್ತು ವಿವರ ಇಲ್ಲಿದೆ ನೋಡಿ

 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

 

Trending News