Karnataka election 2023: 10 ಡಿಕೆಶಿ ಬಂದ್ರೂ ಲಿಂಗಾಯತರ ಡ್ಯಾಂ ಒಡೆಯಲ್ಲ- ಸಿಸಿ ಪಾಟೀಲ್

Karnataka Assembly Election 2023: ಮೇ 10ರಂದು ಯಾರ ಡ್ಯಾಂ ಲೇವಲ್ ಎಷ್ಟಿದೆ ಅಂತಾ ಗೊತ್ತಾಗುತ್ತೆ. ಪ್ರತಿದಿನ  ಡ್ಯಾಂ ಲೇವಲ್ ಗೇಜ್ ಮಾಡ್ತಿರ್ತೇವೆ. ಅದೇ ರೀತಿ ಮೇ 10ರಂದು ಲಿಂಗಾಯತ ಮತಗಳು ಹರಿದುಬಂದು ಬಿಜೆಪಿ ತುಂಬಿ ತುಳಕುತ್ತದೆ ಎಂದು ಸಿಸಿ ಪಾಟೀಲ್ ಹೇಳಿದ್ದಾರೆ.

Written by - Puttaraj K Alur | Last Updated : Apr 22, 2023, 03:40 PM IST
  • ಮೇ 10ರಂದು ಯಾರ ಡ್ಯಾಂ ಲೇವಲ್ ಎಷ್ಟಿದೆ ಅಂತಾ ಗೊತ್ತಾಗುತ್ತೆ
  • ಮೇ 10ರಂದು ಲಿಂಗಾಯತ ಮತಗಳು ಹರಿದುಬಂದು ಬಿಜೆಪಿ ಡ್ಯಾಂ ತುಂಬಿ ತುಳಕುತ್ತದೆ
  • ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಚಿವ ಸಿಸಿ ಪಾಟೀಲ್ ತಿರುಗೇಟು ನೀಡಿದ್ದಾರೆ
Karnataka election 2023: 10 ಡಿಕೆಶಿ ಬಂದ್ರೂ ಲಿಂಗಾಯತರ ಡ್ಯಾಂ ಒಡೆಯಲ್ಲ- ಸಿಸಿ ಪಾಟೀಲ್ title=
ಡಿಕೆಶಿಗೆ ಸಿಸಿ ಪಾಟೀಲ್ ತಿರುಗೇಟು

ಗದಗ: 10 ಮಂದಿ ಡಿ.ಕೆ.ಶಿವಕುಮಾರ್ ಬಂದರೂ ಲಿಂಗಾಯತರ ಡ್ಯಾಂ ಒಡೆಯಲು ಸಾಧ್ಯವಿಲ್ಲವೆಂದು ಸಚಿವ ಸಿಸಿ ಪಾಟೀಲ್ ಹೇಳಿದ್ದಾರೆ. ಲಿಂಗಾಯತರ ಡ್ಯಾಂ ಒಡೆದಿದೆ ಡಿಕೆಶಿ ಹೇಳಿಕೆಗೆ ಅವರು ತಿರುಗೇಟು ನಿಡಿದ್ದಾರೆ. ಗದಗನಲ್ಲಿ ಮಾತನಾಡಿರುವ ಸಚಿವ ಸಿಸಿ ಪಾಟೀಲ್ ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಕುಸಿಯುತ್ತಿದೆ. ಹೀಗಾಗಿ ಡಿಕೆಶಿಯವರು ಬಿಜೆಪಿಯ ಪಾರಂಪರಿಕ ಮತದಾರರನ್ನು ಬಿಜೆಪಿಗೆ ಬೆಂಬಲವಾಗಿರೋ ಲಿಂಗಾಯತ ಸಮಾಜದ ಬಗ್ಗೆ ಮಾತನಾಡಿದ್ದಾರೆ. ಲಿಂಗಾಯತ ಡ್ಯಾಂ ಒಡೆದು ಹರಿದು ಕಾಂಗ್ರೆಸ್ ಪಕ್ಷ ಸೇರಿದೆ ಎಂಬ ಮಾತನ್ನಾಡಿದ್ದಾರೆ. ಡಿಕೆಶಿ ಇಷ್ಟು ಅನನುಭವಿ ಇದ್ದಾರೆ ಅಂತಾ ಗೊತ್ತಿರಲಿಲ್ಲ. ಲಿಂಗಾಯತ ಮತಗಳು ಬಿಜೆಪಿ ಎಂಬ ಕಮಲ ಚಿಹ್ನೆಯಡಿ ಸುಭದ್ರವಾಗಿವೆ. ಲಿಂಗಾಯತರ ನಿಷ್ಠೆ, ಲಿಂಗಾಯತ ಸಮಾಜದ ಬೆಂಬಲ ಯಾವತ್ತೂ ಬಿಜೆಪಿಗೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Karnataka Election Photos : ಫೋಟೋ ಶೂಟ್‌ನಲ್ಲಿ ಮಿಂಚಿದ ಸಿದ್ದರಾಮಯ್ಯ-ಡಿಕೆಶಿ..! ʼಜೋಡೆತ್ತುʼ ಎಂದ ಪ್ಯಾನ್ಸ್‌

ಮೇ 10ರಂದು ಯಾರ ಡ್ಯಾಂ ಲೇವಲ್ ಎಷ್ಟಿದೆ ಅಂತಾ ಗೊತ್ತಾಗುತ್ತೆ. ಪ್ರತಿದಿನ  ಡ್ಯಾಂ ಲೇವಲ್ ಗೇಜ್ ಮಾಡ್ತಿರ್ತೇವೆ. ಅದೇ ರೀತಿ ಮೇ 10ರಂದು ಲಿಂಗಾಯತ ಮತಗಳು ಹರಿದುಬಂದು ಬಿಜೆಪಿ ಡ್ಯಾಂ ತುಂಬಿ ತುಳಕುತ್ತದೆ. 13ನೇ ತಾರೀಖಿಗೆ ಗೇಜ್ ಅಳೆಯುವಾಗ ನಿಮ್ಮ ಡ್ಯಾಂ ಖಾಲಿ ಇರುತ್ತೆ, ಬಿಜೆಪಿ ಡ್ಯಾಂ ತುಂಬಿ ತುಳುಕುತ್ತಿರುತ್ತೆ. ಯಾರೋ ಒಬ್ಬರು ಜಗದೀಶ್ ಶೆಟ್ಟರ್ ಹೋಗಿದ್ದಕ್ಕೆ, ಅವರನ್ನು ಸ್ಟಾರ್ ಕ್ಯಾಂಪೇನ್ ಮಾಡ್ತೇವಿ, ಅವರು ನಮ್ಮ ನಾಯಕರು ಅಂತಿದ್ದಾರೆ. ಬಿಜೆಪಿ ನಾಯಕನೊಬ್ಬ ನಿಮ್ಮ ಪಕ್ಷಕ್ಕೆ ಬಂದಿದ್ದರಿಂದ ಶಕ್ತಿ ಬರುತ್ತೆ ಎಂದು ಅಂದುಕೊಂಡ್ರೆ ನೀವು ಎಷ್ಟೊಂದು ಅಶಕ್ತರಿದ್ದೀರಿ’ ಎಂದು ಸಿಸಿ ಪಾಟೀಲ್ ಟೀಕಿಸಿದ್ದಾರೆ.

ಲಿಂಗಾಯತರ ಬಗ್ಗೆ ನಿಮಗಿರುವುದು ಮೊಸಳೆ ಕಣ್ಣೀರು. ವೀರೇಂದ್ರ ಪಾಟೀಲ್ ಒಬ್ಬರನ್ನು ಮಾತ್ರ ಸಿಎಂ ಮಾಡಿದ್ರಿ. ಅವರನ್ನು ನಡೆಸಿಕೊಂಡ ಕಹಿ ಘಟನೆ ನೆನಪಿದ್ರೆ ಸಾಕು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದಿಲ್ಲ. ಒಂದು ವೇಳೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ್ರೆ ಲಿಂಗಾಯತರನ್ನು ಸಿಎಂ ಮಾಡ್ತೇವೆ ಎಂಬ ಧೈರ್ಯ ಇದ್ರೆ ಹೇಳಿ. 2018ರಲ್ಲಿ ಸಿದ್ದರಾಮಯ್ಯರ ಅವಧಿಯಲ್ಲಿ ಲಿಂಗಾಯತ ಧರ್ಮ ಒಡೆಯಲು ಹೋಗಿ ಕೈಸುಟ್ಟಕೊಂಡಿದ್ದೀರಿ. ಅಂದು ಮುಂಗೈವರೆಗೂ ಸುಟ್ಟಕೊಂಡಿದ್ದಿರಿ, ಆದ್ರೆ ಇನ್ನೂ ಮುಂದುವರೆದ್ರೆ ಮೊನಕೈವರೆಗೆ ಕೈ ಸುಟ್ಟುಕೊಳ್ತೀರಿ ಎಂದು ಸಿಸಿ ಪಾಟೀಲ್ ಟೀಕಿಸಿದ್ದಾರೆ.

ಇದನ್ನೂ ಓದಿMP Kumaraswamy: 51 ಮಾಧ್ಯಮಗಳ ವಿರುದ್ದ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೋರೆ ಹೋದ ಎಂಪಿ ಕುಮಾರಸ್ವಾಮಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಲಸಂಗಮಕ್ಕೆ ಆಗಮನದ ಬಗ್ಗೆ ಪ್ರತಿಕ್ರಿಯಿಸಿರುವ ಸಿಸಿ ಪಾಟೀಲ್, ‘ಬಿಜಾಪುರ ಮತ್ತು ಬಾಗಲಕೋಟೆಗೆ ಅವರು ಕಾಲಿಟ್ಟು ಹೋದರೆ ಅಲ್ಲಿ ಬಿಜೆಪಿ ಗೆಲ್ಲುತ್ತದೆ’ ಎಂದು ಹೇಳಿದ್ದಾರೆ. ಸಿಎಂ ವಿರುದ್ಧ ರಾಮಣ್ಣ ಲಮಾಣಿ ಆಕ್ರೋಶ ವಿಚಾರವಾಗಿ ಮಾತನಾಡಿದ ಅವರು, ‘ಟಿಕೆಟ್ ಸಿಗದಿದ್ದಕ್ಕೆ ಅವರಿಗೆ ನೋವಾಗಿದೆ. ಹೀಗಾಗಿ ಸಿಎಂ ವಿರುದ್ಧ ಹಾಗೆ ಮಾತನಾಡಿದ್ದಾರೆ. ಅವರ ಮಾತಿನ ಮೇಲೆ ಹಿಡಿತವಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಸಿದ್ದಣ್ಣ ಬಂಡಿ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, ‘ಅವರಿಗೆ ನಾನು ಬಹಳ ಸಾರಿ ಕಾಲ್ ಮಾಡಿದ್ದೆ, ಆದರೆ ಅವರು ನನ್ನ ಮಾತಿಗೆ ಬೆಲೆ ಕೊಟ್ಟಿಲ್ಲ’ವೆಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News