ಮಗಳು ದುವಾ ಜೊತೆ ಮೊದಲ ಕ್ರಿಸ್ಮಸ್ ಆಚರಣೆ: ಫೋಟೋ ಶೇರ್ ಮಾಡಿದ ದೀಪಿಕಾ ಪಡುಕೋಣೆ!

Deepika Padukone Ranveer Singh Dua Christmas: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಈಗ ಪುತ್ರಿ ದುವಾಳ ಲಾಲನೆ-ಪಾಲನೆಯಲ್ಲಿ ಬ್ಯುಸಿ. ಮಗಳ ಬೆಳವಣಿಗೆಯ ಪ್ರತಿಕ್ಷಣವನ್ನು ಆನಂದಿಸುತ್ತಿರುವ ದೀಪಿಕಾ ದುವಾಳ ಮೊದಲ ಕ್ರಿಸ್ಮಸ್ ಹಬ್ಬದ ಫೋಟೋ ಮತ್ತು ಸಂಭ್ರಮವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

Written by - Yashaswini V | Last Updated : Dec 26, 2024, 12:17 PM IST
  • ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಈಗ ಮಗಳು ದುವಾ ದಾಟುವ ಪ್ರತಿ ಹಂತವನ್ನು ಸಂಭ್ರಮಿಸುತ್ತಿದ್ದಾರೆ.
  • ಮೊದಲ ಮೂರೂ ತಿಂಗಳವರೆಗೆ ಹೊರಜಗತ್ತಿಗೆ ಮಗಳ ಫೋಟೊವನ್ನು ತೋರಿಸಿರಲಿಲ್ಲ. ನಂತರ ಪುಟ್ಟ ಪಾದಗಳನ್ನು ಅದಾದ ಮೇಲೆ ಪುಟಾಣಿ ಕೈಗಳನ್ನು ತೋರಿಸಿದ್ದರು.
  • ಇದೀಗ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದೀಪಿಕಾ, ರಣವೀರ್ ಮತ್ತು ದುವಾ ಎಂಬ ಹೆಸರುಗಳನ್ನೊಂದಿರುವ ಕ್ರಿಸ್ಮಸ್ ಅಲಂಕಾರದ ಫೋಟೋ ಶೇರ್ ಮಾಡಿದ್ದಾರೆ.
ಮಗಳು ದುವಾ ಜೊತೆ ಮೊದಲ ಕ್ರಿಸ್ಮಸ್  ಆಚರಣೆ: ಫೋಟೋ ಶೇರ್ ಮಾಡಿದ ದೀಪಿಕಾ ಪಡುಕೋಣೆ! title=

Deepika Padukone Ranveer Singh Dua Christmas: ಮೋಹಕ ಮೈಮಾಟದಿಂದ ಮಾಡೆಲಿಂಗ್ ಕ್ಷೇತ್ರವನ್ನು ಸ್ಟನ್ ಮಾಡಿ ಅದರ ನಂತರ ಹಾಟ್ ಅಂಡ್ ಬೋಲ್ಡ್ ಪಾತ್ರಗಳಿಂದ ಬಾಲಿವುಡ್ ಅನ್ನು ಬೆಚ್ಚಿಬೀಳಿಸಿರುವ ದೀಪಿಕಾ ಪಡುಕೋಣೆ ಈಗ ಪುತ್ರಿ ದುವಾಳ ಲಾಲನೆ-ಪಾಲನೆಯಲ್ಲಿ ಬ್ಯುಸಿ. ಸಿನಿಮಾ ಆಫರ್ ಗಳನ್ನು ಪಕ್ಕಕ್ಕೆ ಸರಿಸಿ ಮಗಳ ಬೆಳವಣಿಗೆಯ ಪ್ರತಿಕ್ಷಣವನ್ನು ಆನಂದಿಸುತ್ತಿದ್ದಾರೆ. ಮಗಳು ದುವಾಳ ಮೊದಲ ಕ್ರಿಸ್ಮಸ್ ಹಬ್ಬದ ಫೋಟೋ ಮತ್ತು ಸಂಭ್ರಮವನ್ನು ಶೇರ್ ಮಾಡಿಕೊಂಡಿದ್ದಾರೆ.

ಇಷ್ಟು ದಿವಸ ಒಂದರಹಿಂದೊಂದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಬಾಲಿವುಡ್ ಹೈಪ್ರೊಫೈಲ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಈಗ ಮಗಳು ದುವಾ ದಾಟುವ ಪ್ರತಿ ಹಂತವನ್ನು ಸಂಭ್ರಮಿಸುತ್ತಿದ್ದಾರೆ. ಮೂರೂ ತಿಂಗಳವರೆಗೆ ಹೊರಜಗತ್ತಿಗೆ ಮಗಳ ಫೋಟೊ ತೋರಿಸದ ದಂಪತಿ ಮೊದಲಿಗೆ ಪುಟ್ಟ ಪಾದಗಳನ್ನು ಅಪ್ಲೋಡ್ ಮಾಡಿದ್ದರು. ನಂತರ ಪುಟಾಣಿ ಕೈಗಳನ್ನು ತೋರಿಸಿದ್ದರು. ಇದೀಗ ಮಗಳ ಮೊದಲ ಕ್ರಿಸ್ಮಸ್ ಹಬ್ಬದ ಸಡಗರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

 
 
 
 

 
 
 
 
 
 
 
 
 
 
 

A post shared by दीपिका पादुकोण (@deepikapadukone)

ಇದನ್ನೂ ಓದಿ- ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಬಿಟ್ಟು ಪ್ರತ್ಯೇಕವಾಗಿ ವಾಸ ಮಾಡುತ್ತಿರುವುದು ಏಕೆ ಗೊತ್ತಾ?

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದೀಪಿಕಾ, ರಣವೀರ್ ಮತ್ತು ದುವಾ ಎನ್ನುವ ಹೆಸರುಗಳನ್ನು ಬಳಸಿಕೊಂಡು ಮಾಡಿರುವ ಕ್ರಿಸ್ಮಸ್ ಅಲಂಕಾರದ ಫೋಟೋವನ್ನು ಶೇರ್ ಮಾಡಿದ್ದಾರೆ. ಕ್ಯೂಟ್ ಬೇಬಿ ಬಗ್ಗೆ ಉಕ್ಕಿಹರಿಯುವ ಬೆಟ್ಟದಷ್ಟು ಖುಷಿಯನ್ನು ‘My Heart Is Full’ ಎಂದು ಒಂದೇ ಸಾಲಿನಲ್ಲಿ ವರ್ಣಿಸಿದ್ದಾರೆ.

ಇದನ್ನೂ ಓದಿ- ವಿವೇಕ್‌ ಒಬೆರಾಯ್‌, ಸಲ್ಮಾನ್‌ ಖಾನ್‌ ಅಷ್ಟೆ ಅಲ್ಲ... ಈ ನಟನನ್ನು ಹುಚ್ಚಿಯಂತೆ ಪ್ರೀತಿಸಿದ್ದರಂತೆ ಐಶ್ವರ್ಯ ರೈ!

ಮದುವೆ ಆಗಿ ಮಗುವಾಗಿದ್ದರೂ ದೀಪಿಕಾ ಪಡುಕೋಣೆ ಬಗೆಗಿನ ಕ್ರೇಜ್ ಕಿಮ್ಮತ್ತು ಕಮ್ಮಿಯಾಗಿಲ್ಲ. ಅಂಥಾ ದೀಪಿಕಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದರೆ ಪ್ರತಿಕ್ರಿಯಿಸುವವರಿಗೆ ಬರವೇ? ಒಬ್ಬರು ಸಿಂಪಲ್ ಆಗಿ ‘ಸೋ ಬ್ಯೂಟಿಫುಲ್’ ಅಂತಾ ಬರೆದಿದ್ದಾರೆ. ಹಾಗೆ… ವೆರೈಟಿ ವೆರೈಟಿ ಕಾಮೆಂಟುಗಳನ್ನು ಮಾಡಲಾಗುತ್ತಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News