ಅಸಲಿ ಚಿನ್ನವನ್ನು ನಕಲಿ ಅದ್ಕೊಂಡು ಕಸದ ರಾಶಿಗೆ ಬಿಸಾಡಿದ್ದ ಕಳ್ಳರ ಬಂಧನ

ಇಲ್ಲಿನ ಕುವೆಂಪುನಗರದ ಮನೆಯೊಂದಕ್ಕೆ ನುಗ್ಗಿದ್ದ ನಾಲ್ವರು ಕಳ್ಳರ ಗ್ಯಾಂಗ್, ಮನೆಯಲ್ಲಿದ್ದ ಸಿಸಿಟಿವಿಗಳನ್ನು ಮೊದಲು ತಿರುಗಿಸಿ 19 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಳವು ಮಾಡಿದ್ದರು. ನಂತರ ಅದನ್ನು ಜ್ಯೂವೆಲ್ಲರಿ ಶಾಪ್‌ವೊಂದಕ್ಕೆ ಮಾರಾಟ ಮಾಡಲು ಮುಂದಾಗಿದ್ದಾರೆ.

Written by - VISHWANATH HARIHARA | Edited by - Manjunath N | Last Updated : Jan 7, 2023, 11:42 PM IST
  • ಕಳ್ಳರು ವಾಪಸ್‌ ಹೋದ ನಂತರ ಮಾಲೀಕ, ರಾಮಮೂರ್ತಿನಗರ ಪೊಲೀಸರಿಗೆ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಾನೆ
  • ತಕ್ಷಣ ಅಲರ್ಟ್ ಆದ ಪೊಲೀಸರು, ಕಸದಲ್ಲಿ ಬಿಸಾಕಿದ್ದ 19 ಲಕ್ಷ ರೂ. ಮೌಲ್ಯದ ಚಿನ್ನವನ್ನು ಹುಡುಕಿ ವಾಪಸ್‌ ತಂದಿದ್ದಾರೆ
  • ಈ ಸಂಬಂಧ ತನಿಖೆ ಮುಂದುವರಿಸಿದ್ದ ಖಾಕಿ ವೆಂಕಟೇಶ್, ಹರೀಶ್, ರಾಜೇಶ್ ಅಲಿಯಾಸ್ ಕ್ರ್ಯಾಕ್ ಹಾಗೂ ರಾಜ್ ಕಿರಣ್ ಎಂಬವರನ್ನು ಬಂಧಿಸಿದ್ದಾರೆ.
ಅಸಲಿ ಚಿನ್ನವನ್ನು ನಕಲಿ ಅದ್ಕೊಂಡು ಕಸದ ರಾಶಿಗೆ ಬಿಸಾಡಿದ್ದ ಕಳ್ಳರ ಬಂಧನ title=
screengrab

ಬೆಂಗಳೂರು: ಅಸಲಿ ಚಿನ್ನವನ್ನು ನಕಲಿ ಎಂದು ಕಸದ ರಾಶಿಗೆ ಬಿಸಾಕಿದ್ದ ಕಳ್ಳರನ್ನು ಬಂಧಿಸುವಲ್ಲಿ ರಾಮಮೂರ್ತಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಇಲ್ಲಿನ ಕುವೆಂಪುನಗರದ ಮನೆಯೊಂದಕ್ಕೆ ನುಗ್ಗಿದ್ದ ನಾಲ್ವರು ಕಳ್ಳರ ಗ್ಯಾಂಗ್, ಮನೆಯಲ್ಲಿದ್ದ ಸಿಸಿಟಿವಿಗಳನ್ನು ಮೊದಲು ತಿರುಗಿಸಿ 19 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಳವು ಮಾಡಿದ್ದರು. ನಂತರ ಅದನ್ನು ಜ್ಯೂವೆಲ್ಲರಿ ಶಾಪ್‌ವೊಂದಕ್ಕೆ ಮಾರಾಟ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ಸ್ಯಾಂಟ್ರೋ ರವಿಯಿಂದ ಬಿಜೆಪಿ ನಾಯಕರ ಚಾಟಿಂಗು, ಮೀಟಿಂಗು & ಡೇಟಿಂಗು ಎಲ್ಲವೂ ಬಯಲಾಗಿದೆ: ಕಾಂಗ್ರೆಸ್

ಚಿನ್ನವನ್ನು ನೋಡಿದ ಶಾಪ್‌ ಮಾಲೀಕನಿಗೆ ಇದು ಕಳವು ಮಾಡಿದ ಬಂಗಾರ ಎಂದು  ಗೊತ್ತಾಗಿದೆ. ತಕ್ಷಣ ಬುದ್ದಿವಂತಿಕೆಯಿಂದ ವರ್ತಿಸಿದ ಮಾಲೀಕ ಇದು ನಕಲಿ ಚಿನ್ನ ಎಂದಿದ್ದಾನೆ. ಇದರಿಂದ ಬೇಸರಗೊಂಡ ಕಳ್ಳರ ಗ್ಯಾಂಗ್, ಅಂಗಡಿಯಿಂದ ವಾಪಸು ಬರುವಾಗ ಕಂಡ ಕಸದ ರಾಶಿಗೆ ಚಿನ್ನವನ್ನು ಎಸೆದು ಬಿಸಾಡಿ ಹೋಗಿದ್ದಾರೆ.

ಇದನ್ನೂ ಓದಿ: ಕನ್ನಡದ ಕಣ್ಣಿಗೆ ಸುಣ್ಣ, ಬೇರೆ ಭಾಷೆಗಳಿಗೆ ಬೆಣ್ಣೆ, ಕನ್ನಡ ತಬ್ಬಲಿ ಮಕ್ಕಳ ಭಾಷೆಯೇ?: ಎಚ್‍ಡಿಕೆ

ಕಳ್ಳರು ವಾಪಸ್‌ ಹೋದ ನಂತರ ಮಾಲೀಕ, ರಾಮಮೂರ್ತಿನಗರ ಪೊಲೀಸರಿಗೆ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಾನೆ. ತಕ್ಷಣ ಅಲರ್ಟ್ ಆದ ಪೊಲೀಸರು, ಕಸದಲ್ಲಿ ಬಿಸಾಕಿದ್ದ 19 ಲಕ್ಷ ರೂ. ಮೌಲ್ಯದ ಚಿನ್ನವನ್ನು ಹುಡುಕಿ ವಾಪಸ್‌ ತಂದಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿಸಿದ್ದ ಖಾಕಿ ವೆಂಕಟೇಶ್, ಹರೀಶ್, ರಾಜೇಶ್ ಅಲಿಯಾಸ್ ಕ್ರ್ಯಾಕ್ ಹಾಗೂ ರಾಜ್ ಕಿರಣ್ ಎಂಬವರನ್ನು ಬಂಧಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News