ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ನಟ ರಜನಿಕಾಂತ್, ಅಪ್ಪು ಸಾಧಾರಣ ವ್ಯಕ್ತಿಯಲ್ಲ, ಅಪಾರವಾದದ್ದನ್ನು ಸಾಧಿಸಿದ್ದಾರೆ. ಕಲಿಯುಗಕ್ಕೆ ಪುನೀತ್ ದೇವರ ಮಗು. ಮಾರ್ಕಾಂಡೇಯರ ಸಾಲಿಗೆ ಸೇರುವವರು ಅವರು ಎಂದ್ರು. 1979 ರಲ್ಲಿ ಶಬರಿ ಮಲೆ ಯಾತ್ರೆ ವೇಳೆ ತಾವು ಪುನೀತ್ ರಾಜ್ ಕುಮಾರ್ ಅವರನ್ನು ಮೊದಲ ಬಾರಿ ನೋಡಿದ್ದನ್ನು ರಜನಿಕಾಂತ್ ಸ್ಮರಿಸಿಕೊಂಡರು.
ಅಪ್ಪು ಅಗಲಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಅಪ್ಪು ಸಮಾಧಿ ಸ್ಥಳಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಕುಟುಂಬ ಸದಸ್ಯರ ಜೊತೆ ಭೇಟಿ ನೀಡಿದ್ದು ಅಪ್ಪು ಸಮಾಧಿಗೆ ನಮನ ಸಲ್ಲಿಸಿದ್ದಾರೆ..
ಪುನೀತ್ ರಾಜ್ಕುಮಾರ್ ಸಮಾಧಿ ಸ್ಥಳದಲ್ಲಿ ಇದ್ದ ಮಹಿಳೆಯೊಬ್ಬರು ಅಪ್ಪು ನೆನೆದು ಕಣ್ಣೀರಿಟ್ಟಿದ್ದಾರೆ. ಇನ್ನು ಅಭಿಮಾನಿಗಳು ಕೈಯಲ್ಲಿ ಅಪ್ಪು ಫೋಟೋ ಹಿಡಿದು ಅಪ್ಪುಗೆ ನಮನ ಸಲ್ಲಿಸಿದ್ದಾರೆ..
ಯುವರತ್ನ, ನಗುಮೊಗದ ದೊರೆ ಪುನೀತ್ ರಾಜಕುಮರ್ ಅವರು ನಮ್ಮಿಂದ ಅಗಲಿ ಇಂದಿಗೆ ಒಂದು ವರ್ಷ ತುಂಬಿದೆ. ದೈಹಿಕವಾಗಿ ಅಪ್ಪು ನಮ್ಮಜೊತೆ ಇಲ್ಲವೆಂದರೂ ಕನ್ನಡಾಭಿಮಾನಿಗಳ ಹೃದಯಲ್ಲಿ ಅಪ್ಪು ಸದಾ ಅಮರ. ಇನ್ನು ಕನ್ನಡ ಕಂದನ ಪುಣ್ಯಸ್ಮರಣೆ ಪ್ರಯುಕ್ತ ಅಶ್ವಿನಿ ಅವರು ಎಲ್ಲರಿಗೂ ಒಂದು ಪತ್ರ ಬರೆದಿದ್ದಾರೆ.
ಪುನೀತ್ ರಾಜ್ ಕುಮಾರ್ , ಇದು ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಉಳಿದುಕೊಳ್ಳುವ ಹೆಸರು. ನಟನೆ , ವ್ಯಕ್ತಿತ್ವ ಮತ್ತು ನಿಸ್ವಾರ್ಥ ಸಮಾಜಮುಖಿ ಸೇವೆಗಳಿಂದ ಜನಮಾನಸದಲ್ಲಿ ಅಚ್ಚಳಿಯದೆ ನೆಲೆಸಿರುವ ಈ ಹಸನ್ಮುಖಿ ನಮ್ಮಲ್ಲೆರನ್ನು ಅಗಲಿ ಇಂದಿಗೆ ಒಂದು ವರ್ಷವೇ ಆಗಿದೆ. ಇಡೀ ಭಾರತೀಯ ಚಿತ್ರರಂಗಕ್ಕೆ ಮರೆಯಲಾಗದಂತ ದುಃಖವಾಗಿ ಪರಿಣಮಿಸಿ ಕಣ್ಣೀರಾಗಿಸಿರುವ ಈ ದೊಡ್ಮನೆ ಕಂದ ಇಂದಿಗೂ ಎಲ್ಲರ ಮನಸಿನಲ್ಲಿ ಮುದ್ದಿನ ಮಗುವಾಗಿದ್ದಾರೆ.
Gandhada Gudi : ಪುನೀತ್ ರಾಜ್ಕುಮಾರ್ ಅವರ ‘ಗಂಧದ ಗುಡಿ’ ಸಿನಿಮಾ ವಿಶ್ವದಾದ್ಯಂತ ಇಂದು ಬಿಡುಗಡೆ ಆಗಿದೆ. ಗಂಧದ ಗುಡಿಯ ʻಪರಮಾತ್ಮʼನಿಗೆ ʻಅಭಿʼಮಾನಿಗಳಿಂದ ಕ್ಷೀರಾಭಿಷೇಕ ಕೂಡ ನಡೆಯಿತು.
Gandhada Gudi : ಅಪ್ಪು ಅಭಿಮಾನಿಗಳ ಸಂಭ್ರಮಕ್ಕೆ ರಾಘಣ್ಣ ಸಾಥ್ ನೀಡಿದ್ದಾರೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಅಪ್ಪು ಅಭಿಮಾನಿಗಳ ಜೊತೆ ತಮಟೆ ಸದ್ದಿಗೆ ಹೆಜ್ಜೆ ಹಾಕಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.