ಬೆಂಗಳೂರಿನ ಹೊರವಲಯ ಆನೇಕಲ್ ನಲ್ಲಿ ಇಬ್ಬರು ಗಾಂಜಾ ಮಾರಾಟಗಾರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಆನೇಕಲ್ ಪಟ್ಟಣದ ವೀವರ್ಸ್ ಕಾಲೋನಿ ನಿವಾಸಿಗಳಾದ ಸೋಮಶೇಖರ್(27), ರಾಘವೇಂದ್ರ(25) ಎಂದು ಗುರುತಿಸಲಾಗಿದೆ.
ಹುಡುಗಿ ಹಿಂದೆ ಬಿದ್ದು ಅದೇ ಹುಡುಗಿ ನೀಡಿದ್ದ ದೂರಿನ ಮೇಲೆ ಜೈಲು ಸೇರಿ ಜಾಮೀನಿನ ಮೇಲೆ ಹೋರ ಬಂದ ಪಾಗಲ್ ಪ್ರೇಮಿಯೊಬ್ಬ ಮತ್ತೆ ಅವಳೇ ಬೇಕು ಅಂತಾ ಹಿಂದೆ ಬಿದ್ದಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಆದಿತ್ಯ ಮತ್ತು ಅಜಯ್ ಬಂಧಿತ ಆರೋಪಿಗಳು. ನೊಂದ ಯುವತಿಯರು ಹಾಗೂ ಆರೋಪಿ ಯುವಕರು ಉತ್ತರ ಭಾರತದ ಖಾಸಗಿ ಯೂನಿವರ್ಸಿಟಿಯಲ್ಲಿ ಸಹಪಾಠಿಗಳಾಗಿದ್ದರು. ಸದ್ಯ ಬೆಂಗಳೂರಿನ ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡಿದ್ದರು.
ಇಲ್ಲಿನ ಕುವೆಂಪುನಗರದ ಮನೆಯೊಂದಕ್ಕೆ ನುಗ್ಗಿದ್ದ ನಾಲ್ವರು ಕಳ್ಳರ ಗ್ಯಾಂಗ್, ಮನೆಯಲ್ಲಿದ್ದ ಸಿಸಿಟಿವಿಗಳನ್ನು ಮೊದಲು ತಿರುಗಿಸಿ 19 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಳವು ಮಾಡಿದ್ದರು. ನಂತರ ಅದನ್ನು ಜ್ಯೂವೆಲ್ಲರಿ ಶಾಪ್ವೊಂದಕ್ಕೆ ಮಾರಾಟ ಮಾಡಲು ಮುಂದಾಗಿದ್ದಾರೆ.
ರೂಮ್ ಕೊಡಿಸುವುದಾಗಿ ನಂಬಿಸಿ ಅಪರಿತನೊಂದಿಗೆ ಮೂರು-ನಾಲ್ಕು ದಿನಗಳ ಕಾಲ ವಾಸ್ತವ್ಯ ಹೂಡಿರುವಾಗ ತನ್ನ ಮೇಲೆ ಆತ್ಯಾಚಾರಕ್ಕೆ ಯತ್ನಿಸಿರುವುದಾಗಿ ಯುವತಿ ಆರೋಪದ ಹಿನ್ನೆಲೆ ತಮಿಳುನಾಡು ಮೂಲದ ಆರೋಪಿಯನ್ನು ಕಾಡುಗುಡಿ ಪೊಲೀಸರು ಬಂಧಿಸಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಕ್ರೈಂ ಮೀತಿ ಮೀರಿ ಹೋಗುತ್ತಿದೆ. ಮನೆ ಕೆಲಸಕ್ಕೆ ಸೇರಿಕೊಳ್ಳುವ ಹಲವರು ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದಾರೆ. ಅದರಲ್ಲೂ ಮನೆ ಕೆಲಸಕ್ಕೆ ಸೇರುವ ಹೊರ ರಾಜ್ಯದವರು ಮನೆಯನ್ನು ಗುಡಿಸಿ ಗುಂಡಾಂತರ ಮಾಡೋದು ಕಾಮನ್ ಆಗಿದೆ. ಹೀಗೆ ಮಾಜಿ ಗೃಹ ಸಚಿವ, ಹಾಲಿ ಶಾಸಕರ ಮನೆಯಲ್ಲಿ ಕಳ್ಳನೊಬ್ಬ ಕೈಚಳಕ ತೋರಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಲೈಟರ್ ವಾಪಸ್ ಕೊಡಲಿಲ್ಲ ಎಂದಿದ್ದಕ್ಕೆ ಲಾಂಗ್ ನ್ನೇ ಕೈಗೆತ್ತಿಕೊಂಡಿರುವ ಘಟನೆ ಬಸವೇಶ್ವರ ನಗರದಲ್ಲಿ ನಡೆದಿದೆ.ಜೂನ್ 5ರಂದು ಇಲ್ಲಿನ ನವ್ಯಾ ಬಾರ್ ಆ್ಯಂಡ್ ರೆಸ್ಟೋರೆಂಟಿನಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ
ಜನ ಯಾರಿಗೆ ಹೆದರುತ್ತಾರೋ ಇಲ್ಲವೋ ಗೊತ್ತಿಲ್ಲ. ನ್ಯಾಯಾಲಯಕ್ಕೆ ಪತರಗುಟ್ಟಿಹೋಗತ್ತಾರೆ.ಅಂಥದರಲ್ಲಿ ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿರೋ ಖತರ್ನಾಕ್ ಗ್ಯಾಂಗ್ ನ್ಯಾಯಾಂಗವನ್ನೇ ಯಾಮಾರಿಸೋ ಕೆಲಸವನ್ನು ಮಾಡಿದೆ.ಸಿಟಿ ಮಾರ್ಕೆಟ್ ಸರ್ಕಲ್ ನಲ್ಲಿ ಪೊಲೀಸರು ಏಪ್ರಿಲ್ 19 ರ ರಾತ್ರಿ ತಪಾಸಣೆ ಮಾಡುತ್ತಿದ್ದರು.ಈ ವೇಳೆ ಒರ್ವ ಪುರುಷ ಮತ್ತು ಮಹಿಳೆಯಿದ್ದ ಆಟೋ ತಪಾಸಣೆ ಮಾಡಿದ್ದಾರೆ.ಈ ವೇಳೆ ಆಟೋ ಚಾಲಕ ಇಳಿದು ಓಡಲು ಆರಂಭಿಸಿದ್ದಾನೆ.ಆಟೋಚಾಲಕನನ್ನು ಬೆನ್ನತ್ತಿದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಆಟೋ ಪರಿಶೀಲನೆ ನಡೆಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.