ಮುಖ್ಯಮಂತ್ರಿ Siddaramaiah ಅವರು ಬೋಯಿಂಗ್ ಇಂಡಿಯಾ ವತಿಯಿಂದ ಬೆಂಗಳೂರು ಹೈಟೆಕ್-ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ನಲ್ಲಿ ಆಯೋಜಿಸಿದ್ದ “ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರದ ಉದ್ಘಾಟನೆ” ಮತ್ತು “ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕೇಂದ್ರ ಹಾಗೂ ವಿಮಾನಯಾನ ಕ್ಷೇತ್ರದಲ್ಲಿ ಮಹಿಳೆಯರಿಗೆ ಉತ್ತೇಜನ ನೀಡುವ “ಬೋಯಿಂಗ್ ಸುಕನ್ಯಾ ಕಾರ್ಯಕ್ರಮ”ದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಗಳಾದ Narendra Modi ಹಾಗೂ ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಪಾಲ್ಗೊಂಡರು.
ಆಗಸ್ಟ್. 16, 2023 – ಬೋಯಿಂಗ್ [NYSE: BA] ಅರಿಜೋನಾದ ಮೆಸಾದಲ್ಲಿ ಭಾರತೀಯ ಸೇನೆಯ ಅಪಾಚೆಗಳ ಉತ್ಪಾದನೆಯನ್ನು ಪ್ರಾರಂಭಿಸುತ್ತಿದೆ. ಕಂಪನಿಯು ಭಾರತೀಯ ಸೇನೆಯ ಅವಶ್ಯಕತೆಗಳನ್ನು ಪೂರೈಸುವ ಒಟ್ಟು ಆರು AH-64E ಅಪಾಚೆಗಳನ್ನು ಒದಗಿಸಲಿದೆ.ಈ ವರ್ಷದ ಆರಂಭದಲ್ಲಿ, ಟಾಟಾ ಬೋಯಿಂಗ್ ಏರೋಸ್ಪೇಸ್ ಲಿಮಿಟೆಡ್ (TBAL) ಭಾರತದ ಹೈದರಾಬಾದ್ನಲ್ಲಿರುವ ತನ್ನ ಸುಧಾರಿತ ಸ್ಥಾವರದಿಂದ ಭಾರತೀಯ ಸೇನೆಯ ಮೊದಲ AH-64 ಅಪಾಚೆ ವಿಮಾನವನ್ನು ವಿತರಿಸಿತು.
Boeing CEO met PM Modi: ಭಾರತದ ವಾಣಿಜ್ಯಾತ್ಮಕ ವಾಯುಯಾನ ಮಾರುಕಟ್ಟೆಯ ತ್ವರಿತ ವಿಸ್ತರಣೆಯಲ್ಲಿ ಮತ್ತು ರಾಷ್ಟ್ರದ ರಕ್ಷಣಾ ಪಡೆಗಳ ಆಧುನೀಕರಣ ಮತ್ತು ಕಾರ್ಯಸಿದ್ಧವಾಗಿರುವಂತೆ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವುದು ಬೋಯಿಂಗ್ ಗೆ ಹೆಮ್ಮೆಯಾಗಿದೆ- ಬೋಯಿಂಗ್ ಅಧ್ಯಕ್ಷ ಹಾಗೂ ಸಿಇಓ ಡೇವಿಡ್ ಕಲ್ಹೌನ್
Air India Deal With Airbus And Boeing: ನಿನ್ನೆಯಷ್ಟೇ ಏರ್ ಬಸ್ ಜೊತೆಗೆ ಅತಿ ದೊಡ್ಡ ಒಪ್ಪಂದ ಮಾಡಿಕೊಂಡಿದ್ದ ಇಂಡಿಗೊ 500 ವಿಮಾನಗಳ ಖರೀದಿಗೆ ಆರ್ಡರ್ ನೀಡಿತ್ತು, ಇಂಡಿಗೊ ಬೆನ್ನಲ್ಲೇ ಇದೀಗ ಏರ್ ಇಂಡಿಯಾ 470 ವಿಮಾನಗಳ ಖರೀದಿಗಾಗಿ ಏರ್ ಬಸ್ ಹಾಗೂ ಬೋಯಿಂಗ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
ಭಾರತೀಯ ವಾಯುಪಡೆಯು 'ಬೈ ಗ್ಲೋಬಲ್ ಮತ್ತು ಮೇಕ್ ಇನ್ ಇಂಡಿಯಾ' ಯೋಜನೆಯಡಿಯಲ್ಲಿ 114 ಮಲ್ಟಿರೋಲ್ ಫೈಟರ್ ಏರ್ಕ್ರಾಫ್ಟ್ಗಳನ್ನು (MRFA) ಸ್ವಾಧೀನಪಡಿಸಿಕೊಳ್ಳುವ ಪ್ಲಾನ್ ಹೊಂದಿದೆ, ಅದರ ಅಡಿಯಲ್ಲಿ ಭಾರತೀಯ ಕಂಪನಿಗಳು ವಿದೇಶಿ ಮಾರಾಟಗಾರರೊಂದಿಗೆ ಪಾರ್ಟ್ನರ್ ಆಗಲು ಅವಕಾಶ ನೀಡಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.