Gandhada Gudi: ತಮ್ಮ ಊಟದ ತಟ್ಟೆ ತಾವೇ ತೊಳೆಯುತ್ತಿದ್ದ ಪುನೀತ್‌! ಇದು ʻರಾಜರತ್ನʼನ ಸರಳತೆ

Gandhada Gudi: ಚಿತ್ರೀಕರಣದ ಸಮಯದಲ್ಲಿ ಐದಾರು ಸಹಾಯಕರೂ ಅಪ್ಪು ಜೊತೆ ಇದ್ದರಂತೆ. ಆದರೆ ಚಿತ್ರೀಕರಣದ ವೇಳೆ ತಾವು ಊಟ ಮಾಡಿದ ತಟ್ಟೆಯನ್ನು ಅಪ್ಪು ತಾವೇ ತೊಳೆಯುತ್ತಿದ್ದರಂತೆ. 

Written by - Chetana Devarmani | Last Updated : Oct 28, 2022, 04:53 PM IST
  • ಪುನೀತ್ ರಾಜ್‌ಕುಮಾರ್ ಅಭಿನಯದ ಗಂಧದ ಗುಡಿ
  • ಕರ್ನಾಟಕದ ವನ್ಯಜೀವಿಗಳ ಕುರಿತಾದ ಡಾಕ್ಯುಮೆಂಟ್-ಫೀಚರ್
  • ತಮ್ಮ ಊಟದ ತಟ್ಟೆ ತಾವೇ ತೊಳೆಯುತ್ತಿದ್ದ ಪುನೀತ್‌
Gandhada Gudi: ತಮ್ಮ ಊಟದ ತಟ್ಟೆ ತಾವೇ ತೊಳೆಯುತ್ತಿದ್ದ ಪುನೀತ್‌! ಇದು ʻರಾಜರತ್ನʼನ ಸರಳತೆ title=
ಗಂಧದ ಗುಡಿ

Gandhada Gudi: ಪುನೀತ್ ರಾಜ್‌ಕುಮಾರ್ ಅಭಿನಯದ ಗಂಧದ ಗುಡಿ, ಕರ್ನಾಟಕದ ವನ್ಯಜೀವಿಗಳ ಕುರಿತಾದ ಡಾಕ್ಯುಮೆಂಟ್-ಫೀಚರ್ ಇಂದು ಥಿಯೇಟರ್‌ಗಳನ್ನು ತಲುಪಿದೆ. ಗಂಧದಗುಡಿಗೆ ಅಪ್ಪು ಅಭಿಮಾನಿಗಳು ಸಂಭ್ರಮದಿಂದ ಸ್ವಾಗತ ಮಾಡಿದರು. ಕರುನಾಡಿನ ವನ್ಯಸಿರಿಯನ್ನು ಈ ಸಿನಿಮಾದಲ್ಲಿ ಕಣ್ಣಿಗೆ ಕಟ್ಟುವಂತೆ ಸೆರೆ ಹಿಡಿಯಲಾಗಿದೆ. ಆಗುಂಬೆಯಲ್ಲೂ ಗಂಧದ ಗುಡಿಯ ಚಿತ್ರೀಕರಣವಾಗಿತ್ತು. ಆಗುಂಬೆಯಲ್ಲಿ ಚಿತ್ರೀಕರಣದ ವೇಳೆ 12 ಅಡಿ ಉದ್ದದ ಕಾಳಿಂಗ ಸರ್ಪ ನೋಡೋಕೆ ಬರೋಬ್ಬರಿ 3 ದಿನ ಕಾಡಿನ ಮಧ್ಯೆ ಪುನೀತ್‌ ರಾಜ್‌ಕುಮಾರ್‌ ಕಾದಿದ್ದರಂತೆ. 

ಇದನ್ನೂ ಓದಿ : ಕಾಲೇಜು ದಿನಗಳಲ್ಲಿ ಸಮಂತಾರನ್ನು ಪ್ರೀತಿಸುತ್ತಿದ್ರಂತೆ ವಿಜಯ್ ದೇವರಕೊಂಡ! ಶಾಕಿಂಗ್‌ ಟ್ವೀಟ್‌

ಚಿತ್ರೀಕರಣದ ಸಮಯದಲ್ಲಿ ಐದಾರು ಸಹಾಯಕರೂ ಅಪ್ಪು ಜೊತೆ ಇದ್ದರಂತೆ. ಆದರೆ ಚಿತ್ರೀಕರಣದ ವೇಳೆ ತಾವು ಊಟ ಮಾಡಿದ ತಟ್ಟೆಯನ್ನು ಅಪ್ಪು ತಾವೇ ತೊಳೆಯುತ್ತಿದ್ದರಂತೆ. ಅನೇಕ ಬಾರಿ ಪುನೀತ್‌ ಸರಳತೆ ಮೆರೆದಿದ್ದಾರೆ. ಎಷ್ಟೇ ದೊಡ್ಡ ಕಲಾವಿದನಾದರೂ ಪುನೀತ್‌ ರಾಜ್‌ಕುಮಾರ್‌ ಸರಳತೆ, ವಿನಯತೆ ಎಲ್ಲರಿಗೂ ಮಾದರಿ. 

ಇದನ್ನೂ ಓದಿ : WATCH : ಫ್ಯಾನ್ಸ್‌ ಜೊತೆ ಕುಣಿದು ಕುಪ್ಪಳಿಸಿದ ರಾಘವೇಂದ್ರ ರಾಜ್‌ಕುಮಾರ್‌

ಪುನೀತ್‌ ರಾಜ್‌ಕುಮಾರ್‌ ಅವರ ‘ಗಂಧದ ಗುಡಿ’ ಸಿನಿಮಾ ವಿಶ್ವದಾದ್ಯಂತ ಇಂದು ಬಿಡುಗಡೆ ಆಗಿದೆ. ಎಲ್ಲೆಡೆ ಅಪ್ಪು ಕಟೌಟ್‌ಗಳು ತಲೆಎತ್ತಿ ನಿಂತಿವೆ. ದೇವಸ್ಥಾನಗಳಲ್ಲಿ ಪೂಜೆ, ಪುನಸ್ಕಾರ ನಡೆಯುತ್ತಿದ್ದರೆ, ಅಪ್ಪು ಸಮಾಧಿ ಕಂಠೀರವ ಸ್ಟುಡಿಯೋದಲ್ಲಿಯೂ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಗಂಧದ ಗುಡಿಯನ್ನು ನೋಡಿ ಅನೇಕರು ಭಾವುಕರಾಗಿದ್ದಾರೆ. ಸಿನಿಮಾ ನೋಡಿದ ಸಾಕಷ್ಟು ಸೆಲೆಬ್ರಿಟಿಗಳು ಪುನೀತ್‌ ಬಗ್ಗೆ ಮಾತನಾಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News