ಅಪರಿಚಿತನೊಂದಿಗೆ ರೂಮ್‌ ಶೇರ್:ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನ ಬಂಧನ

ರೂಮ್ ಕೊಡಿಸುವುದಾಗಿ ನಂಬಿಸಿ ಅಪರಿತನೊಂದಿಗೆ ಮೂರು-ನಾಲ್ಕು ದಿನಗಳ ಕಾಲ ವಾಸ್ತವ್ಯ ಹೂಡಿರುವಾಗ ತನ್ನ ಮೇಲೆ‌ ಆತ್ಯಾಚಾರಕ್ಕೆ ಯತ್ನಿಸಿರುವುದಾಗಿ ಯುವತಿ  ಆರೋಪದ ಹಿನ್ನೆಲೆ ತಮಿಳುನಾಡು ಮೂಲದ ಆರೋಪಿಯನ್ನು ಕಾಡುಗುಡಿ ಪೊಲೀಸರು ಬಂಧಿಸಿದ್ದಾರೆ.

Written by - VISHWANATH HARIHARA | Edited by - Manjunath N | Last Updated : Dec 23, 2022, 06:12 PM IST
  • ಸಂತ್ರಸ್ತೆ ಪರಿಚಯವಾಗಿತ್ತು.
  • ಅಕ್ಷರಸ್ಥೆಯಾಗಿರುವ ಯುವತಿ ಕೆಲಸ ಸಲುವಾಗಿ ಬೆಂಗಳೂರಿಗೆ ಬಂದಿದ್ದಳು.
  • ಉಳಿದುಕೊಳ್ಳಲು ರೂಮ್ ಬೇಕೆಂದು ಆರೋಪಿ ಬಳಿ ಹೇಳಿಕೊಂಡಿದ್ದಳು.
ಅಪರಿಚಿತನೊಂದಿಗೆ ರೂಮ್‌ ಶೇರ್:ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನ ಬಂಧನ title=
file photo

ಬೆಂಗಳೂರು:‌ ರೂಮ್ ಕೊಡಿಸುವುದಾಗಿ ನಂಬಿಸಿ ಅಪರಿತನೊಂದಿಗೆ ಮೂರು-ನಾಲ್ಕು ದಿನಗಳ ಕಾಲ ವಾಸ್ತವ್ಯ ಹೂಡಿರುವಾಗ ತನ್ನ ಮೇಲೆ‌ ಆತ್ಯಾಚಾರಕ್ಕೆ ಯತ್ನಿಸಿರುವುದಾಗಿ ಯುವತಿ  ಆರೋಪದ ಹಿನ್ನೆಲೆ ತಮಿಳುನಾಡು ಮೂಲದ ಆರೋಪಿಯನ್ನು ಕಾಡುಗುಡಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಪ್ರಚಾರಕ್ಕೆ ಸ್ನೇಹಿತನ ಕಾರು ಪಡೆದು ವಾಪಸ್ ನೀಡೋಕೆ ನಲಪಾಡ್ ನಕ್ರ..!

ಗೋವರ್ಧನ್ ಶಿವರೆಡ್ಡಿ ಬಂಧಿತ ಆರೋಪಿ. ತಮಿಳುನಾಡು ಮೂಲದ ಆರೋಪಿಯು ಇದೇ ತಿಂಗಳು 16ರಂದು ಮೆಜೆಸ್ಟಿಕ್ ಬಸ್ ನಿಲ್ದಾಣ ಬಳಿ ಕೇರಳ ಮೂಲದ ಸಂತ್ರಸ್ತೆ ಪರಿಚಯವಾಗಿತ್ತು. ಅಕ್ಷರಸ್ಥೆಯಾಗಿರುವ ಯುವತಿ ಕೆಲಸ ಸಲುವಾಗಿ ಬೆಂಗಳೂರಿಗೆ ಬಂದಿದ್ದಳು. ಉಳಿದುಕೊಳ್ಳಲು ರೂಮ್ ಬೇಕೆಂದು ಆರೋಪಿ ಬಳಿ ಹೇಳಿಕೊಂಡಿದ್ದಳು. ತನಗೆ ಗೊತ್ತಿರುವ ಲಾಡ್ಜ್  ಇದೆ ಎಂದು ಹೇಳಿ ಕಾಡುಗುಡಿ ಬಳಿಯಿರುವ ಬಾಲಾಜಿ ಲಾಡ್ಜ್ ಕರೆದೊಯ್ದಿದ್ದಾನೆ‌.‌ ಮೂರು ನಾಲ್ಕು ದಿನಗಳ ಕಾಲ‌ ರೂಮ್ ನಲ್ಲಿ ಉಳಿದುಕೊಂಡಿದ್ದರು.‌ ಈ ಮಧ್ಯೆ ನನ್ನ‌‌ ಮೇಲೆ‌ ಆತ್ಯಾಚಾರಕ್ಕೆ‌ ಯತ್ನಿಸಿದ್ದಾನೆ ಎಂದು ಆರೋಪಿಸಿ ದೂರು ನೀಡಿದ‌ ಮೇರೆಗೆ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಬ್ಯಾಂಕ್, ಫೈನಾನ್ಸ್ ಕಂಪನಿ ಹೆಸರಲ್ಲಿ ಮೋಸ, ನಕಲಿ ಎನ್ಓಸಿ ಪಡೆದು ಕಾರು ಮಾರಾಟ : ಮೂವರ ವಂಚಕರ ಬಂಧನ

ಆರೋಪಿಯು ಗಾರೆ‌ ಕೆಲಸ ಮಾಡಿಕೊಂಡಿದ್ದು,ಈತನ ಸಂಬಂಧಿಕರು ಬೆಂಗಳೂರಿನಲ್ಲಿ‌ದ್ದಾರೆ. ಕೆಲ ವರ್ಷಗಳ ಹಿಂದೆ ಕಾಡುಗುಡಿ‌ ಸಮೀಪದ ವೈದೇಹಿ‌‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ‌. ಬಾಲಾಜಿ ಲಾಡ್ಜ್ ನಲ್ಲಿದ್ದ ವಾಸ್ತವ್ಯ ಹೂಡಿದ್ದ. ಪರಿಚಯ ಇದ್ದಿದ್ದರಿಂದ ಮೆಜೆಸ್ಟಿಕ್ ನಿಂದ ಕಾಡುಗುಡಿವರೆಗೂ ಯುವತಿಯನ್ನ ಕರೆತಂದಿದ್ದ ಎಂದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ‌.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾ

 

 

Trending News