ಕ್ಷೇತ್ರದ ಹಣೆಬರಹವೂ ಇರುತ್ತದೆ. ಇವರಿಂದ ಕ್ಷೇತ್ರದ ಪುಣ್ಯ ಹೆಚ್ಚಾಗಿದೆ ಎಂದು ಭಾವಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿರಬಹುದು. ಜನರ ತೀರ್ಪನ್ನು ನಾವು ತಲೆಬಾಗಿ ಸ್ವೀಕರಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ್ ಹೇಳಿದರು.
ಪ್ರಧಾನಿ ಮೋದಿ ವಿಷದ ಹಾವು ಎಂಬ ಖರ್ಗೆ ಹೇಳಿಕೆ ವಿಚಾರ. ಮಲ್ಲಿಕಾರ್ಜುನ ಖರ್ಗೆ ಅವರು ಬೇಷರತ್ ಕ್ಷಮೆ ಕೇಳಬೇಕು. ಇಂತಹ ಹೇಳಿಕೆಗಳು ಕಾಂಗ್ರೆಸ್ ಮುಖಂಡರಿಗೆ ಶೋಭೆ ತರೋದಿಲ್ಲ ಎಂದು ಗದಗ ಜಿಲ್ಲೆಯ ನರಗುಂದದಲ್ಲಿ ಸಚಿವ ಸಿ.ಸಿ.ಪಾಟೀಲ್ ಆಕ್ರೋಶ ಹೊರಹಾಕಿದ್ರು.
Karnataka Assembly Election 2023: ಮೇ 10ರಂದು ಯಾರ ಡ್ಯಾಂ ಲೇವಲ್ ಎಷ್ಟಿದೆ ಅಂತಾ ಗೊತ್ತಾಗುತ್ತೆ. ಪ್ರತಿದಿನ ಡ್ಯಾಂ ಲೇವಲ್ ಗೇಜ್ ಮಾಡ್ತಿರ್ತೇವೆ. ಅದೇ ರೀತಿ ಮೇ 10ರಂದು ಲಿಂಗಾಯತ ಮತಗಳು ಹರಿದುಬಂದು ಬಿಜೆಪಿ ತುಂಬಿ ತುಳಕುತ್ತದೆ ಎಂದು ಸಿಸಿ ಪಾಟೀಲ್ ಹೇಳಿದ್ದಾರೆ.
ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಗಳು 24 ಗಂಟೆಗಳ ಗಡುವು ನೀಡಿರುವುದಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿಂದು ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್, ಹಿಂದುಳಿದ ಉಪಜಾತಿಗೆ ಅನ್ಯಾಯ ಆಗದಂತೆ ನೋಡಬೇಕು ಎಂಬುವುದು ಸಿಎಂಗೆ ಇರುವ ಅಭಿಪ್ರಾಯ.
ಭಾರತ ವಿಭಜಿಸುವ ಶಕ್ತಿಗಳನ್ನು ಒಗ್ಗೂಡಿಸುವ ಮನಸ್ಥಿತಿ ಇವರದ್ದು, ಇಂತಹ ಶಕ್ತಿಗಳನ್ನು ಒಗ್ಗೂಡಿಸುವ ಕೆಲಸವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದು ಸಿಸಿ ಪಾಟೀಲ್ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಥ ಪುಣ್ಯಾತ್ಮನಿಗೆ ರಾಜ್ಯದ ಇಬ್ಬರು ದೀಮಂತ ನಾಯಕರು ಸಾಥ್ ನೀಡಿದ್ದಾರೆ ಎಂದು ಗದಗದಲ್ಲಿ ಸಿಸಿ ಪಾಟೀಲ್ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂಥ ಯಾತ್ರೆಗಳಿಂದ ಬಿಜೆಪಿಗೆ ಏನೂ ಆಗಲ್ಲ...
ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹಾಗೂ ಸಚಿವ ಸಿಸಿ ಪಾಟೀಲ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಲಕ್ಷ್ಮಣ್ ಸವದಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಇನ್ನು ಇದೇ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಕಣ್ಣೀರಿಟ್ಟಿದ್ದು ಏಕೆ ಗೊತ್ತಾ..!
ಮಾತ್ನಾಡುವ ಬರದಲ್ಲಿ ಸ್ಲಿಪ್ ಆಫ್ ಟಂಗ್ ಆಗುತ್ತೆ.. ಆದ್ರೆ ಅದಕ್ಕೊಂದು ಇತಿ ಮಿತಿ ಇರ್ಬೇಕು. ಇವತ್ತು ಸರ್ಕಾರಿ ನೌಕರಿಯಲ್ಲಿರುವ ಹೆಣ್ಣು ಮಗಳು ಬಗ್ಗೆ ಹಗುರವಾಗಿ ಮಾತ್ನಾಡೋದು ಎಷ್ಟು ಸರಿ ಎಂದು ಸಚಿವ ಸಿಸಿ ಪಾಟೀಲ್ ಅವರು ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಡಿಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಸಚಿವ ಸಿ.ಸಿ.ಪಾಟೀಲ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಮಾತುಕತೆ ನಡೆಸಿದ್ದು, ಯಶಸ್ವಿಯಾಗಿದೆ.
ಸಿಸಿ ಪಾಟೀಲ್ ಕಚೇರಿ ಎದುರು ಶ್ರೀರಾಮ ಸೇನೆ ಸಂಘಟನೆ ಪ್ರತಿಭಟನೆಗೆ ನಿರ್ಧರಿಸಿದ್ದರು. ಆದ್ರೆ ಪೊಲೀಸ್ ಇಲಾಖೆ ಅವಕಾಶ ಕೊಡದಿದ್ದಕ್ಕೆ ಎಸಿ ಕಚೇರಿ ಎದುರು ಭಜನೆ ಭಕ್ತಿಗೀತೆ ಹಾಡುವುದರ ಮೂಲಕ ಪ್ರತಿಭಟನೆ ನಡೆಸಿ ಸಚಿವ ಸಿಸಿ ಪಾಟೀಲ್ ಮತ್ತು ರಾಜ್ಯ ಸರಕಾರದ ವಿರುದ್ಧ ಪ್ರತಿಭಟಿಸಿ ಮಸೀದಿಗಳಲ್ಲಿನ ಮೈಕ್ಗಳನ್ನ ತೆರುವುಗೊಳಿಸುವಂತೆ ಒತ್ತಾಯಿಸಿದರು.
ವಿಧಾನಸೌಧದಲ್ಲಿ ಅಧಿವೇಶನ ನಡೆದಾಗ ಮೊಬೈಲ್ ನಲ್ಲಿ ಏನ್ ನೋಡಿದ್ರಿ ಅನ್ನೋದನ್ನ ಇಡೀ ಜಗತ್ತಿಗೆ ಗೊತ್ತಿದೆ. ಯಾವ ನೈತಿಕೆಯ ಹಿನ್ನೆಲೆಯಲ್ಲಿ ನೀವು ರಾಜೀನಾಮೆ ಕೊಟ್ರಿ ಅನ್ನೋದನ್ನ ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಸಿಸಿ ಪಾಟೀಲ್ ಗೆ ಟಾಂಗ್ ನೀಡಿದರು.
ಗದಗಿನ ಡಾ. ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿ ಹುಟ್ಟಿದ ದಿನವನ್ನು ಭಾವೈಕ್ಯದ ದಿನ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿರುವುದಕ್ಕೆ ದಿಂಗಾಲೇಶ್ವರ ಸ್ವಾಮೀಜಿ ವಿರೋಧ ಮಾಡಿದ್ದಾರೆ. ತೋಂಟದಾರ್ಯ ಮಠದ ಮೇಲೆ ಜನರಿಗೆ ಇರುವ ಪೂಜ್ಯ ಭಾವನೆ ಗದಗದ ಶಿರಹಟ್ಟಿ ಮಠದ ಮೇಲೂ ಇದೆ. ಅದೂ ಭಾವೈಕ್ಯತೆಗೆ ಹೆಸರಾದ ಮಠ.
ಪಂಜಾಬಿನಲ್ಲಿ ಕಾಂಗ್ರೆಸ್ ಪಕ್ಷವನ್ನು ನವಜೋತ್ ಸಿಂಗ್ ಸಿಧು ಹಾಳು ಮಾಡಿದಂತೆ ಕರ್ನಾಟಕದಲ್ಲಿನ ಕಾಂಗ್ರೆಸ್ ಪಕ್ಷವನ್ನು ಸಿದ್ಧರಾಮಯ್ಯನವರು ಹಾಳು ಮಾಡುತ್ತಾರೆ ಎಂದು ಸಚಿವ ಸಿ.ಸಿ.ಪಾಟೀಲ್ (CC Patil) ವ್ಯಂಗ್ಯವಾಡಿದ್ದಾರೆ.
ಶಿಕ್ಷಕರು ಹಾಗೂ ಶಿಕ್ಷಣರಂಗದ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಮುಕ್ತ ಮನಸ್ಸು ಹೊಂದಿದೆ.ಕೋವಿಡ್ ಕಾರಣದಿಂದ ಶಿಕ್ಷಣ ಕೇತ್ರದ ಮೇಲೆ ಉಂಟಾಗಿರುವ ಪರಿಣಾಮಗಳಿಂದ ಶಿಕ್ಷಕರೂ ಕೂಡ ಪರಿತಪಿಸುವಂತಾಗಿರುವುದು ಸರ್ಕಾರದ ಗಮನದಲ್ಲಿದೆ, ಮುಂಬರುವ ಮೂರು ತಿಂಗಳ ಅವಧಿಯಲ್ಲಿ ಈ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಶಿಕ್ಷಕರ ಸಂಘಟನೆಗಳು ನಡೆಸುತ್ತಿರುವ ಹೋರಾಟ ಕೈಬಿಡಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವರಾದ ಸಿ.ಸಿ.ಪಾಟೀಲ ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.