ವಾಯುಸೇನೆಗೆ 1.5 ಲಕ್ಷ ಕೋಟಿ ವೆಚ್ಚದ 114 ಫೈಟರ್ ಜೆಟ್‌, ಇದ್ರಲ್ಲಿ 96 ಮೇಕ್ ಇನ್ ಇಂಡಿಯಾ!

ಭಾರತೀಯ ವಾಯುಪಡೆಯು 'ಬೈ ಗ್ಲೋಬಲ್ ಮತ್ತು ಮೇಕ್ ಇನ್ ಇಂಡಿಯಾ' ಯೋಜನೆಯಡಿಯಲ್ಲಿ 114 ಮಲ್ಟಿರೋಲ್ ಫೈಟರ್ ಏರ್‌ಕ್ರಾಫ್ಟ್‌ಗಳನ್ನು (MRFA) ಸ್ವಾಧೀನಪಡಿಸಿಕೊಳ್ಳುವ ಪ್ಲಾನ್ ಹೊಂದಿದೆ, ಅದರ ಅಡಿಯಲ್ಲಿ ಭಾರತೀಯ ಕಂಪನಿಗಳು ವಿದೇಶಿ ಮಾರಾಟಗಾರರೊಂದಿಗೆ ಪಾರ್ಟ್ನರ್ ಆಗಲು ಅವಕಾಶ ನೀಡಿವೆ.

Written by - Channabasava A Kashinakunti | Last Updated : Jun 12, 2022, 06:12 PM IST
  • ಮೋದಿ ನೇತೃತ್ವದ ಸರ್ಕಾರದ ಆತ್ಮನಿರ್ಭರ್ ಭಾರತ್ ಯೋಜನೆಗೆ ಭಾರಿ ಉತ್ತೇಜನ
  • ಭಾರತೀಯ ವಾಯುಪಡೆಯು 114 ಯುದ್ಧವಿಮಾನಗಳನ್ನು ತನ್ನ ಭತ್ತಳಿಕೆಗೆ ಸೇರಿಸಿಕೊಳ್ಳಲು ಪ್ಲಾನ್
  • ಅದರಲ್ಲಿ 96 ಫೈಟರ್ ಜೆಟ್‌ ವಿಮಾನಗಳನ್ನು ಭಾರತದಲ್ಲಿ ನಿರ್ಮಿಸಲಾಗುವುದು
ವಾಯುಸೇನೆಗೆ 1.5 ಲಕ್ಷ ಕೋಟಿ ವೆಚ್ಚದ 114 ಫೈಟರ್ ಜೆಟ್‌, ಇದ್ರಲ್ಲಿ 96 ಮೇಕ್ ಇನ್ ಇಂಡಿಯಾ! title=

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆತ್ಮನಿರ್ಭರ್ ಭಾರತ್ ಯೋಜನೆಗೆ ಭಾರಿ ಉತ್ತೇಜನದ ಮಧ್ಯೆ, ಭಾರತೀಯ ವಾಯುಪಡೆಯು 114 ಯುದ್ಧವಿಮಾನಗಳನ್ನು ತನ್ನ ಭತ್ತಳಿಕೆಗೆ ಸೇರಿಸಿಕೊಳ್ಳಲು ಪ್ಲಾನ್ ಮಾಡುತ್ತಿದೆ. ಅದರಲ್ಲಿ 96 ಫೈಟರ್ ಜೆಟ್‌ ವಿಮಾನಗಳನ್ನು ಭಾರತದಲ್ಲಿ ನಿರ್ಮಿಸಲಾಗುವುದು ಮತ್ತು ಉಳಿದ 18 ವಿದೇಶಿ ಮಾರಾಟಗಾರರಿಂದ ಆಮದು ಮಾಡಿಕೊಳ್ಳಲಾಗುವುದು ಎಂದು ತಿಳಿಸಿದೆ.

ಭಾರತೀಯ ವಾಯುಪಡೆಯು 'ಬೈ ಗ್ಲೋಬಲ್ ಮತ್ತು ಮೇಕ್ ಇನ್ ಇಂಡಿಯಾ' ಯೋಜನೆಯಡಿಯಲ್ಲಿ 114 ಮಲ್ಟಿರೋಲ್ ಫೈಟರ್ ಏರ್‌ಕ್ರಾಫ್ಟ್‌ಗಳನ್ನು (MRFA) ಸ್ವಾಧೀನಪಡಿಸಿಕೊಳ್ಳುವ ಪ್ಲಾನ್ ಹೊಂದಿದೆ, ಅದರ ಅಡಿಯಲ್ಲಿ ಭಾರತೀಯ ಕಂಪನಿಗಳು ವಿದೇಶಿ ಮಾರಾಟಗಾರರೊಂದಿಗೆ ಪಾರ್ಟ್ನರ್ ಆಗಲು ಅವಕಾಶ ನೀಡಿವೆ.

ಇದನ್ನೂ ಓದಿ : ಸೋನಿಯಾ-ರಾಹುಲ್‌ಗೆ ED ನೋಟಿಸ್ : ಇಂದು ದೇಶಾದ್ಯಂತ ಕಾಂಗ್ರೆಸ್ ಸುದ್ದಿಗೋಷ್ಠಿ! 

"ಇತ್ತೀಚೆಗೆ, ಭಾರತೀಯ ವಾಯುಪಡೆಯು ವಿದೇಶಿ ಮಾರಾಟಗಾರರೊಂದಿಗೆ ಸಭೆಗಳನ್ನು ನಡೆಸಿ, ಮೇಕ್ ಇನ್ ಇಂಡಿಯಾ ಯೋಜನೆಯನ್ನು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ವಿವರಿಸಿದೆ" ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಯೋಜನೆಯ ಪ್ರಕಾರ, ಆರಂಭಿಕ 18 ವಿಮಾನಗಳನ್ನು ಆಮದು ಮಾಡಿಕೊಂಡು ನಂತರ, ಮುಂದಿನ 36 ವಿಮಾನಗಳನ್ನು ದೇಶದೊಳಗೆ ತಯಾರಿಸಲಾಗುವುದು ಮತ್ತು ಪಾವತಿಗಳನ್ನು ಭಾಗಶಃ ವಿದೇಶಿ ಕರೆನ್ಸಿ ಮತ್ತು ಭಾರತೀಯ ಕರೆನ್ಸಿಯಲ್ಲಿ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಕೊನೆಯ 60 ವಿಮಾನಗಳು ಭಾರತೀಯ ಪಾಲುದಾರರ ಮುಖ್ಯ ಜವಾಬ್ದಾರಿಯಾಗಿದೆ ಮತ್ತು ಸರ್ಕಾರವು ಭಾರತೀಯ ಕರೆನ್ಸಿಯಲ್ಲಿ ಮಾತ್ರ ಪಾವತಿಗಳನ್ನು ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ.

ಭಾರತೀಯ ಕರೆನ್ಸಿಯಲ್ಲಿ ಪಾವತಿಯು ಯೋಜನೆಯಲ್ಲಿ ಶೇ. 60 ಕ್ಕಿಂತ ಹೆಚ್ಚು 'ಮೇಕ್-ಇನ್-ಇಂಡಿಯಾ' ಅಡಿ ನಿರ್ಮಿಸಲಾಗುತ್ತದೆ. ಇದು ಮಾರಾಟಗಾರರಿಗೆ ಸಹಾಯ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ.

ಬೋಯಿಂಗ್, ಲಾಕ್ಹೀಡ್ ಮಾರ್ಟಿನ್, ಸಾಬ್, ಮಿಗ್, ಇರ್ಕುಟ್ ಕಾರ್ಪೊರೇಷನ್ ಮತ್ತು ಡಸಾಲ್ಟ್ ಏವಿಯೇಷನ್ ​​ಸೇರಿದಂತೆ ಜಾಗತಿಕ ವಿಮಾನ ತಯಾರಕರು ಟೆಂಡರ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ನೆರೆಯ ಪ್ರತಿಸ್ಪರ್ಧಿಗಳಾದ ಪಾಕಿಸ್ತಾನ ಮತ್ತು ಚೀನಾದ ಮೇಲೆ ತನ್ನ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳಲು ಭಾರತೀಯ ವಾಯುಪಡೆಯು ಈ 114 ಫೈಟರ್ ಜೆಟ್‌ಗಳನ್ನು ಹೆಚ್ಚು ಅವಲಂಬಿಸಬೇಕಾಗಿದೆ.

2020 ರಲ್ಲಿ ಪ್ರಾರಂಭವಾದ ಲಡಾಖ್ ಬಿಕ್ಕಟ್ಟಿನ ಸಂದರ್ಭದಲ್ಲಿ 36 ರಫೇಲ್ ವಿಮಾನಗಳು ತುರ್ತು ಆದೇಶದ ಅಡಿಯಲ್ಲಿ ಚೀನಿಯrige ಭಯ ಬೀಳಿಸಲು ಸಹಾಯ ಮಾಡಿತು ಆದರೆ ಎಷ್ಟು  ವಿಮಾನಗಳು ಸಾಕಾಗುವುದಿಲ್ಲ ಮತ್ತು ಅದಕ್ಕೆ ಹೆಚ್ಚಿನ ಸಾಮರ್ಥ್ಯದ ಅಗತ್ಯವಿರುತ್ತದೆ ಎಂದು ತಿಳಿದು ಈ ಕೆಲಸಕ್ಕೆ ಮುಂದಾಗಿವೆ.

ಪಡೆ ಈಗಾಗಲೇ 83 LCA Mk 1A ವಿಮಾನಗಳಿಗೆ ಆರ್ಡರ್ ಮಾಡಿದೆ ಆದರೆ ಹೆಚ್ಚಿನ ಸಂಖ್ಯೆಯ MiG ಸರಣಿಯ ವಿಮಾನಗಳು ಹಂತಹಂತವಾಗಿ ಸ್ಥಗಿತಗೊಂಡಿವೆ ಅಥವಾ ಅವುಗಳ ಕೊನೆಯ ಹಂತದಲ್ಲಿರುವುದರಿಂದ ಇನ್ನೂ ಹೆಚ್ಚಿನ ಸಂಖ್ಯೆಯ ಸಾಮರ್ಥ್ಯದ ವಿಮಾನಗಳ ಅಗತ್ಯವಿದೆ.

ಐದನೇ ತಲೆಮಾರಿನ ಸುಧಾರಿತ ಮಧ್ಯಮ ಯುದ್ಧ ವಿಮಾನ ಯೋಜನೆಯು ತೃಪ್ತಿದಾಯಕ ವೇಗದಲ್ಲಿ ಮುಂದುವರಿಯುತ್ತಿದೆ ಆದರೆ ಕಾರ್ಯಾಚರಣೆಯ ಪಾತ್ರದಲ್ಲಿ ಸೇರ್ಪಡೆಗೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು!

ಐಎಎಫ್ ತನ್ನ ಫೈಟರ್ ಜೆಟ್ ಅವಶ್ಯಕತೆಗೆ ವೆಚ್ಚ-ಪರಿಣಾಮಕಾರಿ ಪರಿಹಾರವನ್ನು ಹುಡುಕುತ್ತಿದೆ ಏಕೆಂದರೆ ಅದು ಕಾರ್ಯಾಚರಣೆಯ ವೆಚ್ಚದಲ್ಲಿ ಕಡಿಮೆ ಮತ್ತು ಸೇವೆಗೆ ಹೆಚ್ಚಿನ ಸಾಮರ್ಥ್ಯವನ್ನು ನೀಡುವ ವಿಮಾನಗಳ ಬಗ್ಗೆ ಗಮನ ಹರಿಸಲಾಗುತ್ತಿದೆ.

IAF ರಫೇಲ್ ಯುದ್ಧ ವಿಮಾನಗಳ ಕಾರ್ಯಾಚರಣೆಯ ಲಭ್ಯತೆಯ ಬಗ್ಗೆ ಹೆಚ್ಚು ತೃಪ್ತವಾಗಿದೆ ಮತ್ತು ಅದರ ಭವಿಷ್ಯದ ವಿಮಾನಗಳಲ್ಲಿ ಇದೇ ರೀತಿಯ ಸಾಮರ್ಥ್ಯವನ್ನು ಭಾರತೀಯ ವಾಯುವು ಸೇನೆ ಬಯಸುತ್ತದೆ ಎಂದು ಹೇಳಲಾಗುತ್ತಿದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News