ನವದೆಹಲಿ: ಕರೋನಾ ಲಸಿಕೆಗಾಗಿ ವಿಶ್ವಾದ್ಯಂತ ಜನರು ಕುತೂಹಲದಿಂದ ಕಾಯುತ್ತಿದ್ದಾರೆ. ಕರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಲಸಿಕೆ ಪರಿಣಾಮಕಾರಿ ಮಾರ್ಗವಾಗಿದೆ. ಅನೇಕ ದೇಶಗಳು ಲಸಿಕೆ ತಯಾರಿಕಾ ಕಾರ್ಯದಲ್ಲಿ ಈಗಾಗಲೇ ನಿರತರಾಗಿದ್ದಾರೆ. ಕೆಲವರು ಇದನ್ನು ಈಗಾಗಲೇ ತಯಾರಿಸಿರುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ಭಾರತದಲ್ಲಿಯೂ ಕೂಡ ಕರೋನಾ ಲಸಿಕೆ ತಯಾರಿಸಲಾಗುವುದು ಎಂದು ನಿರೀಕ್ಷಿಸಲಾಗುತ್ತಿದೆ.
ಮತ್ತೊಂದೆಡೆ, ಲಸಿಕೆ ಮೊದಲೇ ಲಸಿಕೆಯ ಕುರಿತು ವದಂತಿಗಳು ಕೇಳಿಬರಲಾರಂಭಿಸಿವೆ. ಹೌದು, ಕರೋನಾ ಲಸಿಕೆಯಲ್ಲಿ ಚಿಪ್ ಅಳವಡಿಸಲಾಗಿದೆ ಎಂದು ಮೌಲಾನಾ ಒಬ್ಬರು ಹೇಳಿಕೊಂಡಿದ್ದಾರೆ. ಈ ಕುರಿತಾಗಿ ಮೌಲಾನಾ ಹಂಚಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಮುಸ್ಲಿಂ ಧರ್ಮಗುರುಗಳಿಂದ ಕ್ರಮಕ್ಕೆ ಆಗ್ರಹ
ಅತ್ತ ಇನ್ನೊಂದೆಡೆ ಮೌಲಾನಾ ಮಂಡಿಸಿರುವ ವಾದ ಆಧಾರ ರಹಿತವಾಗಿದೆ ಎಂದು ಹೇಳಿರುವ ಮುಸ್ಲಿಂ ಧರ್ಮಗುರುಗಳು ಮೌಲಾನಾ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಮುಸ್ಲಿಂ ಧರ್ಮಗುರು ಹಾಗೂ ಜಾಮಿಯತ್ ದಾವತುಲ್ ಮುಸ್ಲಿಮೀನ್ ಸಂಘಟನೆಯ ಸಂರಕ್ಷಕ ಕಾರಿ ಇಸಾಹಕ್ ಗೋರಾ ಮೌಲಾನಾ ಹೇಳಿಕೆಯನ್ನು ಕಟುವಾಗಿ ನಿಂದಿಸಿದ್ದಾರೆ. ಇಂತಹ ವಿಡಿಯೋಗಳನ್ನು ತಯಾರಿಸಿ ಅವುಗಳನ್ನು ವೈರಲ್ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಕಾರಿ ಇಸಹಾಕ್ ಗೋರಾ, "ಕೊರೊನಾ ವ್ಯಾಕ್ಸಿನ್ ಕುರಿತು ಭ್ರಮೆ ಹುಟ್ಟಿಸುವ ತಯಾರಿಸಿ ಅವುಗಳನ್ನು ವೈರಲ್ ಮಾಡುವವರನ್ನು ನಾನು ನಿಂದಿಸುತ್ತೇನೆ. ಯಾವುದೇ ಸಂಗತಿಗಳ ಕುರಿತು ಮಾಹಿತಿ ಇರದ ಕೆಲವರು ಈ ರೀತಿಯ ವಿಡಿಯೋಗಳನ್ನು ತಯಾರಿಸಿ ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಸುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು" ಎಂದಿದ್ದಾರೆ.