ಶತ್ರುಘ್ನ ಸಿನ್ಹಾ ಕಾಂಗ್ರೆಸ್ ಸೇರ್ಪಡೆ, ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಸ್ಪರ್ಧೆ ಸಾಧ್ಯತೆ

ಬಿಹಾರದ ಪಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಿಂದಲೇ ಸಿನ್ಹಾ ಸ್ಪರ್ಧಿಸಬಹುದು ಎನ್ನಲಾಗಿದೆ.

Last Updated : Apr 6, 2019, 01:17 PM IST
ಶತ್ರುಘ್ನ ಸಿನ್ಹಾ ಕಾಂಗ್ರೆಸ್ ಸೇರ್ಪಡೆ, ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಸ್ಪರ್ಧೆ ಸಾಧ್ಯತೆ title=
Pic Courtesy: ANI

ನವದೆಹಲಿ: ಬಿಜೆಪಿಗೆ ವಿದಾಯ ಹೇಳಿದ್ದ ಪಾಟ್ನಾ ಸಾಹಿಬ್ ಸಂಸದ ಶತ್ರುಘ್ನ ಸಿನ್ಹಾ ನಿರೀಕ್ಷೆಯಂತೆ ಇಂದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದ ಸಿನ್ಹಾ, ಎಪ್ರಿಲ್ 6ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರುವುದಾಗಿ ಘೋಷಿಸಿದ್ದರು.

ಅದರಂತೆ ಇಂದು ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ  ಕೆ.ಸಿ. ವೇಣುಗೋಪಾಲ್, ಶಕ್ತಿ ಸಿಂಗ್ ಗೋಹಿಲ್, ರಂದೀಪ್ ಸುರ್ಜೆವಾಲಾ, ಬಿಹಾರ ಕಾಂಗ್ರೆಸ್ ಅಧ್ಯಕ್ಷ ಮದನ್ ಮೋಹನ್ ಝಾ, ಅಖಿಲೇಶ್ ಸಿಂಗ್ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಸೇರ್ಪಡೆಗೂ ಮುನ್ನ ಟ್ವೀಟ್ ಮಾಡಿರುವ  ಸಿನ್ಹಾ, ಭಾರವಾದ ಮನಸ್ಸಿನಿಂದ ತಾವು ಬಿಜೆಪಿ ತೊರೆದಿರುವುದಾಗಿ ಹೇಳಿಕೊಂಡಿದ್ದಾರೆ.

ಶತ್ರುಘ್ನ ಸಿನ್ಹಾ ಕಾಂಗ್ರೆಸ್ ಸೇರುವ ಮೊದಲು ಟ್ವೀಟ್ ಮಾಡಿದ್ದ ಶಕ್ತಿ ಸಿಂಗ್ ಗೋಹಿಲ್, "ಸತ್ಯದಲ್ಲಿ ವಿಶ್ವಾಸವಿರುವವರು, ಆತ್ಮದ ಧ್ವನಿಯೊಂದಿಗೆ ಮಾತನಾಡುವವರು ಯಾವುದೇ ಒತ್ತಡದಲ್ಲಿ ಬದುಕಲಾರರು ಎಂದು ನಾನು ದೃಢವಾಗಿ ನಂಬುತ್ತೇನೆ. ಶತ್ರುಘ್ನ ಸಿನ್ಹಾ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಸ್ವ ಇಚ್ಛೆಯಿಂದ ನಿರ್ಣಯಿಸಿದ್ದು, ಮುಂಬರುವ ದಿನಗಳಲ್ಲಿ ಪಕ್ಷದ ಸ್ಟಾರ್ ಪ್ರಚಾರಕರಾಗಿ ಕೆಲಸ ಮಾಡಲಿದ್ದಾರೆ" ಎಂದು ಬರೆದಿದ್ದರು.

ಎಂಥದೇ ಪರಿಸ್ಥಿತಿಯಿದ್ದರೂ ಪಾಟ್ನಾ ಸಾಹಿಬ್‌ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಹಲವು ಬಾರಿ ಶತ್ರುಘ್ನ ಸಿನ್ಹಾ ತಿಳಿಸಿದ್ದು, ಬಿಹಾರದ ಪಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಿಂದಲೇ ಸಿನ್ಹಾ ಸ್ಪರ್ಧಿಸಬಹುದು ಎನ್ನಲಾಗಿದೆ. ಬಿಜೆಪಿ ಪಾಟ್ನಾ ಸಾಹಿಬ್‌ ಕ್ಷೇತ್ರದಿಂದ ಕೇಂದ್ರ ಸಚಿವ ರವಿಶಂಕರ್‌ ಅವರನ್ನು ಕಣಕ್ಕಿಳಿಸಿದೆ.
 

Trending News