ಸರ್ಕಾರ ಪಂಚಮಸಾಲಿ ಸಮಾಜದ ಬೇಡಿಕೆಗೆ ಸ್ಪಂಧಿಸಿ ಮೀಸಲಾತಿ ಕೊಡುತ್ತೆ ಅನ್ನೋ ನಂಬಿಕೆ ಇದೆ. ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಹೋರಾಟದಿಂದ ಸ್ಪೂರ್ತಿಪಡೆದು ಹೋರಾಟ ಮಾಡುತ್ತಿದ್ದೇವೆ ಎಂದವರು ಇದೇ ವೇಳೆ ತಿಳಿಸಿದರು.
2A ಮೀಸಲಾತಿಗಾಗಿ ಹಾವೇರಿಯಲ್ಲಿ ಪಂಚಮಸಾಲಿ ಹೋರಾಟ
ಹಾವೇರಿಯಲ್ಲಿ ಇಂದು ಕೊನೆ ಹಂತದ 2A ಮೀಸಲಾತಿ ಹೋರಾಟ
ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರುವ ಧರಣಿ
ಹಾವೇರಯ ಮೊಟೇಬೆನ್ನೂರ ರಾಷ್ಟ್ರೀಯ ಹೆದ್ದಾರಿ ತಡೆದು ಧರಣಿ
ಪ್ರತಿಭಟನೆಯಲ್ಲಿ ಭಾಗಿಯಾಗಲಿರುವ ಪಂಚಮಸಾಲಿ ಮುಖಂಡರು
ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡಿ ಪ್ರೊಟೆಸ್ಟ್
2A Reservation For Panchamasali Community: ಕಾಟಾಚಾರಕ್ಕಾಗಿ ಮೀಸಲಾತಿ ಕೊಡಬಾರದು. ಬಿಜೆಪಿಗೆ ಮೀಸಲಾತಿ ಕೊಡುವುದು ಬೇಕಾಗಿರಲಿಲ್ಲ. ಅದಕ್ಕೇ ನ್ಯಾಯಾಲಯಕ್ಕೆ ಹೋದರೆ ಬಿದ್ದೋಗುವ ರೀತಿಯಲ್ಲಿ ಕಾಟಾಚಾರಕ್ಕೆ ಕೊಟ್ಟರು. ಇದರಿಂದ ಗೊಂದಲ ಸೃಷ್ಟಿಯಾಗಿದೆ. ಸಂವಿಧಾನ ತಜ್ಞರ ಜೊತೆಗೆ ಚರ್ಚಿಸಿ ಗೊಂದಲ ಬಗೆಹರಿಸಬೇಕಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿರು.
ಈ ಅಧಿವೇಶನ ಮುಗಿಯುವುದರೊಳಗೆ ನಮ್ಮ ಹೋರಾಟಕ್ಕೆ ಪ್ರತಿಫಲ ಬೇಕು. ನಮಗೆ 2A ಮೀಸಲಾತಿ ಕೊಡಲೇಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆಂದು ಸರ್ಕಾರಕ್ಕೆ ಜಯ ಮೃತ್ಯುಂಜಯ ಸ್ವಾಮೀಜಿ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಬೇಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಿಎಂ ನಿವಾಸದ ಮುಂದೆ ಬೃಹತ್ ಪ್ರತಿಭಟನೆ. ಹಾವೇರಿಯ ಶಿಗ್ಗಾಂವಿಯಲ್ಲಿರುವ ಸಿಎಂ ಮನೆ ಮುಂದೆ ಧರಣಿ. ಇಂದು ಸರ್ಕಾರಕ್ಕೆ ನಿರ್ಣಯ ತಿಳಿಸಲಿರುವ ಪಂಚಮಸಾಲಿ ಸಮಾಜ.
ನಮ್ಮ ಬೇಡಿಕೆ ಈಡೇರಿಸದಿದ್ದರೆ ಹಾವೇರಿ ಜಿಲ್ಲೆಯ ಶಿಗ್ಗಾಂವ್ನಲ್ಲಿರುವ ಸಿಎಂ ಬೊಮ್ಮಾಯಿ ಮನೆ ಮುಂದೆ ಪಂಚಮಸಾಲಿ ಸಮುದಾಯದವರು ಧರಣಿ ನಡೆಸಲಿದ್ದಾರೆ ಎಂದು ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.
2A Reservation For Panchamasali Community: ಮೀಸಲಾತಿ ನೀಡುವ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿಯವರು 24 ಗಂಟೆಯಲ್ಲಿ ಸ್ಪಷ್ಟ ನಿರ್ಧಾರ ತಿಳಿಸಬೇಕು ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.
ಪಂಚಮಸಾಲಿ ಸಮಾಜದಿಂದ 2Aಗಾಗಿ ಹೋರಾಟ. ಸವದತ್ತಿ ಪಟ್ಟಣದಲ್ಲಿ ನಾಳೆ ಸಮುದಾಯ ಸಮಾವೇಶ. ಮೀಸಲಾತಿ ಘೋಷಣೆ ಆಗದೇ ಇದ್ರೆ ಪಾದಯಾತ್ರೆ ಆರಂಭ. ಸವದತ್ತಿ, ಬೆಳವಡಿ, ಕಿತ್ತೂರು ಮಾರ್ಗವಾಗಿ ಪಾದಯಾತ್ರೆ. ಡಿಸೆಂಬರ್ 22ರಂದು ಸುವರ್ಣಸೌಧದ ಮುತ್ತಿಗೆಗೆ ಸಿದ್ಧತೆ.
ಪಂಚಮಸಾಲಿ ಎರಡಲ್ಲ ಮೂರು ಪೀಠಗಳನ್ನು ಮಾಡಿದ್ದು ನಾನೇ. ಸಮಸ್ತ ವೀರಶೈವ ಲಿಂಗಾಯತರಿಗೆ 2ಎ ಮೀಸಲಾತಿ ಅನ್ವಯವಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಕೊಪ್ಪಳದಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿ ಹೇಳಿದರು.
ಚೆನ್ನಮ್ಮ ಜಯಂತಿಯೊಳಗೆ ಸರ್ವಪಕ್ಷ ಸಭೆ ಕರೆಯಬೇಕು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಪ್ರಕಟಿಸಬೇಕು ಎಂದು ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ. ಇಲ್ಲವಾದ್ರೆ ಚೆನ್ನಮ್ಮ ಜಯಂತಿಯನ್ನು ಬಹಿಷ್ಕಾರ ಹಾಕಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಆಗಸ್ಟ್ 22ರಂದು ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಕೊಡದಿದ್ದರೆ 23ರಿಂದ ಸಿಎಂ ಮನೆ ಮುಂದೆ ಹೋರಾಟ ಮಾಡುತ್ತೇವೆ ಅಂತ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದ್ರು. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸಿಎಂ ಬೊಮ್ಮಾಯಿಯವರೇ ತಮ್ಮ ಮಾತನ್ನು ಉಳಿಸಿಕೊಳ್ಳಬೇಕು. ತಾವು ಹೇಳಿದಂತೆ 22ಕ್ಕೆ ಮೀಸಲಾತಿ ಘೋಷಣೆ ಮಾಡಿದ್ರೆ ನಾವು ಬಂದು ಸನ್ಮಾನ ಮಾಡ್ತೇವೆ. ಕೊಡದಿದ್ದರೆ ತಮ್ಮ ಮನೆ ಮುಂದೇನೆ ಹೋರಾಟ, ಧರಣಿ ಸತ್ಯಾಗ್ರಹ ಪ್ರಾರಂಭ ಮಾಡ್ತೀವಿ ಅಂತ ಹೇಳಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.