Air India Deal With Airbus And Boeing: ಇಂಡಿಗೋ ಬಳಿಕ ಇದೀಗ ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಕೂಡ 470 ಹೊಸ ವಿಮಾನಗಳನ್ನು ಖರೀದಿಸಲು ಏರ್‌ಬಸ್-ಬೋಯಿಂಗ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಏರ್ ಶೋ ವೇಳೆ ಏರ್ ಇಂಡಿಯಾ ಈ ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್, ಈ ಐತಿಹಾಸಿಕ ನಿರ್ಧಾರವು ದೀರ್ಘಾವಧಿಯಲ್ಲಿ ಏರ್ ಇಂಡಿಯಾದ ಬೆಳವಣಿಗೆ ಮತ್ತು ಯಶಸ್ಸನ್ನು ಹೆಚ್ಚಿಸಲು ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ. ಈ ಪಾಲುದಾರಿಕೆಯ ಮೂಲಕ ನಾವು ಆಧುನಿಕ ವಿಮಾನಯಾನವನ್ನು ಜಗತ್ತಿಗೆ ಪರಿಚಯಿಸಲು ಸಾಧ್ಯವಾಗಲಿದೆ ಎಂಬ ವಿಶ್ವಾಸ ನಾಮಗಿದೆ ಎಂದು ಅವರು ಹೇಳಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ, ಏರ್ ಇಂಡಿಯಾ 470 ವಿಮಾನಗಳನ್ನು ಖರೀದಿಸುವುದಾಗಿ ಘೋಷಿಸಿತ್ತು, ವಿಸ್ತರಣೆಯ ತನ್ನ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ದ ಕಂಪನಿ ಇದೀಗ ಈ $70 ಬಿಲಿಯನ್ ಒಪ್ಪಂದದ ಅಡಿಯಲ್ಲಿ ವಿಮಾನಗಳನ್ನು ಖರೀದಿಸಲು ಬೋಯಿಂಗ್ ಮತ್ತು ಏರ್‌ಬಸ್‌ನೊಂದಿಗೆ ಪ್ಯಾರಿಸ್ ಏರ್ ಶೋ ಸಮಯದಲ್ಲಿ ಸಹಿ ಹಾಕಿದೆ.
ಏರ್ ಇಂಡಿಯಾ ಏರ್‌ಬಸ್‌ನಿಂದ 250 ಮತ್ತು ಬೋಯಿಂಗ್‌ನಿಂದ 220 ವಿಮಾನಗಳನ್ನು ಖರೀದಿಸಲಿದೆ. ಏರ್ ಇಂಡಿಯಾ 140 A320neo ಮತ್ತು 70 A321neo ವಿಮಾನಗಳಿಗೆ ಒಪ್ಪಂದ ಮಾಡಿಕೊಂಡಿದೆ. ಇದರ ಹೊರತಾಗಿ, 34 A350-100 ಮತ್ತು ಆರು A350-900 ವೈಡ್-ಬಾಡಿ ಜೆಟ್‌ಗಳನ್ನು ಖರೀದಿಸಲಿದೆ. ಏರ್‌ಇಂಡಿಯಾ ಫೆಬ್ರವರಿಯಲ್ಲಿ ಏರ್ ಬಸ್ ನೊಂದಿಗೆ ಲೆಟರ್ ಆಫ್ ಇಂಟೆಂಟ್ ಗೆ ಸಹಿ ಹಾಕಿತ್ತು.
190 737 MAX ಗಳ ಜೊತೆಗೆ, ಬೋಯಿಂಗ್ ಇಪ್ಪತ್ತು 787 ಡ್ರೀಮ್‌ಲೈನರ್‌ಗಳು ಮತ್ತು ಹತ್ತು 777X ಜೆಟ್‌ಗಳನ್ನು ಖರೀದಿಸಲಿದೆ. ಅಲ್ಲದೆ, ಐವತ್ತು 737 MAXಗಳು ಮತ್ತು ಇಪ್ಪತ್ತು 787 ಡ್ರೀಮ್‌ಲೈನರ್‌ಗಳು ಸೇರಿದಂತೆ ಹೆಚ್ಚುವರಿ 70 ವಿಮಾನಗಳನ್ನು ಖರೀದಿಸುವ ಆಯ್ಕೆಯನ್ನು ಏರ್‌ಲೈನ್ಸ್ ಹೊಂದಿದೆ. ದಕ್ಷಿಣ ಏಷ್ಯಾ ವಲಯದಲ್ಲಿ ಬೋಯಿಂಗ್‌ಗೆ ಇದು ಅತಿ ದೊಡ್ಡ ಆರ್ಡರ್ ಆಗಿದೆ.
ಇದನ್ನೂ ಓದಿ-July 1 ರಿಂದ ಚಪ್ಪಲ್-ಸ್ಯಾಂಡಲ್ ಗಳಿಗೆ ಈ ನಿಯಮಗಳು ಅನ್ವಯಿಸಲಿವೆ ಎಚ್ಚರ!
ಒಪ್ಪಂದಕ್ಕೆ ಸಹಿ ಹಾಕಿದ ಏರ್ ಇಂಡಿಯಾ ಎಂಡಿ-ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್, ಫ್ಲೀಟ್ ನವೀಕರಣದೊಂದಿಗೆ ವಿಸ್ತರಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಮೂಲಕ, ಮುಂದಿನ ಐದು ವರ್ಷಗಳಲ್ಲಿ ಏರ್ ಇಂಡಿಯಾ ತನ್ನ ಎಲ್ಲಾ ನೆಟ್‌ವರ್ಕ್ ಮಾರ್ಗಗಳಲ್ಲಿ ಅತ್ಯಂತ ಆಧುನಿಕ ಮತ್ತು ಕಡಿಮೆ ಇಂಧನ ದಕ್ಷತೆಯನ್ನು ಹೊಂದಿದ ವಿಮಾನಗಳನ್ನು ನಿರ್ವಹಿಸುವ ವಿಮಾನಯಾನ ಸಂಸ್ಥೆಯಾಗಲಿದೆ ಎಂದು ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ