ಕಾಂಗ್ರೆಸ್ ಪಕ್ಷದ ಪಟ್ನಾ ಸಾಹಿಬ್ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಮತ್ತು ಲಕ್ನೋ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿರುವ ಪತ್ನಿ ಪೂನಮ್ ಸಿನ್ಹಾ ಪುತ್ರರಾದ ಲವ್ ಮತ್ತು ಕುಶ್ ಅವರು ಕಡಮ್ವಾನ್ನಲ್ಲಿರುವ ಸೇಂಟ್ ಸೆವೆರಿನ್ಸ್ ಶಾಲೆಯಲ್ಲಿ ಮತ ಚಲಾಯಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಅಭ್ಯರ್ಥಿಯಾಗಿ ಲಕ್ನೋದಿಂದ ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಸ್ಪರ್ಧಿಸುತ್ತಿದ್ದಾರೆ. ಈಗ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಪತಿ ಶತ್ರುಘ್ನ ಸಿನ್ಹಾ ಕುಟುಂಬದ ಸದಸ್ಯರಿಗೆ ಬೆಂಬಲಿಸುವುದು ತಮ್ಮ ಕರ್ತವ್ಯವೆಂದು ತಿಳಿಸಿದ್ದಾರೆ.
ಶತ್ರುಘ್ನ ಸಿನ್ಹಾ ಅವರು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಬಿಟ್ಟು ಕಾಂಗ್ರೆಸ್ ಗೆ ಎಪ್ರಿಲ್ 6 ರಂದು ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ.ಈಗ ತಂದೆ ನಿರ್ಧಾರಕ್ಕೆ ಮಗಳು ಸೋನಾಕ್ಷಿ ಸಿನ್ಹಾ ಈಗ ಬೆಂಬಲ ವ್ಯಕ್ತಪಡಿಸಿದ್ದಾಳೆ.
ರಾಹುಲ್ ಗಾಂಧಿ ವಯಸ್ಸಿನಲ್ಲಿ ನನಗಿಂತ ಚಿಕ್ಕವರು, ಆದರೆ ಅವರು ದೇಶಕ್ಕೆ ಪ್ರಸಿದ್ಧ ನಾಯಕರಾಗಿ ಹೊರಹೊಮ್ಮಿದ್ದಾರೆ. ನಾನು ಜವಾಹರಲಾಲ್ ನೆಹರು ಮತ್ತು ಮಹಾತ್ಮಾ ಗಾಂಧಿ ಕುಟುಂಬದ ಬೆಂಬಲಿಗ- ಶತ್ರುಘ್ನ ಸಿನ್ಹಾ
ಬಿಜೆಪಿ ಸಂಸದನಾಗಿದ್ದುಕೊಂಡೇ ಪ್ರಧಾನಿ ಮೋದಿ ವಿರುದ್ಧ ಸಮರ ಸಾರಿದ್ದ ಹಿರಿಯ ನಾಯಕ ಶತ್ರುಘ್ನ ಸಿನ್ಹಾಗೆ ಈ ಬಾರಿ ಪಾಟ್ನಾ ಸಾಹಿಬ್ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡುತ್ತಿಲ್ಲ ಎಂದು ಸುದ್ದಿ ಮೂಲಗಳು ತಿಳಿಸಿವೆ.
ನಟ ಹಾಗೂ ರಾಜಕಾರಣಿ ಅದೃಷ್ಟವಶಾತ್ ತಮ್ಮ ಹೆಸರು ಮೀಟೂ ಚಳುವಳಿಯಲ್ಲಿ ಬರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.ಇದೇ ವೇಳೆ ಸ್ಪಷ್ಟಪಡಿಸಿದ ಅವರು ಮೀಟೂ ಚಳುವಳಿಯನ್ನು ವ್ಯಂಗ್ಯ ಮಾಡುತ್ತಿಲ್ಲ ಆದ್ದರಿಂದ ತಮ್ಮ ಹೇಳಿಕೆಯನ್ನು ಸರಿಯಾದ ವಿಡಂಬನೆಯಲ್ಲಿ ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಬಿಜೆಪಿ ಎಚ್ಚರಿಕೆಯ ನಡುವೆಯೂ ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜೀ ಆಯೋಜಿಸಿದ್ದ ಸಂಯುಕ್ತ ಭಾರತಕ್ಕಾಗಿ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಮೂಲಕ ಶತ್ರುಘ್ನ ಸಿನ್ಹಾ ಈಗ ಮತ್ತೆ ತಮ್ಮ ಪಕ್ಷದ ವಿರುದ್ದವೇ ಕಿಡಿ ಕಾರಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.