ವಿಶ್ವಾದ್ಯಂತ ಕೊರೊನಾ ವೈರಸ್ ತನ್ನ ಪ್ರಕೋಪ ಮುಂದುವರೆಸಿದೆ. ಏತನ್ಮಧ್ಯೆ ರಷ್ಯಾ ಕೊರೊನಾ ವ್ಯಾಕ್ಸಿನ್ ಸ್ಪುಟ್ನಿಕ್ Vನ ಜಂಟಿ ಉತ್ಪಾದನೆಗಾಗಿ ಭಾರತದೊಂದಿಗೆ ಅಧಿಕೃತ ಸಂಪರ್ಕ ಸಾಧಿಸಿದೆ.
ಕರೋನಾ ಲಸಿಕೆಯಲ್ಲಿ ಚಿಪ್ ಇದೆ ಎಂದು ಮುಸ್ಲಿಂ ಮೌಲಾನಾ ಒಬ್ಬರು ಹೇಳಿಕೊಂಡಿದ್ದಾರೆ. ಈ ಕುರಿತಾಗಿ ಮೌಲಾನಾ ಹಂಚಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಲಸಿಕೆ ಈಗಾಗಲೇ ತನ್ನ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ ಪೂರ್ಣಗೊಳಿಸಿ ಮೂರನೇ ಹಂತಕ್ಕೆ ಪ್ರವೇಶಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR)ನ ಸಹಯೋಗದೊಂದಿಗೆ ಈ ಲಸಿಕೆಯನ್ನು ಅಭಿವೃದ್ಧಿಗೊಳಿಸಲಾಗಿದೆ.
ಸ್ವಾತಂತ್ರ್ಯದ 74 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪಿಎಂ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಕಮಾನುಗಳಿಂದ ಭಾರತವು ಶೀಘ್ರದಲ್ಲೇ ಕರೋನಾ ಲಸಿಕೆಯನ್ನು ಪ್ರಕಟಿಸಲಿದೆ ಎಂದು ಘೋಷಿಸಿದರು.
ಮದ್ದಿಲ್ಲದ ಮಹಾಮಾರಿ COVID-19ಗೆ ಭಾರತವೇ ಮೊದಲು ಲಸಿಕೆ ಕಂಡುಹಿಡಿಯುತ್ತದೆ, ಇದೇ ಆಗಸ್ಟ್ 15ರೊಳಗೆ ಎಲ್ಲಾ ರೀತಿಯ ಪ್ರಯೋಗಗಳನ್ನು ಮಾಡಿ ಮುಗಿಸಿಬಿಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು.
'ಲಸಿಕೆಯ ರಾಷ್ಟ್ರೀಯತೆ' ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಶ್ರೀಮಂತ ರಾಷ್ಟ್ರಗಳು ಲಸಿಕೆಯ ರಾಷ್ಟ್ರೀಯತೆಗೊಲಿಸುವಿಕೆಯನ್ನು ತಪ್ಪಿಸಬೇಕು ಎಂದು ಡಬ್ಲ್ಯುಎಚ್ಒ ಹೇಳಿದೆ.
ದೇಶದ 12 ಸಂಸ್ಥೆಗಳಲ್ಲಿ ಈ ಲಸಿಕೆಯ ಮಾನವ ಪ್ರಯೋಗಗಳು ಪ್ರಾರಂಭವಾದ ತಕ್ಷಣ ಸ್ಥಳೀಯ ಕರೋನಾ ಲಸಿಕೆ ಕುರಿತು ಉತ್ತಮ ಸುದ್ದಿ ಲಭ್ಯವಾಗಲಿದೆ. ಕರೋನಾ ಲಸಿಕೆಯ ಮಾನವ ಪ್ರಯೋಗಗಳು ದೆಹಲಿ ಏಮ್ಸ್ನಲ್ಲಿ ಇಂದಿನಿಂದ ನಡೆಯುತ್ತಿವೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ (ICMR) ಈಗಾಗಲೇ ಕೋವ್ಯಾಕ್ಸಿನ್ ಮಾನವ ಪ್ರಯೋಗ ನಡೆಸಲು ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ಹಾಗೂ ಜ್ಯುಡಸ್ ಕಾಡಿಯಾ ಹೆಲ್ತ್ ಕೇರ್ ಲಿಮಿಟೆಡ್ ಗಳಿಗೆ ಅನುಮತಿ ನೀಡಿತ್ತು.
ಇಂದಿನಿಂದ ದೇಶಾದ್ಯಂತ ಹಲವು ಸಂಸ್ಥೆಗಳಲ್ಲಿ ದೇಶದ ಮೊಟ್ಟಮೊದಲ ಕೊರೊನಾ ವೈರಸ್ ಲಸಿಕೆಯಾಗಿರುವ Covaxin ನ ಮಾನವ ಪರೀಕ್ಷೆ ಆರಂಭಗೊಂಡಿದೆ. ಆದರೆ, ದೆಹಲಿಯ AIIMS ಮಾನವ ಪರೀಕ್ಷೆಯ ಪ್ರೋಟೋಕಾಲ್ ಗಳನ್ನು ಬದಲಾಯಿಸುವಂತೆ ಹೇಳಿದೆ.
ಮನುಷ್ಯರ ಮೇಲೆ ನಡೆಸಲಾಗುವ ಕ್ಲಿನಿಕಲ್ ಟ್ರೈಲ್ ವೇಳೆ ಈ ಲಸಿಕೆಯನ್ನು ಸುಮಾರು 1045 ರೋಗಿಗಳ ಮೇಲೆ ಟೆಸ್ಟ್ ನಡೆಸಿ ಅಧ್ಯಯನ ನಡೆಸಲಾಗುವುದು. ಇವರಲ್ಲಿ 18-55 ವರ್ಷ ವಯಸ್ಸಿನ ವ್ಯಕ್ತಿಗಳು ಶಾಮೀಲಾಗಿರಲಿದ್ದಾರೆ.
ಮುಂದಿನ ಒಂದು ವರ್ಷದೊಳಗೆ ಕೊರೊನಾ ವೈರಸ್ ಗೆ ಲಸಿಕೆ ಸಿದ್ಧವಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. ಇದಕ್ಕಾಗಿ 2 ರಿಂದ 3 ಬಿಲಿಯನ್ ಡಾಲರ್ ವೆಚ್ಚವಾಗಬಹುದು ಎಂದು ಸಚಿವಾಲಯ ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.